ಯಡಿಯೂರಪ್ಪ ಶ್ರಮದಿಂದಲೇ ರಾಜ್ಯದಲ್ಲಿ ಕೊರೋನಾ ಕಡಿಮೆ ಆಗ್ತಿದೆ: ದಢೇಸುಗೂರು

Kannadaprabha News   | Asianet News
Published : May 28, 2021, 02:53 PM ISTUpdated : May 28, 2021, 02:54 PM IST
ಯಡಿಯೂರಪ್ಪ ಶ್ರಮದಿಂದಲೇ ರಾಜ್ಯದಲ್ಲಿ ಕೊರೋನಾ ಕಡಿಮೆ ಆಗ್ತಿದೆ: ದಢೇಸುಗೂರು

ಸಾರಾಂಶ

* ಸಿಎಂ ಬದಲಾವಣೆ ವಿಚಾರ ತಪ್ಪು * ಚಿಕ್ಕಮಾದಿನಾಳ ಕೋವಿಡ್‌ ಕೇಂದ್ರಕ್ಕೆ ಶಾಸಕ ದಢೇಸುಗೂರು ಭೇಟಿ * ಕೆಲ ನಾಯಕರು ಸಿಎಂ ಬದಲಾವಣೆ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ವಿಪರ್ಯಾಸ  

ಕನಕಗಿರಿ(ಮೇ.28): ಇಳಿ ವಯಸ್ಸಿನಲ್ಲೂ ನಮ್ಮ ಮುಖ್ಯಮಂತ್ರಿ ಹದಿಹರೆಯದವರಂತೆ ಓಡಾಡಿ, ಹೆಮ್ಮಾರಿ ಕೊರೋನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಯಿಸಬೇಕೆನ್ನುವ ವಿಚಾರ ತಪ್ಪು. ಬಿ.ಎಸ್‌. ಯಡಿಯೂರಪ್ಪ ಅವರ ಬದಲಾವಣೆ ಊಹಾಪೋಹ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದ್ದಾರೆ. 

ಅವರು ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಕೋವಿಡ್‌ ಆರೈಕೆ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪತ್ರಕರ್ತರ ಜತೆ ಮಾತನಾಡಿದರು. ಯಡಿಯೂರಪ್ಪ ಅವರು ರಾಜ್ಯದಲ್ಲಿ ಸಂಚರಿಸಿ ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಅವರ ಶ್ರಮದಿಂದಲೇ ರಾಜ್ಯದಲ್ಲಿ ಪಾಸಿಟಿವಿಟಿ ಕಳೆದ ವಾರದಿಂದ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಕೆಲ ನಾಯಕರು ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ವಿಪರ್ಯಾಸ. ಅವಧಿ ಪೂರ್ಣವಾಗುವ ವರೆಗೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಎದ್ದಿರುವುದು ಊಹಾಪೋಹ ಮತ್ತು ಸತ್ಯಕ್ಕೆ ದೂರ ಎಂದರು.

ಗಂಗಾವತಿ: ಈ ಊರಿನೊಳಗೆ ಬರುವ ಧೈರ್ಯ ಕೊರೋನಾಗಿಲ್ಲ..!

ಊಟ ಸವಿದ ಶಾಸಕ:

ಚಿಕ್ಕಮಾದಿನಾಳ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ದಡೇಸುಗೂರು ರೋಗಿಗಳ ಆರೋಗ್ಯ ವಿಚಾರಿಸಿದರು. ಚಪಾತಿ, ಪಲ್ಯ, ಅನ್ನ ಸಾಂಬರ್‌, ಮೊಸರು ಸೇವಿಸಿದರು. ರೋಗಿಗಳಿಗೆ ಔಷಧಿ, ಸಮಯಕ್ಕೆ ಸರಿಯಾಗಿ ಉಪಾಹಾರ, ಊಟದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಆನಂತರ ಕನಕಗಿರಿ ಕೋವಿಡ್‌ ಆರೈಕೆ ಕೇಂದ್ರಕ್ಕೂ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ತಹಸೀಲ್ದಾರ್‌ ರವಿ ಅಂಗಡಿ, ಸಿಪಿಐ ಉದಯರವಿ, ಪಿಎಸ್‌ಐ ತಾರಾಬಾಯಿ, ತಾಪಂ ಇಒ ಡಾ. ಡಿ. ಮೋಹನ್‌, ಗ್ರಾಪಂ ಅಧ್ಯಕ್ಷ ತಿಪ್ಪಣ್ಣ ಗಿಡ್ಡಿ, ಪಿಡಿಒ ನಾಗೇಶ ಪೂಜಾರಿ, ಮುಖಂಡ ವೀರೇಶ ಸಾಲೋಣಿ ಇದ್ದರು.
 

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು