ಶಾಶ್ವತ ಕುಡಿವ ನೀರು ಹಾಗೂ ರೈತರ ನೀರಾವರಿ ಪ್ರಗತಿಗೆ ಇಲ್ಲಿನ ಸಾರ್ವಜನಿಕ ಒತ್ತಡ ಹಾಗೂ ಪತ್ರಿಕೆಯ ವರದಿ ಪ್ರಸಾರದ ಬೆನ್ನಲೆ,ಶುಕ್ರವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಇಲ್ಲಿನ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಹಿರಿಯೂರು ಶಾಸಕ ಸುಧಾಕರ್ ನೀರಾವರಿ ಅನುಷ್ಟಾನಕ್ಕೆ ಭದ್ರಾ ಮೇಲ್ದಂಡೆ ಹಾಗೂ ಕುಡಿವ ನೀರು ಪ್ರಗತಿಗೆ ತುಂಗಭದ್ರಾ ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಿ ಶೀಘ್ರ ನದಿ ಮೂಲದ ನೀರು ಈ ಭಾಗಕ್ಕೆ ಕಲ್ಪಿಸುವಂತೆ ಮನವಿ ಮಾಡಿದರು.
ಪಾವಗಡ : ಶಾಶ್ವತ ಕುಡಿವ ನೀರು ಹಾಗೂ ರೈತರ ನೀರಾವರಿ ಪ್ರಗತಿಗೆ ಇಲ್ಲಿನ ಸಾರ್ವಜನಿಕ ಒತ್ತಡ ಹಾಗೂ ಪತ್ರಿಕೆಯ ವರದಿ ಪ್ರಸಾರದ ಬೆನ್ನಲೆ,ಶುಕ್ರವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಇಲ್ಲಿನ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಹಿರಿಯೂರು ಶಾಸಕ ಸುಧಾಕರ್ ನೀರಾವರಿ ಅನುಷ್ಟಾನಕ್ಕೆ ಭದ್ರಾ ಮೇಲ್ದಂಡೆ ಹಾಗೂ ಕುಡಿವ ನೀರು ಪ್ರಗತಿಗೆ ತುಂಗಭದ್ರಾ ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಿ ಶೀಘ್ರ ನದಿ ಮೂಲದ ನೀರು ಈ ಭಾಗಕ್ಕೆ ಕಲ್ಪಿಸುವಂತೆ ಮನವಿ ಮಾಡಿದರು.
ನಂಜುಂಡಪ್ಪ ವರದಿ ಪ್ರಕಾರ ಪಾವಗಡ ತಾಲೂಕು ಶಾಶ್ವತ ಬರ ಪೀಡಿತ ಪ್ರದೇಶ ಪಟ್ಟಿ ವ್ಯಾಪ್ತಿಗೆ ಒಳಪಟ್ಟಿದ್ದು, ಕಳೆದ 15 ವರ್ಷಗಳಿಂದ ಮಳೆಯ ಅಭಾವ ಸೃಷ್ಟಿಯಾಗಿ ಕುಡಿವ ನೀರು ಹಾಗೂ ಕೊಳವೆ ಬಾವಿ ಬತ್ತಿದ ಪರಿಣಾಮ ನೀರಾವರಿ ಪ್ರಗತಿ ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಯೋಜನೆ ರೂಪಿಸುವ ಸಲುವಾಗಿ ನಿರಂತರವಾಗಿ ರೈತರು ಹಾಗೂ ಇಲ್ಲಿನ ಸಂಘಸಂಸ್ಥೆಗಳ ಸಹಯೋಗದಲ್ಲಿ ಜನಪ್ರತಿನಿಧಿಗಳು,ಹಿರಿಯ ಮುಖಂಡರು ಸಾವಿರಾರು ಮಂದಿ ಕಾರ್ಯಕರ್ತರ ಶ್ರಮದ ಫಲವಾಗಿ ಪಕ್ಷಾತೀತ ಹೋರಾಟ ಮತ್ತು ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದ ಪರಿಣಾಮ ನೀರಾವರಿ ಪ್ರಗತಿಗೆ ಭದ್ರಾ ಮೇಲ್ದಂಡೆ ಮತ್ತು ಪಾವಗಡ ತಾ.ಸೇರಿದಂತೆ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ಬಹುಗ್ರಾಮಗಳಿಗೆ ಕುಡಿವ ನೀರು ಕಲ್ಪಿಸಲು ತುಂಗಭದ್ರಾ ಯೋಜನೆ ಕೋಟ್ಯಂತರ ರು,ಬಿಡುಗಡೆ ಅನುದಾನದಲ್ಲಿ ಅನುಷ್ಟಾನ ಮಾಡಲಾಗಿದೆ.
ಈ ಎರಡು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದ್ದು ನೀರಾವರಿಗೆ ಅದ್ಯತೆ ನೀಡಿದ್ದ ಮೇರೆಗೆ ಕೆರೆಗಳಿಗೆ ನೀರು ತುಂಬಿಸಲು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸದ ಸಾಗರದಿಂದ ಲಿಪ್ಟ್ ಮಾಡುವ ಮೂಲಕ ಪ್ರತ್ಯೇಕ ಕಾಲುವೆಯೊಂದಿಗೆ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಭದ್ರಾಮೇಲ್ದಂಡೆ ಯೋಜನೆ ಹಾಗೂ ಬಳ್ಳಾರಿ ಜಿಲ್ಲೆ ಹೊಸಪೇಟೆ ಡ್ಯಾಂನಿಂದ ತುಂಗಭದ್ರಾ ಯೋಜನೆಯ ನೀರು ಲಿಪ್ಟ್ ಮಾಡುವ ಮೂಲಕ ಬಳ್ಳಾರಿ,ಚಿತ್ರದುರ್ಗ ಹಾಗೂ ಮೊಳಕಾಲ್ಮೂರು ಚಳ್ಳಕರೆ ಮೂಲಕ ಪಾವಗಡಕ್ಕೆ ಸರಬರಾಜ್ ಮಾಡಲು ತುಂಗಭದ್ರಾ ಹಿನ್ನಿರಿನ ಯೋಜನೆಯ ಪೈಪುಲೈನ್ ಕಾಮಗಾರಿ ಕೈಗೆತ್ತಿಕೊಂಡಿದ್ದು ಈ ಎರಡು ನದಿ ಮೂಲದ ನೀರು ಸರಬರಾಜ್ ಕಾಮಗಾರಿಗಳು ಪ್ರಗತಿಯಲ್ಲಿವೆ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯೋಜನೆಯ ಹಣ ಬಿಡುಗಡೆ ವಿಳಂಬದ ಪರಿಣಾಮ ಟೆಂಡರ್ ಪ್ರಕ್ರಿಯೆ ಅನ್ವಯ ನಿಗಧಿತ ಅವಧಿಗೆ ಈ ಎರಡು ಯೋಜನೆಯ ಕಾಮಗಾರಿ ಪೂರೈಸಲು ಸಾಧ್ಯವಾಗದೇ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಕೊಳವೆಬಾವಿ ಬತ್ತಿ ಹೋಗಿ ಅಭಾವ ಸೃಷ್ಟಿಯಾದ ಕಾರಣ ಬೆಳೆಗಳು ನಷ್ಟಕ್ಕಿಡಾಗಿವೆ, ನೀರಾವರಿ ಪ್ರಗತಿ, ಕುಂಠಿತ ಮತ್ತು ಈಗಾಗಲೇ ಕುಡಿವ ನೀರಿನ ಅಭಾವ ಎದುರಿಸುವಂತಾಗಿದೆ. ಈ ಎರಡು ಯೋಜನೆಗಳ ವಿಳಂಬ ವಿರೋಧಿಸಿ,ಕಾಮಗಾರಿ ಶೀಘ್ರ ಮುಗಿಸುವ ಮೂಲಕ ಅಪ್ಪರ್ ಭದ್ರಾ ಮತ್ತು ತುಂಗಭದ್ರಾ ಯೋಜನೆಯ ನೀರು ತಾಲೂಕಿಗೆ ಪೂರೈಸಿ ಸಹಕರಿಸುವಂತೆ ಇಲ್ಲಿನ ರೈತಾಪಿ ಸಂಘಸಂಸ್ಥೆ ಹಾಗೂ ಸಾರ್ವಜನಿಕರು ಸರ್ಕಾರಕ್ಕೆ ಒತ್ತಡವೇರಿದ್ದರು.
ತುಂಗಭದ್ರಾ ಕುಡಿವ ನೀರು ವಿಳಂಬ ವಿಷಯ ಸೆ,21ರಂದು ಕನ್ನಡ ಪ್ರಭದಲ್ಲಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೆ ಸೆ 22ರಂದು ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಇಲ್ಲಿನ ಶಾಸಕ ಎಚ್.ವಿ.ವೆಂಕಟೇಶ್,ಹಾಗೂ ಹಿರಿಯೂರು ಶಾಸಕ ಸುಧಾಕರ್ ಹಾಗೂ ಚಿತ್ರದುರ್ಗ ಜಿಲ್ಲೆಯ ಕೆಲ ಶಾಸಕರು ಹಿರಿಯ ತಾಂತ್ರಿಕ ಎಂಜಿನಿಯರ್‌ಗಳು ದಾಖಲೆ ಸಮೇತ ಈ ಭಾಗದ ಭದ್ರಾಮೇಲ್ದಂಡೆ, ತುಂಗಭದ್ರಾ ಯೋಜನೆಯ ಕಾಮಗಾರಿ ಪ್ರಗತಿ ವಿವರಿಸಿ ಕಾಮಗಾರಿಯ ವೇಗ ಹೆಚ್ಚಿಸುವ ಮೂಲಕ ಶೀಘ್ರ ಕೆರೆಗಳಿಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆ ಮತ್ತು ಕುಡಿಯುವ ನೀರಿಗಾಗಿ ತುಂಗಭದ್ರಾ ಯೋಜನೆಯ ನೀರು ಕಲ್ಪಿಸಿಕೊಡುವಂತೆ ಸಿಎಂ ಸಿದ್ದರಾಮಯ್ಯರಲ್ಲಿ ಮನವಿ ಮಾಡಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಸಕಾರತ್ಮಕ ಭರವಸೆ ನೀಡಿರುವುದಾಗಿ ಶಾಸಕ ವೆಂಕಟೇಶ್ ತಿಳಿಸಿದ್ದಾರೆ.