'ಜವಾಬ್ದಾರಿಯುತ ವಕೀಲೆ ಹೀಗೆ ಮಸಿ ಬಳಿದಿದ್ದು ಸರಿ ಅಲ್ಲ'

By Kannadaprabha News  |  First Published Feb 5, 2021, 4:47 PM IST

ಚಿಂತಕ ಕೆಎಸ್ ಭಗವಾನ್ ಅವರ ಮುಖಕ್ಕೆ ವಕೀಲೆಯೋರ್ವರು ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ ವಕೀಲೆ ಹೀಗೆ ನಡೆದುಕೊಂಡಿದ್ದು ಸರಿ ಅಲ್ಲ ಎಂದರು.


  ಚಿಕ್ಕಬಳ್ಳಾಪುರ (ಫೆ.05):  ಒಬ್ಬ ಜವಾಬ್ದಾರಿಯುತ ವಕೀಲೆ ಕೋರ್ಟ್ ಆವರಣದಲ್ಲಿ ಆ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಚಿಂತಕ ಭಗವಾನ್ ಮೇಲೆ ವಕೀಲೆ ಮಸಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. 

ಚಿಕ್ಕಬಳ್ಳಾಪುರದ ಕಲ್ಲಿನಾಯಕನಹಳ್ಳಿ ಗ್ರಾಮದಲ್ಲಿಂದು ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಬ್ಬ ನ್ಯಾಯವಾದಿ ಆ ರೀತಿ ಮಾಡಿದರೆ ಸಮಾಜಕ್ಕೆ ಒಂದು ಕೆಟ್ಟ ಸಂದೇಶ ಹೋಗುತ್ತದೆ ಎಂದು ಅಸಮಾಧಾನ ಹೊರಹಾಕಿದರು.

Tap to resize

Latest Videos

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆಗೆ ಸಂಕಷ್ಟ...!

ಹಾಗಂತ ನಾನು ಭಗವಾನ್ ರನ್ನ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಭಗವಾನ್ ಏನು ಅಂತ ಎಲ್ಲರಿಗೂ ಗೊತ್ತು. ಆತ ಸಾಮಾನ್ಯ ಜನರ ಭಾವನೆಗಳ ಮೇಲೆ ಹಲ್ಲೆ ಮಾಡುತ್ತಾ ಬಂದಿದ್ದಾನೆ.  ಆತನಿಗೆ ಅವರ ತಂದೆ ತಾಯಿಗಳು ಅದ್ಯಾಗೋ ಭಗವಾನ್ ಅಂತ ಹೆಸರು ಇಟ್ಟುಬಿಟ್ಟಿದ್ದಾರೆ ಎಂದರು. 

ಭಗವಾನ್ ಅನ್ನೋ ವ್ಯಕ್ತಿ ಬುದ್ಧಿಜೀವಿ ಅನ್ನೋ ಪದಕ್ಕೆ ಅಪವಾದ ಎಂಬಂತಿದ್ದಾನೆ ಎಂದು ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಶಾಲೆಗೆ ಭೇಟಿ ಕೊಟ್ಟು ಸುರೇಶ್ ಕುಮಾರ್ ಹೇಳಿದರು.

ಬೆಂಗಳೂರು ಕೋರ್ಟ್ ಆವರಣದಲ್ಲೇ ಕೆ ಎಸ್‌ ಭಗವಾನ್ ಅವರ ಮುಖಕ್ಕೆ ವಕೀಲೆ ಮಸಿ ಬಳಿದಿದ್ದರು. 

click me!