ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರು. ನೀಡಿದರೆ, ಇದಕ್ಕೆ ಜೊತೆಯಾಗಿ ರಾಜ್ಯ ಸರ್ಕಾರ 4 ಸಾವಿರ ರು. ಸೇರಿ ಒಟ್ಟು 10 ಸಾವಿರ ರುಪಾಯಿಯ ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ಡಿ.05): ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರು. ನೀಡಿದರೆ, ಇದಕ್ಕೆ ಜೊತೆಯಾಗಿ ರಾಜ್ಯ ಸರ್ಕಾರ 4 ಸಾವಿರ ರು. ಸೇರಿ ಒಟ್ಟು 10 ಸಾವಿರ ರುಪಾಯಿಯ ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಹೊಳೆಹರಳಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ಹಾಗೂ ಕೃಷಿ ಪರಿಕರಗಳ ಖರೀದಿಸಲು ಹೆಚ್ಚು ಸಬ್ಸಿಡಿ ನೀಡಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಿ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಇಂತಹ ಜನಪರ ಯೋಜನೆಗಳ ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.
Davanagere: ಕಾರ್ಯಾಂಗ ತನ್ನ ಶಕ್ತಿ ಮರೆತಿದೆ: ನ್ಯಾ.ಸಂತೋಷ್ ಹೆಗ್ಡೆ
ಹನುಮಸಾಗರ ಮೇಲಿನ, ಕೆಳಗಿನ ತಾಂಡ, ಬಳ್ಳೇಶ್ವರ, ಕೋನಾಯಕನಹಳ್ಳಿ, ಹೊಳೆಹರಳಹಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಅಲ್ಲದೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಎಲ್ಲಾ ಗ್ರಾಮಕ್ಕೂ ಕುಡಿಯುವ ನೀರು ಹಾಗೂ ಶಾಲಾ ಕೊಠಡಿಗಳ ನಿರ್ಮಾಣ ಸೇರಿ ಒಟ್ಟು 19 ಕೋಟಿ ರು. ವೆಚ್ಚದಲ್ಲಿ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಮಾಡಲಾಗಿದೆ ಎಂದು ವಿವರಿಸಿದರು.
ಆದೇಶ ಪತ್ರ ವಿತರಣೆ: ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ಯೋಜನಡಿ 15, ಇಂದಿರಾಗಾಂಧೀ ವೃದ್ಧಾಪ್ಯ ವೇತನ 3, ವಿಧವಾ ವೇತನ 1, ಮನಸ್ವಿನಿ ವೇತನ 1.ಪೌತಿಖಾತೆ 1.ದನದ ಕೊಟ್ಟಿಗೆ 17. ಸೇರಿದಂತೆ ಒಟ್ಟು 38 ಜನರಿಗೆ ಸರ್ಕಾರದ ಸೌಲಭ್ಯಗಳ ಆದೇಶ ಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ತಹಸೀಲ್ದಾರ್ ರಶ್ಮಿ, ತಾಲೂಕು ಪಂಚಾಯಿತಿ ಇಒ ರಾಮಭೋವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಮ್ಮ ನಾಗರಾಜ್,ಉಪಾಧ್ಯಕ್ಷೆ ಶೃತಿ ಮಂಜುನಾಥ್, ಸದಸ್ಯರಾದ ಜೀನದತ್ತ, ಭಾರತಿಬಾಯಿ, ಸತ್ತಿಬಾಯಿ, ರಂಜಿತಾ, ಮಂಜಮ್ಮ, ನಾಗರಾಜನಾಯ್‌್ಕ, ಮಹಮ್ಮದ್ ರಫಿ, ಹನುಂತಗೌಡ್ರು,ಮಂಜಪ್ಪ, ಸಂಜಿವೀನಿ ಒಕ್ಕೂಟದ ಹಾಲೇಶ್, ಕವಿತಾ, ಮಂಜುಳಾ, ಬಿಜೆಪಿ ಮುಖಂಡರಾದ ಮಂಜುನಾಥ್, ನಾಗರಾಜ್ ಹಾಗೂ ಇತರರಿದ್ದರು.
ತಹಸೀಲ್ದಾರ್‌ಗೂ ಅದ್ಧೂರಿ ಸೀಮಂತ: ತಾಲೂಕಿನ ಹೊಳೆಹರಳಹಳ್ಳಿ ಸೊಸೆಯಾಗಿರುವ ತಹಸೀಲ್ದಾರ್ ರಶ್ಮಿ ಹಾಲೇಶ್‌ಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ಗರ್ಭಿಣಿಯರ ಜೊತೆಯಲ್ಲೇ ತಹಸೀಲ್ದಾರ್ ರಶ್ಮೀ ಅವರಿಗೂ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿಸಿದರು.
ಚಂದ್ರು ಸಾವಿನ ಸಮಗ್ರ ವರದಿಗೆ ಕಾಯುತ್ತಿರುವೆ: ರೇಣುಕಾಚಾರ್ಯ
ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವುದಕ್ಕೆ 590 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದೇನೆ, ಏತ ನೀರಾವರಿ ಯೋಜನೆಗೆ 320 ಕೋಟಿ ರು. ವೆಚ್ಚದ ಡಿಪಿಆರ್ ಆಗಿದ್ದು, ಆದರೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಶೀಘ್ರವೇ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ.
-ಎಂ.ಪಿ.ರೇಣುಕಾಚಾರ್ಯ, ಶಾಸಕ