ಆರಾಧನಾ ಮಹೋತ್ಸವದ ವೇಳೆ ಕಂಡ ರಾಘವೇಂದ್ರ ಸ್ವಾಮಿ ಛಾಯೆ

By Web Desk  |  First Published Aug 28, 2018, 7:16 PM IST

ರಾಜ್ಯದ ಹಲವೆಡೆ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ನಡೆಯತ್ತಿದೆ. ಈ ನಡುವೆ ಹಾವೇರಿಯ ರಾಯರ ವೃಂದಾವನದಲ್ಲಿ ಸ್ವತಃ ರಾಯರೇ ದರ್ಶನ ನೀಡಿದ್ದಾರೆ. ಏನಿದು ಸುದ್ದಿ ಮುಂದಕ್ಕೆ ಓದಿ...


ಹಾವೇರಿ[ಆ.28]  ಹಾವೇರಿಯ ರಾಘವೇಂದ್ರ ಸ್ವಾಮಿಗಳ ಮಠದ ರಾಯರ ವೃಂದಾವನದಲ್ಲಿ ಸೋಮವಾರ ರಾಘವೇಂದ್ರ ಸ್ವಾಮಿಗಳ ಛಾಯೆ ಕಾಣಿಸಿಕೊಂಡ ಸುದ್ದಿ ನಗರದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಭಕ್ತರು ತಂಡೋಪತಂಡವಾಗಿ ಆಗಮಿಸಿ ದರ್ಶನ  ಪಡೆದಿದ್ದಾರೆ.

ಇಲ್ಲಿಯ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಬೆಳಗ್ಗೆಯಿಂದಲೇ ನಡೆದಿತ್ತು. ಸುಮಾರು 7 ಗಂಟೆ ವೇಳೆಗೆ ರಾಯರ ವೃಂದಾವನಕ್ಕೆ ಅಭಿಷೇಕ, ಅಷ್ಟೋತ್ತರ ನಾಮಾವಳಿ ಸಹಿತವಾಗಿ ಪೂಜಾ ಕಾರ್ಯಕ್ರಮ ನಡೆದಿತ್ತು.

Tap to resize

Latest Videos

ಆ ಸಂದರ್ಭದಲ್ಲಿ ಅಲ್ಲಿದ್ದ ಭಕ್ತರಿಗೆ ವೃಂದಾವನದಲ್ಲಿ ಸೂಕ್ಷ್ಮವಾಗಿ ರಾಯರ ಛಾಯೆ ಕಾಣಿಸಿದೆ.ಯರಂತೆ ಕಾಣುವ ಮುಖಭಾವ, ದೇಹ ಕಾಣಿಸಿಕೊಂಡಿದ್ದು ಭಕ್ತರನ್ನು ಪುಳಕಿತಗೊಳಿಸಿತು. ಈಸುದ್ದಿ ನಗರದೆಲ್ಲೆಡೆ ಹರಡಿ ತಂಡೋಪತಂಡವಾಗಿ ಆಗಮಿಸಿ ಆ ದೃಶ್ಯವನ್ನು ಕಣ್ಣು ತುಂಬಿಕೊಂಡರು.

click me!