'ಆನಂದ್‌ ಸಿಂಗ್‌ಗೆ ಸಿಎಂ ಉತ್ತಮ ಖಾತೆ ಕೊಡಲಿ'

By Kannadaprabha News  |  First Published Jan 26, 2021, 2:29 PM IST

ಖಾತೆ ಬದ​ಲಾ​ವಣೆ ಕುರಿತು ಸಿಂಗ್‌ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ಲ್ಲ| ಬಿಜೆಪಿಯಲ್ಲಿ ಸಹ, ಯಾವುದೇ ಅಸಮಾಧಾನ ಇಲ್ಲಾ| ಮನುಷ್ಯ ಅಂದ್ಮೇಲೆ ನೆಗಡಿ, ಕೆಮ್ಮು ಇರ್ತದೆ. ನಾನು ಕೂಡ ಸಿಎಂ ಯಡಿಯೂರಪ್ಪ ಅವರ ಬಳಿ ಮನವಿ ಮಾಡುವೆ ಎಂದ ರಾಜೂಗೌಡ| 


ಹೊಸಪೇಟೆ(ಜ.26): ಸಚಿವ ಆನಂದ್‌ ಸಿಂಗ್‌ ಒಳ್ಳೆಯ ಮನುಷ್ಯ. ಅವರು ಯಾರಿಗೂ ನೋವು ಕೊಡುವವರಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಆನಂದ್‌ ಸಿಂಗ್‌ ಅವರಿಗೆ ಉತ್ತಮ ಖಾತೆ ಕೊಡಲಿ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ. 

ಸಚಿವ ಆನಂದ್‌ ಸಿಂಗ್‌ ಅವರ ಕಚೇರಿಗೆ ಸೋಮವಾರ ದಿಢೀರ್‌ ಭೇಟಿ ನೀಡಿ ಅವರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಆನಂದ್‌ ಸಿಂಗ್‌ ಅಣ್ಣ ಮೊದಲಿನಿಂದಲೂ ಸ್ನೇಹಿತರು. ನಾನು ಊರಿಗೆ ಹೊರಟಿದ್ದೆ, ಮಾಧ್ಯಮಗಳಲ್ಲಿ ಆನಂದ್‌ ಸಿಂಗ್‌ ಅವರ ಖಾತೆ ಬದಲಾವಣೆ ಅಂತ ಸುದ್ದಿ ಬರ್ತಿತ್ತು, ಹಾಗಾಗಿ ಭೇಟಿಯಾಗೋಣ ಅಂತ ಬಂದೆ. ಅವರು ಕೂಲ್‌ ಆಗಿಯೇ ಇದ್ದಾರೆ. ಅವರ ಖಾತೆ ಬದಲಾವಣೆ ವಿಚಾರವಾಗಿ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದರು.

Tap to resize

Latest Videos

ಒಂದಾದ ಕೂಡಲಸಂಗಮ, ಹರಿಹರ ಪಂಚಮಸಾಲಿ ಶ್ರೀಗಳು

ಸಿಎಂ ಯಡಿಯೂರಪ್ಪನವರು ಸಹ ಎಲ್ಲವನ್ನೂ ಕೊಟ್ಟಿದ್ದಾರೆ. ಆನಂದ್‌ ಸಿಂಗ್‌ ಸಹ ನನಗೆ ಖಾತೆಯೇ ಬೇಡ ಅಂದಿದ್ದಾರೆ. ಆದ್ರೂ ಸಿಎಂ ಯಡಿಯೂರಪ್ಪ ಅವರೂ ನೀನು ಸಚಿವನಾಗಿರು ಅಂತ ಹೇಳಿದ್ದಾರೆ, ಹಾಗಾಗಿ ಇದ್ದಾರೆ ಎಂದರು.
ಬಿಜೆಪಿಯಲ್ಲಿ ಸಹ, ಯಾವುದೇ ಅಸಮಾಧಾನ ಇಲ್ಲಾ. ಮನುಷ್ಯ ಅಂದ್ಮೇಲೆ ನೆಗಡಿ, ಕೆಮ್ಮು ಇರ್ತದೆ. ನಾನು ಕೂಡ ಸಿಎಂ ಯಡಿಯೂರಪ್ಪ ಅವರ ಬಳಿ ಮನವಿ ಮಾಡುವೆ ಎಂದರು. ಸಚಿವ ಆನಂದ್‌ ಸಿಂಗ್‌ ಅವರಿಗೆ ಒಳ್ಳೆಯದಾಗೋ ಕೆಲಸ ಆಗಲಿ, ಅವರಿಗೆ ಜಿಲ್ಲೆ ನೀಡಿದ್ದಾರೆ, ಎಲ್ಲವೂ ಕೊಟ್ಟಿದ್ದಾರೆ, ಯಾವುದೇ ಅಸಮಾಧಾನ ಇಲ್ಲ ಎಂದು ಶಾಸಕ ರಾಜೂಗೌಡ ಸ್ಪಷ್ಟಪಡಿಸಿದರು.
 

click me!