ಹಿರೇಬೀಡನಾಳದಲ್ಲಿ 2 ಕೋಟಿ ವೆಚ್ಚದ ಚೆಕ್ ಡ್ಯಾಂ ಕಾಮಗಾರಿಗೆ ಚಾಲನೆ| ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇಬೀಡನಾಳ ಗ್ರಾಮ| ಕೆಲ ರಾಜಕಾರಣಿಗಳು ಪ್ರಚಾರ ಪಡೆಯುವ ಉದ್ದೇಶದಿಂದ ಬ್ಯಾನರ್‌ಗಳನ್ನು ಹಾಕಿಸಿಕೊಂಡು ಕಿಟ್‌ಗಳನ್ನು ಹಂಚುತ್ತಿದ್ದಾರೆ| ಯಾವುದೊ ರಾಜಕೀಯ ಧೋರಣೆ ಇಟ್ಟುಕೊಂಡು ಕಿಟ್‌ಗಳನ್ನು ಹಂಚುವ ಬದಲು ಮಾನವೀಯ ಧರ್ಮದಿಂದ ಹಂಚಬೇಕು: ಶಾಸಕ ಹಾಲಪ್ಪ ಆಚಾರ್|
ಕುಕನೂರು(ಮೇ.10): ಬ್ಯಾನರ್‌ಗಳನ್ನು ಹಾಕಿಕೊಂಡು ಕಿಟ್‌ಗಳನ್ನು ಹಂಚುವುದನ್ನು ಬಿಟ್ಟು, ಮಾನವೀಯ ಧರ್ಮದಿಂದ ವಿತರಿಸಿ, ಅದು ನಿಜವಾದ ಮಾನವಧರ್ಮ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ.
ತಾಲೂಕಿನ ಹಿರೇಬೀಡನಾಳ ಗ್ರಾಮದಲ್ಲಿ 2 ಕೋಟಿ ವೆಚ್ಚದ ಚೆಕ್ ಡ್ಯಾಂ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಇಂದು ಅನ್ನದಾನ ಮಾಡುವ ನಮಗೆ ಅವಕಾಶ ಸಿಕ್ಕಿದೆ ಎಂದರೆ ಅದು ನಮಗೆ ಒಲಿದು ಬಂದ ಭಾಗ್ಯ ಎಂದು ಭಾವಿಸಿಕೊಂಡು ಕಿಟ್ ವಿತರಣೆ ಮಾಡಬೇಕು. ನಿರ್ಗತಿಕ ಕುಟುಂಬಗಳಿಗೆ ಕಿಟ್ ನೀಡುವುದರಿಂದ ನಮ್ಮ ಜೀವನ ಹಸನಾಗುತ್ತದೆ. ಅಂತಹ ಪುಣ್ಯದ ಕಾಕೆಲ ರಾಜಕಾರಣಿಗಳು ಪ್ರಚಾರ ಪಡೆಯುವ ಉದ್ದೇಶದಿಂದ ಬ್ಯಾನರ್‌ಗಳನ್ನು ಹಾಕಿಸಿಕೊಂಡು ಕಿಟ್‌ಗಳನ್ನು ಹಂಚುತ್ತಿದ್ದಾರೆ. ಯಾವುದೊ ರಾಜಕೀಯ ಧೋರಣೆ ಇಟ್ಟುಕೊಂಡು ಕಿಟ್‌ಗಳನ್ನು ಹಂಚುವ ಬದಲು ಮಾನವೀಯ ಧರ್ಮದಿಂದ ಹಂಚಬೇಕು. ರ್ಯವನ್ನು ಕಾಣದ ಕೈಗಳಂತೆ ಮಾಡಬೇಕು.
ಆಹಾರದ ಕಿಟ್ ವಿತರಿಸಿ ಅವುಗಳ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುವುದು ನಿಜಕ್ಕೂ ಬೇಸರದ ಸಂಗತಿ ಎಂದರು.
undefined
ನೇಕಾರರಿಗೆ ಸಿಎಂ BSY ವಿಶೇಷ ಪ್ಯಾಕೇಜ್ ಘೋಷಣೆ: ಕೆಲವರಿಗೆ ಮಾತ್ರ ಸೀಮಿತ..!
ತಾಲೂಕಿನ ಅಭಿವೃದ್ಧಿಗಾಗಿ ಇಂದು 2 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯಲಬುರ್ಗಾ ತಾಲೂಕು ಒಣ ಬೇಸಾಯ ಭೂಮಿಯಾಗಿದ್ದು, ಮಳೆಗಾಲ ಇರುವುದರಿಂದ ಮುಂದಿನ ದಿನಮಾನಗಳಲ್ಲಿ ಈ ಚೆಕ್ ಡ್ಯಾಂಗಳಿಂದ ಅನುಕೂಲವಾಗಲಿದೆ ಎಂದು ಕಾಮಗಾರಿಗಳಿಗೆ ಚಾಲನೆ ಎಂದು ತಿಳಿಸಿದರು.
ಈಗಾಗಲೇ ಕೃಷ್ಣಾ ಬೀ ಸ್ಕೀಂಗೆ 1726 ಕೋಟಿ ಅನುದಾನವನ್ನು ನೀಡಿ ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗಳಿಗೆ ನೀರು ಬಿಡುವ ಕಾರ್ಯ ಮಾಡಲಾಗುವುದು. ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಲಕ್ಷ್ಮೇ ದ್ಯಾಮನಗೌಡ್ರು, ಪಪಂ ಸದಸ್ಯ ಶಂಭು ಜೋಳದ್, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ, ವೀರಣ್ಣ ಹುಬ್ಬಳ್ಳಿ, ಪಿಎಸ್‌ಐ ಎನ್. ವೆಂಕಟೇಶ, ಪೇದೆಗಳಾದ ಬಸವರಡ್ಡಿ, ವಿನೋದ ಹಾಗೂ ಇತರರು ಇದ್ದರು.