ಕಲಬುರಗಿ ಜಿಲ್ಲೆಗೆ ಆಡಳಿತ ಪಕ್ಷದ ಡಬಲ್ ಎಂಜಿನ್ ಆಡಳತಕ್ಕಿಂತ ವಿರೋಧ ಪಕ್ಷದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಇದ್ದಾಗಲೇ ಅತೀ ಹೆಚ್ಚಿನ ಲಾಭವಾಗಿರುವುದು ಕಟುವಾಸ್ತವ: ಪ್ರಿಯಾಂಕ್ ಖರ್ಗೆ
ಕಲಬುರಗಿ(ಜ.21): ಕಲಬುರಗಿ ಪ್ರತ್ಯೇಕ ರೈಲ್ವೆ ಕಚೇರಿ ಸ್ಥಾಪನೆ ಮಾಡೋದು ಮಾತು ಒತ್ತಟ್ಟಿಗಿರಲಿ, ಕಲಬುರಗಿ ನಿಲ್ದಾಣದಲ್ಲಿ ಓಡಾಡುವ ರೈಲುಗಳನ್ನು ನಿಲ್ಲಿಸಲು ಈ ಬಿಜೆಪಿ ಜನಪ್ರತಿನಿಧಿಗಳಿಗೆ ಆಗುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯಮಾಡಿದ್ದಾರೆ.
ಕಲಬುರಗಿಯಲ್ಲಿ ನಿಲ್ಲದೆ ಹೋಗುತ್ತಿರುವ ವರದಿಯನ್ನು ಕನ್ನಡಪ್ರಭ ಪತ್ರಿಕೆ ನಿನ್ನೆ(ಬುಧವಾರ) ಪ್ರಕಟಿಸಿತ್ತು.
ಕಲಬುರಗಿಯಲ್ಲಿ ನಿಲ್ಲದೆ ಓಡುತ್ತಿವೆ ರೈಲುಗಳು: ಇಲಾಖೆಯ ಅಲಕ್ಷತನಕ್ಕೆ ಜನ ಹೈರಾಣ
ಈ ವರದಿಯನ್ನ ಪ್ರಸ್ತಾಪಿಸಿರುವ ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲೆಗೆ ಆಡಳಿತ ಪಕ್ಷದ ಡಬಲ್ ಎಂಜಿನ್ ಆಡಳತಕ್ಕಿಂತ ವಿರೋಧ ಪಕ್ಷದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಇದ್ದಾಗಲೇ ಅತೀ ಹೆಚ್ಚಿನ ಲಾಭವಾಗಿರುವುದು ಕಟುವಾಸ್ತವ ಎಂದು ಬಿಜೆಪಿ ಸಂಸದರು ಮತ್ತು ಶಾಸಕರತ್ತ ಮಾತಿನ ಚಾಟಿ ಬೀಸಿದ್ದಾರೆ.