ಸಚಿವ ಸಂಪುಟ ವಿಸ್ತರಣೆ: 'ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು'

Suvarna News   | Asianet News
Published : Feb 03, 2020, 02:18 PM ISTUpdated : Feb 03, 2020, 04:23 PM IST
ಸಚಿವ ಸಂಪುಟ ವಿಸ್ತರಣೆ: 'ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು'

ಸಾರಾಂಶ

ಸ್ಥಿರ ಸರ್ಕಾರಕ್ಕಾಗಿ ಕೆಲ ಸಚಿವರು ತ್ಯಾಗ ಮಾಡಬೇಕು| ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು| ನಾನು ಸಚಿವನಾಗಲು ಲಾಬಿ ಮಾಡಿಲ್ಲ| ಈ ಹಿಂದೆ ಲಾಬಿ ಮಾಡದೇ ಕೇಂದ್ರ ಸಚಿವನಾಗಿದ್ದೆ ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ| 

ವಿಜಯಪುರ(ಫೆ.03): ಸ್ಥಿರ ಸರ್ಕಾರಕ್ಕಾಗಿ ಕೆಲ ಸಚಿವರು ತ್ಯಾಗ ಮಾಡಬೇಕು. ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು. ನಾನು ಸಚಿವನಾಗಲು ಲಾಬಿ ಮಾಡಿಲ್ಲಾ, ಈ ಹಿಂದೆ ಲಾಬಿ ಮಾಡದೇ ಕೇಂದ್ರ ಸಚಿವನಾಗಿದ್ದೆ, ಅಟಲ್ ಜಿ ಹಾಗೂ ಆಡ್ವಾನಿ, ಅನಂತಕುಮಾರ ಕರೆದು ಕೇಂದ್ರ ಮಂತ್ರಿ ಮಾಡಿದ್ದರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸದ್ಯ ಶಾಸಕನಾಗಿ ವಿಜಯಪುರ ನಗರದ ಅಭಿವೃದ್ಧಿಗೆ ಆಧ್ಯತೆ ನೀಡುತ್ತಿದ್ದೇನೆ. ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಸಚಿವರ ಮೌಲ್ಯಮಾಪನ ನಡೆಸಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲ ಸಚಿವರು ವಿಧಾನಸೌಧ ಹಾಗೂ ವಿಕಾಸಸೌಧದತ್ತ ಸುಳಿಯಲ್ಲ, ಅವರನ್ನು ಶಾಸಕರಾದ ನಾವು ಸಚಿವರನ್ನು ಹುಡುಕಾಡಬೇಕಾಗಿದೆ. ಅವರ ಪಿಎಗಳೂ ಸಹ ಸಿಗುತ್ತಿಲ್ಲ ಎಂದು ತಮ್ಮದೇ ಸರ್ಕಾರದ ಸಚಿವರ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಕಳಪೆ ಸಾಧನೆ ಮಾಡಿದ ಸಚಿವರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಸಚಿವ ಸ್ಥಾನ ಕಳೆದುಕೊಂಡರೆ ಅವರೇನು ಬಂಡಾಯ ಏಳುವುದಿಲ್ಲ, ಬಂಡಾಯ ಎದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗುವುದಿಲ್ಲ. ಮೂಲ ಹಾಗೂ ವಲಸಿಗರೆನ್ನುವುದು ಕ್ಯಾನ್ಸರ್ ಇದ್ದ ಹಾಗೆ ಇದು ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ಹೇಳಿದ್ದಾರೆ. 
"

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!