
ಚಡಚಣ(ಜೂ.29): ಕೊರೋನಾ ಸೋಂಕಿನಿಂದ ಪಾರಾಗಲು ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆ ಅಧಿಕಾರಿಗಳು ಠಾಣಾ ಆವರಣದಲ್ಲೇ ಪೆಂಡಾಲ್ ಹಾಕಿ ಕೊಠಡಿ ನಿರ್ಮಿಸಿ ಅಲ್ಲಿಯೇ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆರಂಭಿಸಿರುವ ವಿನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕೊರೋನಾ ಸೋಂಕು ತಾಗಿ ಇಡೀ ಕಚೇರಿಯನ್ನೇ ಸೀಲ್‌ಡೌನ್ ಮಾಡುವುದು, ಸ್ಥಳಾಂತರಿಸಿರುವ ಪ್ರಕರಣ ಗಮನಿಸಿರುವ ಅಲ್ಲಿನ ಅಧಿಕಾರಿಗಳು ಜೂ. 27ರಂದು ಈ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
ವಿಜಯಪುರ: ಮಾಜಿ ಶಾಸಕರಿಗೆ ಕೊರೋನಾ ಪಾಸಿಟಿವ್, ಮನೆ ಸುತ್ತ ಸೀಲ್‌ಡೌನ್
ಠಾಣೆಯಲ್ಲಿ ಕೊಠಡಿಗಳು ಸಣ್ಣ ಪ್ರಮಾಣದಲ್ಲಿದ್ದು ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಸಾರ್ವಜನಿಕರಿಗೆ ಹಾಗೂ ಠಾಣಾ ಸಿಬ್ಬಂದಿಗೂ ಇದರಿಂದ ಅನುಕೂಲವಾಗಲಿದೆ. ಸಿಪಿಐ ಚಿದಂಬರ ಮಡಿವಾಳ ಮಾರ್ಗದರ್ಶನದಲ್ಲಿ ಈ ಪ್ರಯೋಗ ಮಾಡಲಾಗಿದೆ ಎಂದು ಪಿಎಸೈ ಸಿ.ಬಿ. ಬಾಗೇವಾಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.