ನಮ್ಮ ಕಾರ್ಯಕರ್ತನ ವಾಹನ ಹಿಡಿಯಬಾರದು, ತೊಂದ್ರೆ ಕೊಡಬಾರದು ಅಂತಾ ಬಿಜೆಪಿ ಶಾಸಕ ರಾಮಪ್ಪ ಲಮಾಣಿಯವರ ಅಧಿಕೃತ ಲೇಟರ್ ಹೆಡ್ ನಲ್ಲಿ ಬರೆಯಲಾಗಿದೆ. ಇಂಥದ್ದೊಂದು ಪತ್ರ ಸದ್ಯ ಭಾರೀ ವೈರಲ್ ಆಗ್ತಿದೆ.
ಗದಗ(ಜು.13): ನಮ್ಮ ಕಾರ್ಯಕರ್ತನ ವಾಹನ ಹಿಡಿಯಬಾರದು, ತೊಂದ್ರೆ ಕೊಡಬಾರದು ಅಂತಾ ಬಿಜೆಪಿ ಶಾಸಕ ರಾಮಪ್ಪ ಲಮಾಣಿಯವರ ಅಧಿಕೃತ ಲೇಟರ್ ಹೆಡ್ ನಲ್ಲಿ ಬರೆಯಲಾಗಿದೆ. ಶಾಸಕರ ಸಹಿ ಇರುವ ಇಂಥದ್ದೊಂದು ಪತ್ರ ಸದ್ಯ ಭಾರೀ ವೈರಲ್ ಆಗ್ತಿದೆ. ಗದಗ ಜಿಲ್ಲೆ ಶಿರಹಟ್ಟಿ ಮತ ಕ್ಷೇತ್ರದ ಶಾಸಕ ರಾಮಪ್ಪ ಲಮಾಣಿ ಇಂಥದ್ದೊಂದು ಪತ್ರವನ್ನ ಕಾರ್ಯಕರ್ತನಿಗೆ ನೀಡಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಕಾರ್ಯಕರ್ತ ಜಿ ಬಸವರಾಜ್ ಎಂಬಾತನಿಗೆ ಶಾಸಕ ರಾಮಪ್ಪ ಈ ಪತ್ರ ನೀಡಿದ್ದಾರೆ. "ಜಿ. ಬಸವರಾಜ್, ಬೆಳಗಟ್ಟಿ ಗ್ರಾಮದವರು ಶಿರಹಟ್ಟಿ ಮತ ಕ್ಷೇತ್ರಕ್ಕೆ ಒಳಪಟ್ಟಿರುತ್ತಾರೆ.. ನಮ್ಮ ಪಕ್ಷದ ಕಾರ್ಯಕರ್ತರು, ನನಗೆ ಚಿರಪರಿಚಿತರು. ಇವರು ಮಹಿಂದ್ರಾ ಬುಲೆರೊ ವಾಹನ ಹೊಂದಿದ್ದಾರೆ.. ವಾಹನ ಸಂಖ್ಯೆ (AP 39: V-3517) ನಮೂದಿಸಿ, ಈ ವಾಹನನ್ನ ಹಿಡಿಯಬಾರದು ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದೆಂದು ಈ ಮೂಲಕ ನಾನು ಬರೆದುಕೊಟ್ಟ ವಿನಂತಿ" ಅಂತಾ ಬರೆದು ಶಾಸಕರು ಸಹಿ ಮಾಡಿದ್ದಾರೆ.
ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಕಾರ್ಯಕರ್ತ ಬಸವರಾಜ್, ಆಂಧ್ರದ ಶ್ರೀಶೈಲದಲ್ಲಿರುವ ನಾನು ಅಲ್ಲಿಂದ ನನ್ನ ಬುಲೆರೊ ವಾಹನದಲ್ಲಿ ಬಂದಿದ್ದೆ. ಆಂಧ್ರದ ವಾಹನ ಆಗಿದ್ರಿಂದ ಇಲ್ಲಿ ಕಿರಿಕಿರಿ ಯಾಗ್ತಿತ್ತು.. ಅದ್ಕೆ ಶಾಸಕರ ಬಳಿ ಪತ್ರ ಪಡೆದಿದ್ದೆ ಅಂದಿದಾರೆ..
undefined
ಕೊಪ್ಪಳ ಪೊಲೀಸರಿಗೆ ಶಾಸಕರ ಪತ್ರ ತೋರಿಸಿದ್ದ ಬಸವರಾಜ್!: ಸಂಬಂಧಿಕರ ಮದ್ವೆ ಕಾರ್ಯಕ್ಕೆ ಅಂತಾ ಜುಲೈ 9 ತಾರೀಕು ಕೊಪ್ಪಳದ ಕನಕಗಿರಿಗೆ ಬಸವರಾಜ್ ಹೋಗಿದ್ರು.. ಆಂಧ್ರ ಪಾಸಿಂಗ್ ಇದ್ದ ಗಾಡಿಯಲ್ಲಿ ತಡೆದಿದ್ದ ಪೊಲೀಸರು ಗಾಡಿ ಡಾಕ್ಯುಮೆಂಟ್ ಕೇಳಿದ್ರಂತೆ.. ಅಲ್ಲಿ ಬಸವರಾಜ್ ಇದೇ ಪತ್ರ ತೋರಿಸಿದ್ದ..ಹೀಗೆ ಕಿರಿಕಿರಿ ಅಗುತ್ತೆ ಅಂತಾನೇ ಶಾಸಕರ ಬಳಿ ಲೆಟರ್ ಪಡೆದಿರೋದಾಗಿ ಬಸವರಾಜ್ ಹೇಳ್ತಿದಾರೆ.. ಶಾಸಕರ ಪಿಎ ಬಳಿ ಪತ್ರ ಬರೆಸಿ ಶಾಸಕ ರಾಮಪ್ಪ ಅವರಿಂದ ಸಹಿ ಪಡೆದಿರೋದಾಗಿಯೂ ಬಸವರಾಜ್ ಮಾಹಿತಿ ನೀಡಿದ್ದಾರೆ..
ಈ ಬಗ್ಗೆ ಸ್ಪಷ್ಟನೆ ಕೇಳೋದಕ್ಕೆ ಶಾಸಕರ ಪಿಎ ಲಕ್ಷ್ಮಣ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದ್ರೆ ಫೋನ್ ಗೆ ಸಿಗ್ತಿಲ್ಲ.. ಶಾಸಕ ರಾಮಪ್ಪ ಲಮಾಣಿಯವರು ಏಷ್ಯ ನೆಟ್ ಸುವರ್ಣ ನ್ಯೂಸ್ ಗೆ ಫೋನ್ ಮೂಲಕ ಮಾಹಿತಿ ನೀಡಿದ್ದು, ಜನರ ಗದ್ದಲ ಇದ್ದಾಗ ಸಹಿ ಮಾಡಿಸ್ಕೊಂಡಿದ್ದಾನೆ.. ಅವನ ವಿರುದ್ಧ ಕಂಪ್ಲೆಂಟ್ ಕೊಡ್ರೀನಿ ಅಂತಾ ಹೇಳ್ತಿದಾರೆ..
ಇತ್ತೀಚೆಗೆ ಶಾಸಕರ ಲೆಟರ್ ಹೆಡ್ ಗಳು ದುರುಪಯೋಗ ಆಗ್ತಿವೆ ಅನ್ನೋ ಮಾತು ಹೇಳಿ ಬರ್ತಿತ್ತು.. ಶಾಸಕರು ಬೇಕಾ ಬಿಟ್ಟಿಯಾಗಿ ಲೆಟರ್ ಬರೆದುಕೊಡ್ತಾರೆ ಅನ್ನೋ ಆರೋಪವೂ ಇದೆ.. ಈ ಮಧ್ಯೆ ಶಾಸಕರ ಲೆಟರ್ ಹೆಡ್ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ..