ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ವಿವಾಹ ಸಮಾರಂಭ ನೆರವೇರಿದ್ದು,ಈ ಅದ್ದೂರಿ ವಿವಾಹದ ಬಗ್ಗೆ ಸ್ವತಃ ರಾಮುಲು ಅವರೇ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು [ಮಾ.05]: ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ಪುತ್ರಿ ವಿವಾಹ ಸಮಾರಂಭ ನೆರವೇರಿದೆ. ಅರಮನೆ ಆವರಣದಲ್ಲಿ ಅದ್ದೂರಿ ಸೆಟ್ ಅಡಿಯಲ್ಲಿ ರಾಮುಲು ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಸಮಾರಂಭದ ವೇಳೆ ಪ್ರಕ್ರಿಯಿಸಿ ಸಚಿವ ಶ್ರೀ ರಾಮುಲು, ಈ ಸಮಾರಂಭಕ್ಕೆ ರಾಜ್ಯದಲ್ಲಿರುವ ನನ್ನ ಆಪ್ತರು ಬಮಧುಗಳು ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ. ಮಗಳ ಮದುವೆಯನ್ನು ಜನರ ನಡುವೆ ಮಾಡಬೇಕು ಎನ್ನುವ ಆಸೆ ಇತ್ತು. ಅದರಂತೆ ಇಂದು ನನ್ನ ಬಂಧುಗಳ ಮಧ್ಯೆಯೇ ವಿವಾಹ ನೆರವೇರಿದೆ ಎಂದರು.
ಶ್ರೀ ರಾಮುಲು ಎಂತಹ ವ್ಯಕ್ತಿ ಎನ್ನುವುದು ಜನರಿಗೆ ಗೊತ್ತು. ಸಾಕಷ್ಟು ವರ್ಷಗಳಿಂದ ರೈತರಿಗಾಗಿ ಹಲವು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದರು.
ಸಪ್ತಪದಿ ತುಳಿದ ಶ್ರೀರಾಮುಲು ಪುತ್ರಿ: ಇಲ್ಲಿದೆ ಅದ್ದೂರಿ ವಿವಾಹ ಸಮಾರಂಭದ ಝಲಕ್...
ಇನ್ನು ಪುತ್ರಿಯ ಅದ್ದೂರಿ ವಿವಾಹದ ಬಗ್ಗೆ ಪ್ರತಿಕ್ರಿಯಿಸಿದ ರಾಮುಲು, ರಾಜ್ಯದಲ್ಲಿ ಸುಮಾರು 50 ಸಾವಿರ ಮದುವೆ ಮಾಡಿಸಿದ್ದೇನೆ. ಜನರ ಹತ್ತಿರ ಹೋಗಿ ಕೇಳಿ ಮದುವೆ ಮಾಡಿಸಿದ್ದೇನೆ. ಅವರೆಲ್ಲರ ಆಶೀರ್ವಾದವು ಇಂದು ನನ್ನ ಮಗಳಿಗೆ ಸಿಕ್ಕಿದೆ ಎಂದರು.
ನನ್ನ ಸ್ವಂತ ಮಗಳ ಮದುವೆ ರೀತಿಯೇ ಬಡವರ ಮದುವೆಗಳನ್ನು ಮಾಡಿಸಿದ್ದೇನೆ. ನನಗೆ ಅಂತಹ ಶಕ್ತಿಯನ್ನು ದೇವರು ನೀಡಿದ್ದಾನೆ. ಗದಗ ಬಳ್ಳಾರಿ ಜಿಲ್ಲೆಗಳಲ್ಲಿ ಇದೇ ರೀತಿ ಅನೇಕ ಮದುವೆಗಳನ್ನು ಮಾಡಿಸಿದ್ದೇನೆ ಎಂದರು.