ಹೊಸ ವರ್ಷ ಆಚರಣೆ ಹಿನ್ನೆಲೆ: ಸರ್ಕಾರಿ ಶಾಲೆಗೆ ನುಗ್ಗಿ ರಂಪಾಟ ಮಾಡಿದ ಕಿಡಿಗೇಡಿಗಳು

Suvarna News   | Asianet News
Published : Jan 01, 2022, 02:22 PM IST
ಹೊಸ ವರ್ಷ ಆಚರಣೆ ಹಿನ್ನೆಲೆ: ಸರ್ಕಾರಿ ಶಾಲೆಗೆ ನುಗ್ಗಿ ರಂಪಾಟ ಮಾಡಿದ ಕಿಡಿಗೇಡಿಗಳು

ಸಾರಾಂಶ

ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ತಂಡವೊಂದು ಸರ್ಕಾರಿ ಕಿರಿಯ ಶಾಲೆಗೆ ನುಗ್ಗಿ ರಂಪಾಟ ಮಾಡಿರುವ ಘಟನೆ ‌ಮಾನ್ವಿ ತಾಲ್ಲೂಕಿನ ರಬ್ಬಣಕಲ್ ಗ್ರಾಮದಲ್ಲಿ ನಡೆದಿದೆ. ಹೊಸ ವರ್ಷ ಆಚರಣೆ ವೇಳೆ ಕಿಡಿಗೇಡಿಗಳು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿ ಶಾಲೆಯ ಬೀಗ ಮುರಿದಿದ್ದಾರೆ.

ರಾಯಚೂರು (ಜ. 1): ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ತಂಡವೊಂದು ಸರ್ಕಾರಿ ಕಿರಿಯ ಶಾಲೆಗೆ ನುಗ್ಗಿ ರಂಪಾಟ ಮಾಡಿರುವ ಘಟನೆ ‌ಮಾನ್ವಿ ತಾಲ್ಲೂಕಿನ ರಬ್ಬಣಕಲ್ ಗ್ರಾಮದಲ್ಲಿ ನಡೆದಿದೆ. ಹೊಸ ವರ್ಷ ಆಚರಣೆ ವೇಳೆ ಕಿಡಿಗೇಡಿಗಳು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿ ಶಾಲೆಯ ಬೀಗ ಮುರಿದಿದ್ದಾರೆ.

ಕುಡಿದ ಮತ್ತಿನಲ್ಲಿ ಬಿಸಿ ಊಟದ ಕೋಣೆಯಲ್ಲಿ ರಂಪಾಟ ಮಾಡಿ, ಮಕ್ಕಳಿಗೆ ನೀಡಲು ಇಟ್ಟ ಮೊಟ್ಟೆ, ಆಹಾರ ಸಾಮಾಗ್ರಿಗಳನ್ನು ಹಾಳು‌ ಮಾಡಿದ್ದಾರೆ. ಹಾಗೂ ನಲಿಕಲಿ ಕೋಣೆಯಲ್ಲಿನ ಪುಸ್ತಕಗಳನ್ನು ಈ ಪೊಕರಿಗಳು ಹರಿದು ಹಾಕಿದ್ದಾರೆ. ಬೆಳಗ್ಗೆ ‌ಶಾಲೆಗೆ ಶಿಕ್ಷಕರು ಹೋದಾಗ ಪ್ರಕರಣ ಬಯಲಾಗಿದ್ದು, ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Temple for Sudeep: ರಾಯಚೂರಿನಲ್ಲಿ ನೆಚ್ಚಿನ ನಟ ಕಿಚ್ಚಿನಿಗೆ ಫ್ಯಾನ್ಸ್ ದೇಗುಲ

ಹೆಣ್ಣು ಮಕ್ಕಳ ವಶೀಕರಣದ ಗ್ಯಾಂಗ್ ಅರೆಸ್ಟ್ : ಲಿಂಗಸೂಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಹೆಣ್ಣು ಮಕ್ಕಳ ವಶೀಕರಣ, ವೈರಿಗಳ ಸಂಹಾರ ಪುರುಷತ್ವ ವೃದ್ಧಿ, ಆಸ್ತಿ ಹೆಚ್ಚಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್  ಮಾಡಲಾಗಿದೆ. 

ಜನರಿಗೆ ಸುಳ್ಳು ಹೇಳಿ ವಂಚನೆ ಮಾಡುತ್ತಿದ್ದ ನಾಲ್ವರನ್ನು ಲಿಂಗಸಗೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗ (Shivamogga) ಮೂಲದ ಅಜಯ್ ದೇವಗನ್( 26), ಕರಡಕಲ್ ಗ್ರಾಮದ ಗಂಗಾಧರಯ್ಯ(48), ಹಟ್ಟಿ ಗ್ರಾಮದ ಅದೇಪ್ಪ( 70), ಕಲಬುರಗಿ ಮೂಲದ ಅಬ್ದುಲ್ ಅಫೀಜ್ ಅಲಿಯಾಸ್ ಶೋಯೆಬ್ (25) ಎಂದು ಗುರುತಿಸಲಾಗಿದೆ. 

ಬಂಧಿತ ಆರೋಪಿಗಳಿಂದ ಒಂದು ರೆಡ್ ಮರ್ಕ್ಯುರಿ, ಆನೆ ದಂತ, ಕಾಗೆ ಕಾಲು, ಬೆಕ್ಕಿನ ತಗಡು, ನಾಯಿಯ ಹಲ್ಲು, ದನಗಳ 16 ಉಗುರು, 1ಕೋಟಿ 29 ಲಕ್ಷ ರೂ. ಚೆಕ್ ಸೇರಿ 38 ಸಾವಿರ ನಗದು, ಒಂದು ಕಾರು ಹಾಗೂ ಒಂದು ಬೈಕ್, 3 ಮೊಬೈಲ್ ಜಪ್ತಿ ಮಾಡಲಾಗಿದೆ. 

ರಾಯಚೂರು ಜಿಲ್ಲೆಗೆ ಬರಲು ಅಧಿಕಾರಿಗಳ ಹಿಂದೇಟು : ಬಂದವರೂ ನಿಲ್ಲುತ್ತಿಲ್ಲ

ಆರೋಪಿಗಳು ಹೈದ್ರಾಬಾದ್ ಮೂಲದ ವ್ಯಕ್ತಿಗೆ 5 ಕೋಟಿಗೆ ಡೀಲ್ ಮಾಡಿದ್ದು, ಲಿಂಗಸೂಗೂರು ತಾ. ಗುಂತಗೋಳ ಬಳಿ 5-6 ಜನ ಸೇರಿ ಡೀಲ್ ಗೆ ಯತ್ನಿಸುತ್ತಿದ್ದರು. ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲಿಂಗಸೂಗೂರು ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ನಿಷೇದಿತ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ಲಿಂಗಸೂಗೂರು ಪೊಲೀಸರ ಕಾರ್ಯಕ್ಕೆ ರಾಯಚೂರು ಎಸ್ ಪಿ ನಿಖಿಲ್ .ಬಿ.   ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ