ಸಿದ್ದರಾಮಯ್ಯಗೂ ರಾಮಮಂದಿರ ಕಟ್ಟುವ ಆಸೆ ಇದೆ!

Kannadaprabha News   | Asianet News
Published : Feb 18, 2021, 01:15 PM IST
ಸಿದ್ದರಾಮಯ್ಯಗೂ ರಾಮಮಂದಿರ ಕಟ್ಟುವ ಆಸೆ ಇದೆ!

ಸಾರಾಂಶ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸ್ಥಳ ಸುಪ್ರೀಂ ಕೋರ್ಟ್‌ ನಿರ್ಧಾರ ಮಾಡಿದೆ. ಅದರ ಬಗ್ಗೆ ನಾವ್ಯಾರೂ ಮಾತನಾಡುವುದಿಲ್ಲ. ಅಂದೊಂದು ಐತಿಹಾಸಿಕ ತೀರ್ಪು| ಶ್ರೀರಾಮ ಮಂದಿರ ನಿರ್ಮಾಣ ಕೇವಲ ಒಂದು ವ್ಯಕ್ತಿ, ಪಕ್ಷದ್ದಲ್ಲ, ಸಮಸ್ತ ಹಿಂದುಗಳದ್ದು ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ: ಕಳಕಪ್ಪ ಬಂಡಿ| 

ಗದಗ(ಫೆ.18): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ರಾಮಮಂದಿರ ಕಟ್ಟಬೇಕು ಎನ್ನುವ ಆಸೆ ಇದೆ ಎನ್ನುವುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದ್ದಾರೆ. 

ಅವರು ಬುಧವಾರ ಗದಗ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ಕೊಡುತ್ತಿದ್ದೆ, ಆದರೆ ರಾಮ ಮಂದಿರವನ್ನು ಆ ವಿವಾದಿತ ಸ್ಥಳದಿಂದ ಬೇರೆಡೆ ನಿರ್ಮಾಣ ಮಾಡಿದರೆ ಮಾತ್ರ ಕೊಡುತ್ತಿದ್ದೆ ಎಂದಿರುವುದು ಅವರಲ್ಲಿರುವ ಶ್ರೀರಾಮನ ಮೇಲಿರುವ ಪ್ರೀತಿಯ ಭಾವನೆಯನ್ನು ತೋರಿಸುತ್ತಿದೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸ್ಥಳವನ್ನು ಸುಪ್ರೀಂ ಕೋರ್ಟ್‌ ನಿರ್ಧಾರ ಮಾಡಿದೆ. ಅದರ ಬಗ್ಗೆ ನಾವ್ಯಾರೂ ಮಾತನಾಡುವುದಿಲ್ಲ. ಅಂದೊಂದು ಐತಿಹಾಸಿಕ ತೀರ್ಪು ಎಂದ ಅವರು, ಸಿದ್ದರಾಮಯ್ಯ ರಾಮಮಂದಿರ ನಿರ್ಮಾಣಕ್ಕಾಗಿ ಇದುವರೆಗೂ ಸಂಗ್ರಹವಾಗಿರುವ ದೇಣಿಗೆಯ ಬಗ್ಗೆ ಲೆಕ್ಕ ಕೇಳುತ್ತಿದ್ದಾರೆ. ಇದಕ್ಕಾಗಿಯೇ ಇರುವ ಸಮಿತಿಯಲ್ಲಿ ದೇಣಿಗೆಯ ಪ್ರತಿಯೊಂದು ಪೈಸೆಯ ಲೆಕ್ಕವೂ ಇದೆ ಎಂದರು.

ಪಂಚಮಸಾಲಿ ಮೀಸಲಾತಿಗೆ ಅವಸರ ಮಾಡುವ ಅಗತ್ಯ ಇಲ್ಲ: ಸಚಿವ ಪಾಟೀಲ್‌

ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ, ನೀಡದೇ ಇರುವ ಮನೆಗಳ ಸಮೀಕ್ಷೆ ನಡೆಯುತ್ತಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದೆಲ್ಲಾ ಸುಳ್ಳು. ಆ ರೀತಿಯ ಯಾವುದೇ ಅವಶ್ಯಕತೆ ನಮಗಿಲ್ಲ. ಶ್ರೀರಾಮ ಮಂದಿರ ನಿರ್ಮಾಣ ಕೇವಲ ಒಂದು ವ್ಯಕ್ತಿ, ಪಕ್ಷದ್ದಲ್ಲ, ಸಮಸ್ತ ಹಿಂದುಗಳದ್ದು ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

PREV
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ