ನಕಲಿ ಮನೆ ನೀಡಿದರೆ ಹುಷಾರ್‌ : ವಿ.ಸೋಮಣ್ಣ ಎಚ್ಚರಿಕೆ!

By Kannadaprabha News  |  First Published Dec 15, 2019, 12:03 PM IST

ನಕಲಿ ಮನೆ ನೀಡಿದರೆ ಎಚ್ಚರ ಎಂದು ಸಚಿವ ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. 


ಕುಣಿಗಲ್‌ [ಡಿ.15]:  ಯಾವುದೇ ಒತ್ತಡ ರಾಜಕೀಯಗಳಿಗೆ ಒಳಗಾಗದೆ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಮಂಜೂರು ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.

ತಾಲೂಕಿನ ಹುತ್ರಿದುರ್ಗ ಹೋಬಳಿಯ ಬೆಟ್ಟಹಳ್ಳಿ ಮಠದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Latest Videos

ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಉತ್ತಮ ರೀತಿಯ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದೇವೆ. ಕಷ್ಟದಲ್ಲಿದ್ದಾಗ ಮನುಷ್ಯನಿಗೆ ಎಷ್ಟುಹಣ ನೀಡಿದರೂ ಅದರ ಪ್ರಯೋಜನವಿಲ್ಲ. ಅವರಿಗೆ ಬೇಕಾಗಿರುವುದು ವಸತಿ. ಆ ವಸತಿಯನ್ನು ನೀಡಲು ನಾವು ಸಮರ್ಥರಾಗಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದರು.

ವಸತಿ ಹಗರಣ: ಒಂದೇ ಕುಟುಂಬಕ್ಕೆ 10 ಮನೆ!...

ಒಂದು ಮನೆಗೆ 5 ಬಿಲ್‌ಗಳು:  ಗ್ರಾಮ ಪಂಚಾಯಿತಿಗಳಲ್ಲಿ ಒಂದೇ ಮನೆಗೆ ಎರಡರಿಂದ ಐದು ಬಿಲ್‌ಗಳು ಮಾಡಿರುವ ನಿದರ್ಶನಗಳು ನಮ್ಮಲ್ಲಿ ಇವೆ. ಅಂತಹ ಘಟನೆಗಳು ಮರುಕಳಿಸದಂತೆ ನೈಜ ಫಲಾನುಭವಿಯನ್ನು ಗುರುತಿಸಿ ಅವರಿಗೆ ತಕ್ಷಣ ಅನುದಾನ ನೀಡಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದ ಅವರು, ಎಷ್ಟುಸಾವಿರ ಮನೆಗಳು ಬೇಕಾದರೂ ಮುಖ್ಯಮಂತ್ರಿಗಳು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಅಧಿಕಾರಿಗಳು ಕೂಡ ಕಾರ್ಯನಿರ್ವಹಿಸಿದಾಗ ಮಾತ್ರ ನಾವು ಗುರಿ ಮುಟ್ಟಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಬಂಡೇಮಠದ ಬಸವಲಿಂಗ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ತೋಟಗಾರಿಕಾ ಜಿಲ್ಲಾ ನಿರ್ದೇಶಕರಾದ ರಘು, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್‌, ಡಿವೈಎಸ್‌ಪಿ ಜಗದೀಶ್‌, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ್‌, ವೀರಶೈವ ಮುಖಂಡರಾದ ಎಲ್‌.ವಿ.ಪರಮಶಿವಯ್ಯ, ಮಹದೇವಯ್ಯ ಸೇರಿದಂತೆ ಇತರರು ಇದ್ದರು.

ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!