ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ಕೊಡಲೇಬೇಕು: ಯತ್ನಾಳ

By Suvarna News  |  First Published Feb 5, 2020, 10:02 AM IST

ಮಹೇಶ ಕುಮಟಳ್ಳಿ ಸಭ್ಯಸ್ಥ ಮನುಷ್ಯ| ಅವರು ರಾಜೀನಾಮೆ ನೀಡುವ ಅವಶ್ಯಕತೆ ಇರಲಿಲ್ಲ| ಯಡಿಯೂರಪ್ಪ ಸಿಎಂ ಆಗಲಿ, ರಮೇಶ ಜಾರಕಿಹೊಳಿಗೆ ಆದ ಅನ್ಯಾಯ ಪ್ರತಿಭಟಿಸಿ ಪಕ್ಷಕ್ಕೆ ಬಂದಿದ್ದಾರೆ| ಕುಮಟಳ್ಳಿ ಪಕ್ಷಕ್ಕೆ ಬರುವಾಗ ಏನು ಆಶ್ವಾಸನೆ ಕೊಟ್ಟಿದ್ದಾರೆ ಗೊತ್ತಿಲ್ಲ, ಆಶ್ವಾಸನೆ ಕೊಟ್ಟಿದ್ದಲ್ಲಿ ಅದನ್ನ ಈಡೇರಿಸಬೇಕಾದದ್ದು ಪಕ್ಷದ ಕರ್ತವ್ಯ| 


ವಿಜಯಪುರ(ಫೆ.05):  ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ಕೊಡಲೇಬೇಕು. ಈ ಭಾಗದ ನಾಯಕರ ಧ್ವನಿಗೆ ನನ್ನ ಬೆಂಬಲವಿದೆ. ಸಚಿವ ಸ್ಥಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ಸಮಾನತೆ ಇರಬೇಕು. ಸಚಿವ ಸ್ಥಾನ ವಂಚಿತ ಜಿಲ್ಲೆಗಳಿಗೂ ಸಚಿವ ಸ್ಥಾನ ನೀಡಬೇಕು. ಇದನ್ನ ಸರಿದೂಗಿಸಲು ಯಾರು ತ್ಯಾಗ ಮಾಡಬೇಕಿದೆ ಅವರು ತ್ಯಾಗ ಮಾಡಲಿ ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮವರ ಜೊತೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಗಟ್ಟಿಯಾಗಬೇಕಾದರೆ ರಾಜುಗೌಡ, ದತ್ತಾತ್ರೇಯ ಪಾಟೀಲ ಅಲ್ಲಿನ ಶಾಸಕರ ಭಾವನೆಗಳಿಗೆ ಸ್ಪಂದಿಸಬೇಕಿದೆ ಎಂದು ತಿಳಿಸಿದ್ದಾರೆ.
ಸಿ ಪಿ ಯೋಗಿಶ್ವರ್‌ಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಅಸ್ಥಿತ್ವಕ್ಕೆ ಬರಲು ನಡೆದ ಆಪರೇಷನ್‌ನಲ್ಲಿ ಸಿಪಿ ಯೋಗಿಶ್ವರ, ರಮೇಶ ಜಾರಕಿಹೊಳಿ ಸೇರಿ ಎಲ್ಲರ ಪ್ರಯತ್ನವಿದೆ. ಹಿಂದೆ ನಡೆದ ಸಭೆಗಳಲ್ಲಿ ಕೆಲವರು ಸಿಎಂಗೆ ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬರಬೇಕು, ನಮಗೆ ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ ಎಂದಿದ್ದಾರೆ. ಅಂತಹವರು ಈಗ ಸಚಿವರಾಗಿದ್ದಾರೆ. ಅವರು ತಮ್ಮ ಸಚಿವ ಸ್ಥಾನಗಳನ್ನ ಬಿಟ್ಟು ಕೊಡಲಿ, ಸರ್ಕಾರ ಬರಲು ಪ್ರಯತ್ನಿಸಿದವರಿಗೆ ಸಚಿವ ಸ್ಥಾನ ಕೊಟ್ಟರೇ ತಪ್ಪೆನಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸೈನಿಕನ ಪರ ಯತ್ನಾಳ್ ಬ್ಯಾಟಿಂಗ್ ಬೀಸಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವ ಸ್ಥಾನಗಳ ಆಕಾಂಕ್ಷಿಗಳ ಪ್ರತ್ಯೇಕ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಪ್ರತ್ಯೇಕ ಸಭೆ ಅಲ್ಲ, ಭಿನ್ನಮತವು ಅಲ್ಲ, ಅತೃಪ್ತಿಯು ಅಲ್ಲ, ಅವರ ಭಾವನೆಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಒಂದು ಕಡೆ ಸೇರಿ ಚರ್ಚೆ ಮಾಡೋದು ತಪ್ಪಲ್ಲ. ಸಿಎಂ, ಪಕ್ಷದ ಮೇಲೆ ಒತ್ತಡ ತಂತ್ರ ಮಾಡೋದು ಬೇಡಿಕೆ ಮುಂದಿಡೋದು ಅವರ ಕರ್ತವ್ಯ ಎಂದು ಹೇಳಿದ್ದಾರೆ. 

ಪಾಪ ಮಹೇಶ ಕುಮಟಳ್ಳಿ ಸಭ್ಯಸ್ಥ ಮನುಷ್ಯರಾಗಿದ್ದಾರೆ. ಅವರು ರಾಜೀನಾಮೆ ನೀಡುವ ಅವಶ್ಯಕತೆ ಇರಲಿಲ್ಲ. ಆದರೂ ಯಡಿಯೂರಪ್ಪ ಸಿಎಂ ಆಗಲಿ, ರಮೇಶ ಜಾರಕಿಹೊಳಿಗೆ ಆದ ಅನ್ಯಾಯ ಪ್ರತಿಭಟಿಸಿ ಪಕ್ಷಕ್ಕೆ ಬಂದಿದ್ದಾರೆ. ಅವರು ಪಕ್ಷಕ್ಕೆ ಬರುವಾಗ ಏನು ಆಶ್ವಾಸನೆ ಕೊಟ್ಟಿದ್ದಾರೆ ಗೊತ್ತಿಲ್ಲ, ಆಶ್ವಾಸನೆ ಕೊಟ್ಟಿದ್ದಲ್ಲಿ ಅದನ್ನ ಈಡೇರಿಸಬೇಕಾದದ್ದು ಪಕ್ಷದ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ. 

ಗಾಂಧೀಜಿ ವಿರುದ್ಧ ಸಂಸದ ಅನಂತಕುಮಾರ್ ಅವಹೇಳನಕಾರಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಹೇಳಿಕೆ ನಾನು ಗಮನಿಸಿಲ್ಲ. ನಾನು ಸಾರ್ವಜನಿಕ ಕೆಲಸಗಳಲ್ಲಿ ಬ್ಯೂಸಿ ಇದ್ದೇನೆ. ಅವರು ಏನು ಹೇಳಿಕೆ ನೀಡಿದ್ದಾರೆ ಅನ್ನೋದನ್ನ ನೋಡಿಕೊಂಡು ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದ್ದಾರೆ. 

ತ್ಯಾಗ ಮಾಡಿ ಎಂದವರು ನಾಯಕರೇ ಅಲ್ಲಾ ಎಂದ ಮಾಜಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸ್ವ ಪಕ್ಷೀಯ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ, ರಮೇಶ ಜಿಗಜಿಣಗಿಯೇ ನಾಯಕರಲ್ಲ. ನಮ್ಮ ಬಗ್ಗೆ ಮಾತನಾಡಲು ಇವರಿಗೆ ಏನು ಅಧಿಕಾರವಿದೆ. ನಾವೇನಿದ್ದೀವೆ ಎಂಬುದು ನಮಗೆ ಗೊತ್ತಿದೆ. ನಮಗೆ ಜಿಗಜಿಣಗಿ ಸರ್ಟಿಫಿಕೇಟ್ ಬೇಡ. ಇವರ ಸರ್ಟಿಫಿಕೇಟ್‌ನಿಂದ ಶಾಸಕ, ಎಂಪಿ, ಎಮ್ ಎಲ್ ಸಿ ಆಗಿಲ್ಲ. ನಾನು ಎಂಪಿ ಇದ್ದಾಗ 800 ಹಳ್ಳಿಗಳಲ್ಲಿ ಸುತ್ತಾಡಿದ್ದೇನೆ. ಹಳ್ಳಿಗಳಲ್ಲಿ ಈಗಲೂ ಸಂಸದ ಎಂದು ನನ್ನ ಹೆಸರಿನ ಬೋರ್ಡ್‌ಗಳಿವೆ. 15 ವರ್ಷದಿಂದ ಸಂಸದರಾಗಿರುವ ಇವರ ಬೋರ್ಡ್ ಎಲ್ಲಿವೆ ತೋರಿಸಿ ಎಂದು ಸವಾಲು ಹಾಕಿದ್ದಾರೆ. 
 

click me!