ಸಚಿವ ಸ್ಥಾನ ನೀಡದಿದ್ದರೆ ಗುಲಗಂಜಿಯಷ್ಟೂ ಅಸಮಾಧಾನವಿಲ್ಲ: ಶಾಸಕ ನಿರಾಣಿ

By Kannadaprabha NewsFirst Published Nov 14, 2020, 11:56 AM IST
Highlights

ಏಳು ಸ್ಥಾನಕ್ಕೆ ಹಲವರು ಪೈಪೋಟಿ ನಡೆಸಿದ್ದಾರೆ. ಪಕ್ಷ ಹಾಗೂ ರಾಜ್ಯ, ಕೇಂದ್ರದ ನಾಯಕರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಆದರೆ, ತಾಳ್ಮೆಯಿಂದ ಕಾಯುವುದು ಒಳ್ಳೆಯದು. ತಿಳಿವಳಿಕೆ ಇದ್ದವರು ಸರ್ಕಾರದ ಮೇಲೆ ಒತ್ತಡ ಹಾಕುವುದಿಲ್ಲ ಎಂದ ನಿರಾಣಿ

ಹುಬ್ಬಳ್ಳಿ(ನ.14): ರಾಜ್ಯದಲ್ಲಿ ಏಳು ಸಚಿವ ಸ್ಥಾನಗಳು ಖಾಲಿ ಇದ್ದು, ಸಂಪುಟ ವಿಸ್ತರಣೆಯಲ್ಲಿ ಜವಾಬ್ದಾರಿ ನೀಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುವಂತೆ ಕೆಲಸ ಮಾಡುತ್ತೇವೆ. ನೀಡದಿದ್ದರೆ ಗುಲಗಂಜಿಯಷ್ಟೂ ಅಸಮಾಧಾನವಿಲ್ಲ ಎಂದು ಶಾಸಕ ಮುರುಗೇಶ್‌ ನಿರಾಣಿ ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ಸ್ಥಾನಕ್ಕೆ ಹಲವರು ಪೈಪೋಟಿ ನಡೆಸಿದ್ದಾರೆ. ಪಕ್ಷ ಹಾಗೂ ರಾಜ್ಯ, ಕೇಂದ್ರದ ನಾಯಕರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಆದರೆ, ತಾಳ್ಮೆಯಿಂದ ಕಾಯುವುದು ಒಳ್ಳೆಯದು. ತಿಳಿವಳಿಕೆ ಇದ್ದವರು ಸರ್ಕಾರದ ಮೇಲೆ ಒತ್ತಡ ಹಾಕುವುದಿಲ್ಲ ಎಂದು ಹೇಳಿದ್ದಾರೆ. 

ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೊಸ್ಟ್‌: ಮುರುಗೇಶ್‌ ನಿರಾಣಿ ಉಚ್ಛಾಟಿಸಲು ಆಗ್ರಹ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಾಗೂ ಪಕ್ಷದ ಪ್ರಮುಖರು ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು. ಯಾರನ್ನು ಸೇರಿಸಿಕೊಳ್ಳಬಾರದು ಎಂಬುವುದನ್ನು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ. 

click me!