'ನಿಯಂತ್ರಣಕ್ಕೆ ಬಾರದ ಕೊರೋನಾ: ವೈರಸ್‌ ಹೊಡೆದೋಡಿಸಲು ಲಾಕ್‌ಡೌನ್‌ ವಿಸ್ತರಣೆಯಾಗಲಿ'

By Kannadaprabha NewsFirst Published May 11, 2020, 9:16 AM IST
Highlights

ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ವಿಸ್ತರಣೆಯಾಗಲಿ| ಆಶಾ ಕಾರ್ಯಕರ್ತೆಯರಿಗೆ ಛತ್ರಿ, ಆಹಾರದ ಕಿಟ್‌ ವಿತರಣೆಯಲ್ಲಿ ಶಾಸಕ ನಾಯ್ಕ| ಲಾಕ್‌ಡೌನ್‌ ಸಡಿಲದಿಂದ ಕೋರೋನಾ ಹಾವಳಿ ಹೆಚ್ಚಳ|  ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿಯು ಕೆಲಸ ಮಾಡುವುದರಲ್ಲಿ ನಂ.1|

ಹರಪನಹಳ್ಳಿ(ಮೇ.11): ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇನ್ನಷ್ಟು ದಿನ ಲಾಕ್‌ಡೌನ್‌ ವಿಸ್ತರಣೆ ಮಾಡಬೇಕು ಎಂದು ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಒತ್ತಾಯಿಸಿದ್ದಾರೆ.
ಅವರು ಪಟ್ಟಣದ ತೆಗ್ಗಿನಮಠದಲ್ಲಿ ಕಾಂಗ್ರೆಸ್‌ ಬಳ್ಳಾರಿ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ ಆಯೋಜಿಸಿದ್ದ ಹರಪನಹಳ್ಳಿ ಹೋಬಳಿ ಮಟ್ಟದ ಆಶಾ ಕಾರ್ಯಕರ್ತರಿಗೆ ಛತ್ರಿ ಹಾಗೂ ಆಹಾರ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಲಾಕ್‌ಡೌನ್‌ ಸಡಿಲದಿಂದ ಕೋರೋನಾ ಹಾವಳಿ ಹೆಚ್ಚಳವಾಗಿದ್ದು, ವಿಸ್ತರಣೆ ಅಗತ್ಯ ಎಂದ ಅವರು, ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿಯು ಕೆಲಸ ಮಾಡುವುದರಲ್ಲಿ ನಂ.1 ಆಗಿದೆ ಎಂದು ಅಭಿಪ್ರಾಯ ಪಟ್ಟರು.
ಕೊರೋನಾ ಸಂಕಷ್ಟಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿರುವ ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಳ ಹಾಗೂ ಇತರ ಸೌಲಭ್ಯನೀಡುವಂತೆ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಟಾಸ್ಕ್‌ ಪೋರ್ಸ್‌ ಸಮಿತಿ ಅಧ್ಯಕ್ಷ ಶಿರಾಜ್‌ ಶೇಖ್‌ ಮಾತನಾಡಿ, ಲಾಕ್‌ಡೌನ್‌ ಸಡಿಲಗೊಳಿಸಬಾರದಿತ್ತು ಎಂದು ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸಿದ ಅವರು, ಸಮಸ್ಯೆ ತಹಬದಿಗೆ ಬರುತ್ತದೆ ಎಂಬುವಷ್ಟರಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಉದ್ಯೋಗವಿಲ್ಲದೇ ಕೈಯಲ್ಲಿದ್ದ ದುಡ್ಡೆಲ್ಲಾ ಖಾಲಿ: ನಡೆದುಕೊಂಡೇ ರಾಜಸ್ಥಾನಕ್ಕೆ ಹೊರಟ ಬಡ ಕುಟುಂಬಗಳು..!

ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ಎಂ.ಶಿವಯೋಗಿ ಮಾತನಾಡಿದರು. ಆಶಾ ಕಾರ್ಯಕರ್ತರಿಗೆ ಛತ್ರಿ ಹಾಗೂ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಹರಪನಹಳ್ಳಿ ಟಾಸ್ಕ್‌ ಪೋರ್ಸ್‌ ಸಮಿತಿ ಅಧ್ಯಕ್ಷ ಎಚ್‌.ಕೆ.ಹಾಲೇಶ, ಜಿಲ್ಲಾ ಸಮಿತಿ ಸದಸ್ಯ ಶಶಿಧರ ಪೂಜಾರ,ಚಿಗಟೇರಿ ಬ್ಲಾಕ್‌ ಅಧ್ಯಕ್ಷ ಜಂಬಣ್ಣ, ಅರಸಿಕೇರಿ ಬ್ಲಾಕ್‌ ಅಧ್ಯಕ್ಷ ಎಸ್‌. ಮಂಜುನಾಥ, ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ, ಜಿಪಂ ಸದಸ್ಯ ಎಚ್‌.ಬಿ. ಪರಶುರಾಮಪ್ಪ, ಡಾ. ಮಂಜುನಾಥ ಉತ್ತಂಗಿ, ಎಂ.ರಾಜಶೇಖರ, ಉಚ್ಚಂಗಿದುರ್ಗ ಟಾಸ್ಕ್‌ಪೋರ್ಸ್‌ ಸಮಿತಿ ಅಧ್ಯಕ್ಷ ಶಿವಕುಮಾರಸ್ವಾಮಿ, ಪಿಟಿ.ಭರತ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಪಿ.ಎಲ್‌ .ಪೋಮ್ಯನಾಯ್ಕ, ಪುರಸಭಾ ಸದಸ್ಯರುಗಳಾದ ಜಾಕೀರ,ಲಾಟಿ ದಾದು, ಭರತೇಶ, ನಜೀರ,ಇಜಾರಿ ಮಹಾವೀರ, ಟಿ.ಎಂ.ಚಂದ್ರಶೇಖರಯ್ಯ, ಟಿ.ಎಂ.ಶಿವಶಂಕರ, ತಾವರ್ಯ ನಾಯ್ಕ, ಮಹಾದೇವಪ್ಪ ಇತರರು ಹಾಜರಿದ್ದರು.
 

click me!