ಮದ್ಯದಂಗಡಿ ತೆರೆಯಿರಿ ಎಂದು ಬಂದವನಿಗೆ ಶಾಸಕರ ಫುಲ್ ಕ್ಲಾಸ್

By Suvarna News  |  First Published Dec 30, 2019, 10:11 AM IST

ಮದ್ಯದಂಗಡಿ ತೆರೆಯಿರಿ ಎಂದು ಕೇಳಲು ಬಂದಿದ್ದ ಕುಡುಕನೋರ್ವನಿಗೆ ಶಾಸಕರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ. 


ಹಾಸನ [ಡಿ.30]: ಮದ್ಯದಂಗಡಿ ತೆರೆಯಬೇಕು ಎಂದು ಮನವಿ ಮಾಡಲು ಬಂದಿದ್ದ ಕುಡಕನೋರ್ವನಿಗೆ ಶಾಸಕರು ಕ್ಲಾಸ್ ತೆಗೆದುಕೊಂಡಿರುವ ಘಟನೆ  ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆ ಅರಕಲಗೋಡು ತಾಲೂಕಿನ ಕಬ್ಬಳಿಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಡಿದು ಬಂದು ಪ್ರಶ್ನೆ ಮಾಡುತ್ತೀಯಾ ಎಂದು ಶಾಸಕ ಎಟಿ ರಾಮಸ್ವಾಮಿ ಕೆಂಡಾಮಂಡಲರಾಗಿದ್ದಾರೆ. 

Tap to resize

Latest Videos

ಬೆಳವಾಡಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವ ವಿಚಾರಕ್ಕಾಗಿ ಶಾಸಕರ ಭೇಟಿ ಮಾಡಲು ಆಗಮಿಸಿದ್ದು, ಈ ವೇಳೆ ಕುಡುಕನ ಮಾತಿಗೆ ಶಾಸಕರು ಆಕ್ರೋಶ ವದಯಕ್ತಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕುಡುಕನ ಮಾತಾಡುತ್ತಿದ್ದಂತೆ , ಏ ಕುಡಿದು ಬಂದು ಮಾತಾಡ್ತೀಯಾ.? ಚನ್ನಗಿರಲ್ಲ ನೋಡು. ನಡಿಯೋ ನೀನು. ಏನು ತಿಳಿದುಕೊಂಡಿದ್ದೀಯಾ?  ಯಾರ ಹತ್ರ ಮಾತಾಡ್ತಿದಿಯಾ, ಇನ್ನೊಂದು ಸಲ ಮಾತಾಡಿದ್ರೆ ನೋಡು ಎಂದು ಬೆವರಿಳಿಸಿದ್ದಾರೆ. 

ಅಲ್ಲದೇ  ಎಣ್ಣೆ ಅಂಗಡಿಯವನು ಕುಡಿಸಿ ಕಳಿಸಿದಾನಾ..? ನಿನಗೆ ನಾನು ಉತ್ತರ ಕೊಡಬೇಕಾ ಎಂದು ತಾಳ್ಮೆ ಕಳೆದುಕೊಂಡು ಸಿಟ್ಟಿಗೆದ್ದ  ರಾಮಸ್ವಾಮಿ ಅವರನ್ನು ಕಾರ್ಯಕರ್ತರು ಸಮಾಧಾನಪಡಿಸಿದರು. 

click me!