ಆರೋಗ್ಯ ಸಚಿವ ಶ್ರೀ ರಾಮುಲು ಅವರ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಸಿದ್ಧ ಹಂಪಿಗೆ ತೆರಳಿ ಪಿಂಡ ಪ್ರದಾನ ಮಾಡಿದ್ದಾರೆ.
ಬಳ್ಳಾರಿ(ಸೆ.15): ಕಳೆದ ತಿಂಗಳು ತಾಯಿ ಮೃತಪಟ್ಟಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ದಕ್ಷಿಣ ಕಾಶಿ ಹಂಪಿಯಲ್ಲಿ ಸೋಮವಾರ ಪಿಂಡಪ್ರದಾನ ಮಾಡಿದರು.
ಮಾಜಿ ಸಂಸದ ಹಾಗೂ ಕುಟುಂಬ ಸದಸ್ಯರಾದ ಸಣ್ಣ ಫಕ್ಕೀರಪ್ಪ ಅವರೊಂದಿಗೆ ಬೆಳಗ್ಗೆಯೇ ಹಂಪಿಗೆ ಭೇಟಿ ನೀಡಿದ ಸಚಿವರು, ಹಂಪಿಯ ಕೋದಂಡರಾಮ ದೇವಸ್ಥಾನ ಬಳಿ ಪುರೋಹಿತರೊಂದಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಂಡರು.
ಪಕ್ಷ ಮಾಸವಾಗಿರುವ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಹೊತ್ತು ಪೂಜೆ ನಡೆಸಿ, ತನ್ನ ತಾಯಿ ಸೇರಿದಂತೆ ರಾಜಕೀಯ ಗುರುಗಳಾದ ಸುಷ್ಮಾ ಸ್ವರಾಜ್, ಮಾಜಿ ಕೇಂದ್ರ ಸಚಿವ ಅನಂತಕುಮಾರ್, ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ಅವರ ತಂದೆ ಚೆಂಗಾರೆಡ್ಡಿ, ತಾಯಿ ರುಕ್ಮಣಮ್ಮ ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಿ, ಬಳಿಕ ತುಂಗಭದ್ರಾ ನದಿಯಲ್ಲಿ ಪಿಂಡ ಪ್ರದಾನ ಮಾಡಿದರು.
ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ
ಬಳಿಕ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸಚಿವರು ಭೇಟಿ ನೀಡಿ ದರ್ಶನ ಪಡೆದರು.
ಕೊರೋನಾದಿಂದ ಗುಣಮುಖರಾಗಿದ್ದ ಶ್ರೀ ರಾಮುಲು ಅವರ ತಾಯಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದು, ಇದೀಗ ಅವರ ಸಂಪೂರ್ಣ ಕಾರ್ಯ ವಿದಾನಗಳನ್ನು ಪೂರೈಸಲಾಗಿದೆ.