ನೆರೆಮನೆಯವರಿಗೆ ಕೊರೋನಾ: ಶಾಸಕ ಪ್ರಿಯಾಂಕ್‌ ಖರ್ಗೆ ಕ್ವಾರಂಟೈನ್‌

Kannadaprabha News   | Asianet News
Published : Jun 29, 2020, 10:01 AM IST
ನೆರೆಮನೆಯವರಿಗೆ ಕೊರೋನಾ: ಶಾಸಕ ಪ್ರಿಯಾಂಕ್‌ ಖರ್ಗೆ ಕ್ವಾರಂಟೈನ್‌

ಸಾರಾಂಶ

ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ವಾಸವಿರುವ ಬಡಾವಣೆ ಪಕ್ಕದ ಮನೆಯವರಿಗೆ ಕೊರೋನಾ ದೃಢ| ಮುಂಜಾಗ್ರತೆಗಾಗಿ ತಾವೂ ಮನೆಯಲ್ಲೇ ಪ್ರತ್ಯೇಕವಾಗಿ ಕ್ವಾರಂಟೈನ್‌ ಆದ ಪ್ರಿಯಾಂಕ್‌ ಖರ್ಗೆ| ಸಮಸ್ಯೆ, ಸಲಹೆಗಳಿದ್ದರೆ ನೇರವಾಗಿ ಫೋನ್‌ ಮೂಲಕ ಮಾತನಾಡಿ ವಿಷಯ ಚರ್ಚಿಸಲು ಪ್ರಿಯಾಂಕ್‌ ಕೋರಿಕೆ|

ಕಲಬುರಗಿ(ಜೂ.29): ಪಕ್ಕದ ಬಡಾವಣೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಬೆಂಗಳೂರಿನ ಸದಾಶಿವ ನಗರದ ತಮ್ಮ ಮನೆಯಲ್ಲಿ ಸ್ವಯಂ ಕ್ವಾರಂಟೈನ್‌ ಆಗಿದ್ದಾರೆ. 

ಸ್ವತಃ ಅವರ ತನ್ನ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಾವು ವಾಸವಿರುವ ಬಡಾವಣೆ ಪಕ್ಕದ ಮನೆಯವರಿಗೆ ಕೊರೋನಾ ದೃಢವಾಗಿರುವುದರಿಂದ ಮುಂಜಾಗ್ರತೆಗಾಗಿ ತಾವೂ ಮನೆಯಲ್ಲೇ ಪ್ರತ್ಯೇಕವಾಗಿ ಕ್ವಾರಂಟೈನ್‌ ಆಗಿದ್ದಾರೆ. 

ಕಲಬುರಗಿ: ಕೊರೋನಾ ವಾರಿಯರ್‌ ಆಶಾ ಕಾರ್ಯಕರ್ತೆಗೂ ಅಂಟಿದ ಮಹಾಮಾರಿ ವೈರಸ್‌

ನಾನು ಆರೋಗ್ಯವಾಗಿದ್ದೀನಿ. ಅಲ್ಲದೇ ಈ ವೇಳೆ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗದು, ಆದ್ದರಿಂದ ಯಾವುದೇ ಸಮಸ್ಯೆ, ಸಲಹೆಗಳಿದ್ದರೆ ನೇರವಾಗಿ ಫೋನ್‌ ಮೂಲಕ ಮಾತನಾಡಿ ವಿಷಯ ಚರ್ಚಿಸಲು ಪ್ರಿಯಾಂಕ್‌ ಕೋರಿದ್ದಾರೆ.
 

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ