ಹೆಬ್ಬಾಳ್ಕರ್ ಎದೆ ಯಾವಾಗ ಝಲ್ ಅನ್ನುತ್ತೋ, ಯಾವಾಗ ಡನ್ ಅನ್ನುತ್ತೋ ನಮಗೇನ್ ಗೊತ್ತು?

Published : Dec 01, 2019, 01:10 PM ISTUpdated : Dec 01, 2019, 05:05 PM IST
ಹೆಬ್ಬಾಳ್ಕರ್ ಎದೆ ಯಾವಾಗ ಝಲ್ ಅನ್ನುತ್ತೋ, ಯಾವಾಗ ಡನ್ ಅನ್ನುತ್ತೋ ನಮಗೇನ್ ಗೊತ್ತು?

ಸಾರಾಂಶ

ಕುಮಾರಸ್ವಾಮಿ ಅವರು ಪಾಪ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ| ಬಿಜೆಪಿ ಸೇರಲು ವಿಜಯಪುರದ ಜೆಡಿಎಸ್ ಶಾಸಕರು ತಯಾರಾಗಿದ್ದಾರೆ| ಜೆಡಿಎಸ್‌ನ 10 ರಿಂದ 12 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ| ವಿಜಯಪುರದ ಇಬ್ಬರು ಶಾಸಕರು ಈಗಾಗಲೇ ನಮ್ಮೊಂದಿಗೆ ಇದ್ದಾರೆ| ಮೈಸೂರು ಭಾಗದ ಜೆಡಿಎಸ್‌ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳುವ ಮತ್ತೆ ಆಪರೇಶನ್ ಕಮಲದ ಬಗ್ಗೆ ಸುಳಿವು ನೀಡಿದ ಯತ್ನಾಳ್| 

ಅಥಣಿ(ಡಿ.01): ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗಂಡಸ್ಥನ ಮಾತು ಹೇಳುವುದು ಸರಿಯಲ್ಲ, ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಡ್ಯಾಷ್ ಡ್ಯಾಷ್ ಎನ್ನುವುದು ಸರಿಯಲ್ಲ. ಅದು ಏನು ಡ್ಯಾಷ್ ಡ್ಯಾಷ್ ಅನ್ನೋದನ್ನು ಅವರೇ ಹೇಳಬೇಕು. ಅವರು ಮೊದಲು ಬಿಟ್ಟ ಸ್ಥಳ ತುಂಬಲಿ ಆ ಬಳಿಕ ನಾವು ಡ್ಯಾಷ್ ಡ್ಯಾಷ್ ತುಂಬುತ್ತೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. 

ಬಿಜೆಪಿ ಸೇರೋದು ಕೇಳಿ ಹೆಬ್ಬಾಳಕರ ಎದೆ ಜಲ್ ಎಂದ ವಿಚಾರದ ಬಗ್ಗೆ ಭಾನುವಾರ ಅಥಣಿ ಅಂಬೇಡ್ಕರ್ ಸರ್ಕಲ್ ನಲ್ಲಿ ಪಾದಯಾತ್ರೆ ನಡೆಸಿ ಭಾಷಣ ಮಾಡದ ಯತ್ನಾಳ್ ಅವರು, ಹೆಬ್ಬಾಳಕರ ಅವರ ಎದೆ ಯಾವಾಗ ಝಲ್ ಅನ್ನುತ್ತೋ, ಯಾವ ಡನ್ ಅನ್ನುತ್ತೋ ನಮಗೇನ್ ಗೊತ್ತು? ಅವರು ಹೇಗೆ ಡ್ಯಾಷ್ ಡ್ಯಾಷ್ ಮೂಲಕ 1200 ಕೋಟಿ ತಂದಿದ್ದಾರೆ ಗೊತ್ತಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಾಪ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಬಿಜೆಪಿ ಸೇರಲು ವಿಜಯಪುರದ ಜೆಡಿಎಸ್ ಶಾಸಕರು ತಯಾರಾಗಿದ್ದಾರೆ. ಜೆಡಿಎಸ್‌ನ 10 ರಿಂದ 12 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ. ವಿಜಯಪುರದ ಇಬ್ಬರು ಶಾಸಕರು ಈಗಾಗಲೇ ನಮ್ಮೊಂದಿಗೆ ಇದ್ದಾರೆ. ಮೈಸೂರು ಭಾಗದ ಜೆಡಿಎಸ್‌ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳುವ ಮತ್ತೆ ಆಪರೇಶನ್ ಕಮಲದ ಬಗ್ಗೆ ಸುಳಿವು ನೀಡಿದ್ದಾರೆ. 

ಸರ್ಕಾರ ರಚನೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ. ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪರನ್ನು ಅಲುಗಾಡಿಸಲು ಆಗುವುದಿಲ್ಲ. ರಾಷ್ಟ್ರೀಯ ಪುರುಷರನ್ನು ಯಾರ ಯಾರಿಗೊ ಹೋಲಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಸಿಎಂ ಆಗಲು ಕುಮಾರಸ್ವಾಮಿ ಬಿಡುವುದಿಲ್ಲ, ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ, ನಾನು ಸೇರಿದಂತೆ ನೂರು ಮಂದಿ ಎಂಎಲ್‌ಸಿ ಮಾಡತೇನು ಅಂತಾ ಎಚ್.ಡಿಕೆ ಹೇಳಿದ್ದರು. ಇರೋದು 75 ಸ್ಥಾನ ಇದ್ರುದ್ರೂ ಅಷ್ಟು ಜನರಿಗೆ ಭರವಸೆ ಕೊಟ್ಟಿದ್ದರು. ದೇವೇಗೌಡರು, ಕುಮಾರಸ್ವಾಮಿಗೆ ಬಿಜೆಪಿ ಕಡಿಮೆ ಸ್ಥಾನ ಬರಬೇಕು ಎಂಬುದು ಇದೆ. ಯಾಕೆಂದ್ರೆ ಹೆಚ್ ಡಿ ರೇವಣ್ಣ ನಿರುದ್ಯೋಗಿ ಆಗಿದ್ದಾರೆ. ಪುನಃ ಅವರನ್ನು ಲೋಕೊಪಯೋಗಿ ಸಚಿವರನ್ನು ಮಾಡಲು ಯೋಚಿಸ್ತಾ ಇದ್ದಾರೆ. ಬಿಜೆಪಿ ಕಡಿಮೆ ಸ್ಥಾನ ಬಂದ್ರೆ ನಮ್ಮ ಸಹಕರ ಪಡಿತಾರೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

PREV
click me!

Recommended Stories

ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ
ಕೇಂದ್ರ ಸರ್ಕಾರದ ವಕೀಲರ ನಕಲಿ ಮಾಡಿದವನಿಗೆ ಜೈಲು ಶಿಕ್ಷೆ: ಹೈಕೋರ್ಟ್‌ ಆದೇಶ