ಅಮ್ಮನವರಿಗೆ ಕೋಟಿ ಲಿಂಗ ಮಾಡಬೇಕು ಎನ್ನುವ ಆಸೆ ಇತ್ತು| ಕೋಟಿ ಲಿಂಗ ಸ್ಥಾಪನೆ ಮಾಡಬೇಕು ಅವರು ಲಿಂಗಕ್ಯವಾದ್ರು ನಮ್ಮ ಸುತ್ತಮುತ್ತಲೂ ಇರುತ್ತಾರೆ: ಶ್ರೀರಾಮುಲು|
ಬಳ್ಳಾರಿ(ಮಾ.08): ಮಾತೇ ಮಾಣಿಕೇಶ್ವರಿ ಲಿಂಗೈಕ್ಯವಾಗಿರುವುದು ನೋವಾಗಿದೆ. ನಡೆದಾಡುವ ದೇವರಿದ್ದಂತೆ ಅವರು. ತಾಯಿಯ ಆಶೀರ್ವಾದ ನಾನು ಪಡೆದಿದ್ದೆ, ಧರ್ಮ ಪಾಲಿಸಿ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು. ಅಹಿಂಸೆ ಮಾರ್ಗ ಪಾಲಿಸಲೂ ಸೂಚನೆ ನೀಡಿದ್ದರು ಎಂದು ಸಚಿವ ಶ್ರೀರಾಮುಲು ಮಾತೇ ಮಾಣಿಕೇಶ್ವರಿ ಅಮ್ಮನವರನ್ನ ಸ್ಮರಿಸಿಕೊಂಡಿದ್ದಾರೆ.
ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಿಚಿತ್ರವಾದ್ರ ಸತ್ಯ ಅನ್ನಾಹರ ತ್ಯಜಿಸಿರೋದು ವಿಶೇಷ. ಗವಿಯಲ್ಲಿ ಹೋದ್ರೇ ತಿಂಗಳುಗಟ್ಟಲೇ ಹೊರ ಬರುತ್ತಿರಲಿಲ್ಲ. ಕ್ಯೂರಾಸಿಟಿಗೂ ಸಾಕಷ್ಟು ಪ್ರಶ್ನೆ ಕೇಳಿದ್ದೇನೆ. ಗಾಳಿಯ ಮೇಲೆ ಬದುಕಿದ್ದ ತಾಯಿ ಅವರು ನಿಜಕ್ಕೂ ದೇವರು. ತಮ್ಮ ಕೆಲಸ ತಾವೇ ನೋಡಿಕೊಳ್ಳುತ್ತಿದ್ದರು.ಸಾಕಷ್ಟು ಪವಾಡ ಮಾಡಿದ್ದಾರೆ. ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.ಶಿವರಾತ್ರಿಯಂದು ಭಕ್ತರಿ ದರ್ಶನ ನೀಡುತ್ತಿದ್ದರು. ಐದು ಲಕ್ಷ ಜನರಿಗೆ ಏಕಕಾಲಕ್ಕೆ ದರ್ಶನ ನೀಡುತ್ತಿದ್ದರು ಎಂದು ಹೇಳಿದ್ದಾರೆ.
ಹೈ.ಕ ಭಾಗದ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಲಿಂಗೈಕ್ಯ
ಅಮ್ಮನವರಿಗೆ ಕೋಟಿ ಲಿಂಗ ಮಾಡಬೇಕು ಎನ್ನುವ ಆಸೆ ಇತ್ತು. ಲಿಂಗ ದಾನ ಮಾಡಿ ಎಂದು ಹೇಳುತ್ತಿದ್ದರು. ಕೋಟಿ ಲಿಂಗ ಸ್ಥಾಪನೆ ಮಾಡಬೇಕು. ಅವರು ಲಿಂಗಕ್ಯವಾದ್ರು ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅಮೆರಿಕ ಸೈಂಟಿಸ್ಟ್ ಬಂದು ಮಾಣಿಕ್ಕೇಶ್ವರಿ ಅವರನ್ನ ಪರೀಕ್ಷೆ ಮಾಡಿದ್ದರು ಅವರ ಪರೀಕ್ಷೆಯಲ್ಲಿಯೂ ಅವರು ಊಟ ಮಾಡುತ್ತಿದ್ದರು ಅನ್ನೋದು ಸಾಬೀತಾಗಿರಲಿಲ್ಲ ಎಂದು ಹೇಳಿದ್ದಾರೆ.