ಜಮೀರ್‌ ಅಹ್ಮದ್ ಬಗ್ಗೆ ಭಾರಿ ಖಂಡನೆ :ನಿಲುವು ಸ್ಪಷ್ಟಪಡಿಲು ಆಗ್ರಹ

Suvarna News   | Asianet News
Published : Aug 14, 2020, 11:21 AM ISTUpdated : Aug 14, 2020, 01:25 PM IST
ಜಮೀರ್‌ ಅಹ್ಮದ್ ಬಗ್ಗೆ ಭಾರಿ  ಖಂಡನೆ :ನಿಲುವು ಸ್ಪಷ್ಟಪಡಿಲು ಆಗ್ರಹ

ಸಾರಾಂಶ

ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ವಿರುದ್ಧ ಗೃಹ ಸಚಿವ ಎಸ್ ಆರ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದು, ಬೆಂಗಳುರು ಗಲಭೆ ಬಗೆಗಿನ ಹೇಳಿಕೆಗಳ ಬಗ್ಗೆ ಸ್ಪಷ್ಟಪಡಿಸಬೇಕು ಎಂದರು. 

ಬೆಂಗಳೂರು (ಆ.14) : ಗೋಲಿಬಾರ್‌ನಿಂದ ಸತ್ತವರ ಬಡತನದ ಬಗ್ಗೆ ಕಾಂಗ್ರೆಸ್‌ ನಾಯಕ ಜಮೀರ್‌ ಅಹಮದ್‌ ನೀಡಿರುವ ಹೇಳಿಕೆಯನ್ನು ಗೃಹ ಸಚಿವ ಎಸ್ ಆರ್ ಬೊಮ್ಮಾಯಿ ಖಂಡಿಸಿದ್ದಾರೆ.

"

ಜಮೀರ್‌ ಆಹ್ಮದ್‌ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಅವರ ಹೇಳಿಕೆಗಳಿಗೇ ಅವರೇ ಜವಾಬ್ದಾರರು. ಇಂತಹ ಸಂದರ್ಭದಲ್ಲಿ ಯಾರೊಬ್ಬರೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು. 

ಬೆಂಗಳೂರು ಗಲಭೆ: ಪೊಲೀಸ್ ಫೈರಿಂಗ್‌ನಲ್ಲಿ ಸತ್ತವರ ಅಂತ್ಯಕ್ರಿಯೆಲ್ಲಿ ಜಮೀರ್ ಭಾಗಿ..

ಹಾಗೆಯೇ ಸುಪ್ರೀಂಕೋರ್ಟ್‌ ನ ಮಾರ್ಗಸೂಚಿಯಂತೆ ಗಲಭೆಕೋರರಿಂದಲೇ ನಷ್ಟವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪುನರುಚ್ಚರಿಸಿದರು. ಗಲಭೆ ನಡೆದಿದ್ದ ಪ್ರದೇಶಗಳಲ್ಲಿ ಈಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ