JDS ಭದ್ರಕೋಟೆ ಭೇದಿಸಿದ ಕೆಸಿಎನ್‌ಗೆ ಅಬಕಾರಿ ಖಾತೆ ಗಿಫ್ಟ್‌..?

Published : Dec 15, 2019, 11:57 AM IST
JDS ಭದ್ರಕೋಟೆ ಭೇದಿಸಿದ ಕೆಸಿಎನ್‌ಗೆ ಅಬಕಾರಿ ಖಾತೆ ಗಿಫ್ಟ್‌..?

ಸಾರಾಂಶ

ಜೆಡಿಎಸ್‌ ಭದ್ರಕೋಟೆ ಭೇದಿಸಿದ ಕೆ. ಸಿ. ನಾರಾಯಣ ಗೌಡ ಅವರಿಗೆ ಪ್ರಭಾವಿ ಖಾತೆ ದೊರೆಯುವ ಸಾಧ್ಯತೆ ಇದೆ. ಕೆ.ಆರ್‌. ಪೇಟೆಯಲ್ಲಿ ಪ್ರಥಮ ಬಾರಿಗೆ ಕಮಲ ಅರಳಿಸಿದ ನಾರಾಯಣ ಗೌಡ ಅವರು ತಮ್ಮ ನೆಚ್ಚಿನ ಖಾತೆ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಮಂಡ್ಯ(ಡಿ.15): ಜೆಡಿಎಸ್‌ ಭದ್ರಕೋಟೆ ಭೇದಿಸಿದ ಕೆ. ಸಿ. ನಾರಾಯಣ ಗೌಡ ಅವರಿಗೆ ಪ್ರಭಾವಿ ಖಾತೆ ದೊರೆಯುವ ಸಾಧ್ಯತೆ ಇದೆ. ಕೆ.ಆರ್‌. ಪೇಟೆಯಲ್ಲಿ ಪ್ರಥಮ ಬಾರಿಗೆ ಕಮಲ ಅರಳಿಸಿದ ನಾರಾಯಣ ಗೌಡ ಅವರು ತಮ್ಮ ನೆಚ್ಚಿನ ಖಾತೆ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಕೆ.ಸಿ.ನಾರಾಯಣಗೌಡ ಪ್ರಭಾವಿ ಖಾತೆ ನಿರೀಕ್ಷೆಯಲ್ಲಿದ್ದು, ಜೆಡಿಎಸ್ ಭದ್ರಕೋಟೆ ಭೇದಿಸಿದ ನಾರಾಯಣಗೌಡರಿಗೆ ಪವರ್ ಫುಲ್ ಖಾತೆ ಗಿಫ್ಟ್ ಕೊಡುವ ಸಾಧ್ಯತೆಯೂ ಇದೆ. ಕೆ.ಆರ್.ಪೇಟೆ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ಸಿಎಂ‌ ಬಿಎಸ್‌ವೈ ಉತ್ತಮ ಖಾತೆ ನೀಡಿ ಪಕ್ಷ ಸಂಘಟನೆಗೆ ಮತ್ತಷ್ಟು ಪ್ರೇರೇಪಿಸುತ್ತಾರೆ ಎಂಬ ನಿರೀಕ್ಷೆ ನಾರಾಯಣ ಗೌಡರಿಗಿದೆ.

'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ

ಸಿಎಂ ಯಡಿಯೂರಪ್ಪ ತಮ್ಮ ತವರು ತಾಲೂಕಿನ ಶಾಸಕನಿಗೆ ಉತ್ತಮ ಖಾತೆ ಗಿಫ್ಟ್ ಆಗಿ ನೀಡುವ ಸಾಧ್ಯತೆಗಳಿದ್ದು, ಉತ್ತಮ ಖಾತೆ ನೀಡುವಂತೆ ಸಿಎಂಗೆ ನಾರಾಯಣಗೌಡ ಮನವಿ ಮಾಡಿದ್ದಾರೆ.

ಪಂಚಾಯತ್ ರಾಜ್ ಅಥವಾ ಅಬಕಾರಿ ಖಾತೆ ನೀಡುವಂತೆ ಸಿಎಂಗೆ ನಾರಾಯಣ ಗೌಡ ಮನವಿ ಮಾಡಿದ್ದು, ಜೆಡಿಎಸ್ ಭದ್ರ ಕೋಟೆ ಭೇದಿಸಿದ ನಾರಾಯಣಗೌಡರಿಗೆ ಸಿಎಂ ಉತ್ತಮ ಖಾತೆ ನೀಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ನಾರಾಯಣಗೌಡ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಲಿದೆ.

ಮಂಗಳೂರು: ಫಾಸ್ಟ್‌ಟ್ಯಾಗ್ ಇಲ್ಲದೆಯೂ ನೀವಿಲ್ಲಿ ಸಂಚರಿಸಬಹುದು..!

PREV
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ