ಈ ರೀತಿಯ ರಾಜಕಾರಣ ಮಾಡಲ್ಲ: ಶ್ರೀ ರಾಮುಲು ಅಸಮಾಧಾನ

Kannadaprabha News   | Asianet News
Published : Oct 18, 2020, 08:09 AM IST
ಈ ರೀತಿಯ ರಾಜಕಾರಣ ಮಾಡಲ್ಲ: ಶ್ರೀ ರಾಮುಲು ಅಸಮಾಧಾನ

ಸಾರಾಂಶ

ಎಂದಿಗೂ ಈ ರೀತಿಯ ರಾಜಕಾರಣ ಮಾಡಲ್ಲ ಎಂದು ಶ್ರೀ ರಾಮುಲು ಅಸಮಾಧಾನ ಹೊರಹಾಕಿದ್ದಾರೆ. 

ಚಿತರ್ದುರ್ಗ (ಅ.18): ವಿಧಾನಸಭೆ ಉಪ ಚುನಾವಣೆಯಲ್ಲಿ ಆರ್‌.ಆರ್‌. ನಗರದ ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ಕೇಸ್‌ ಹಾಕಿರೋದು ಚುನಾವಣಾ ಆಯೋಗ. 

ಈ ಸಂಬಂಧ ಸೇಡಿನ ರಾಜಕಾರಣ ಪ್ರಶ್ನೆಯೇ ಎದುರಾಗದು. ಸೇಡಿನ ರಾಜಕಾರಣ ಬಿಜೆಪಿ ಜಾಯಮಾನವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

'ನಾಯಕ ಸಮುದಾಯ ರಾಜಕೀಯವಾಗಿ ತುಳಿಯಲು ಬಿಜೆಪಿ ಯತ್ನ' ...

ಹಿರಿಯೂರಿನಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿಷ್ಪಕ್ಷಪಾತ ಕ್ರಮ ಇದಾಗಿದೆ. ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಡಿಕೆಶಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ.

ಮತದಾರರ ಬಳಿ ಅನುಕಂಪ ಗಿಟ್ಟಿಸಿಕೊಳ್ಳುವ ಅವರ ಪ್ರಯತ್ನ ಫಲಿಸದು. ವಿಧಾನ ಪರಿಷತ್‌ ಹಾಗೂ ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ ಉಪಚುನಾವಣೆ ಅಬ್ಬರವೂ ಜೋರಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!