ಪಗಡೆಯಾಡಿದ ಸಚಿವ ಸೋಮಣ್ಣ, ಸಂಸದ ಪ್ರತಾಪಸಿಂಹ

By Kannadaprabha NewsFirst Published Oct 4, 2019, 11:29 AM IST
Highlights

ಸಂಸದ ಪ್ರತಾಪ ಸಿಂಹ ಹಾಗೂ ಸಚಿವ ವಿ.ಸೋಮಣ್ಣ ಪಗಡೆ ಆಟ ಆಡದರು. ಈ ಮೂಲಕ ದಸರೆಯಲ್ಲಿ ಪಾರಂಪರಿಕ ಆಟ ಸ್ಪರ್ಧೆಗೆ ಚಾಲನೆ ನೀಡಿದರು.

ಮೈಸೂರು [ಅ.04] : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾರಂಪರಿಕ ಆಟಗಳ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಜೊತೆಗೆ ಅಂಗವಿಕಲ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ಕೂಡ ವೇದಿಕೆ ಕಲ್ಪಿಸಲಾಯಿತು. ಇದೇವೇಳೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪಾರಂಪರಿಕ ದಸರಾಗೂ ಚಾಲನೆ ನೀಡಲಾಯಿತು.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಯ ಗ್ರಾಮೀಣ ಜನರನ್ನು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮೂರು ದಿನಗಳು ಕರೆತಂದು ರಿಯಾಯಿತಿ ದರದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುತ್ತದೆ. ಈ ಬಾರಿ ವಸತಿ ಸಚಿವ ಸೋಮಣ್ಣ ತಮ್ಮ ಟ್ರಸ್ಟ್‌ ಮೂಲಕ ಉಚಿತವಾಗಿ ದಸರಾ ದರ್ಶನ ವ್ಯವಸ್ಥೆ ಮಾಡಿಸಿದ್ದಾರೆ.

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪಾರಂಪರಿಕ ಆಟಗಳ ಸ್ಪರ್ಧೆ ಏರ್ಪಡಿಸಿದೆ. ಸಚಿವ ಸೋಮಣ್ಣ ಹಾಗೂ ಸಂಸದ ಪ್ರತಾಪ್‌ ಸಿಂಹ ಪಗಡೆಯಾಡುವ ಮೂಲಕ ಈ ಸ್ಪರ್ಧೆಗೆ ಚಾಲನೆ ನೀಡಿದರು. ಜೆ.ಕೆ.ಮೈದಾನದಲ್ಲಿ ಅಂಗವಿಕಲ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಏರ್ಪಡಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಂಚ ಕವಿಗೋಷ್ಟಿಸರಣಿಯಲ್ಲಿ ಜಗನ್ಮೋಹನ ಅರಮನೆಯಲ್ಲಿ ನಡೆದ ವಿಕಾಸ ಗೋಷ್ಠಿಯನ್ನು ಚಲನಚಿತ್ರ ಸಾಹಿತಿ ಕವಿರಾಜ್‌ ಉದ್ಘಾಟಿಸಿದರು. ಸಾಹಿತಿ ಹೇಮಾ ಪಟ್ಟಣಶೆಟ್ಟಿಮಾತನಾಡಿದರು. ಉಳಿದಂತೆ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಚಲನಚಿತ್ರೋತ್ಸವ, ಕುಸ್ತಿ ಪಂದ್ಯಾವಳಿ ಹಾಗೂ ಕ್ರೀಡಾಕೂಟ ನಡೆದವು. ಸಂಜೆ ಅರಮನೆ ಆವರಣದಲ್ಲಿ ವಿಜಯಪ್ರಕಾಶ್‌ ಅವರ ಗಾನಸಂಭ್ರಮ ಪ್ರೇಕ್ಷಕರನ್ನು ರಂಜಿಸಿತು. ಯುವ ದಸರಾ ಸೇರಿದಂತೆ ವಿವಿಧ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನತೆ ಆಸ್ವಾದಿಸಿದರು.

click me!