ಯಾವುದೇ ಇಲಾಖೆ ಇರಲಿ ಅಧಿಕಾರ ಚಲಾಯಿಸಲು ಮುಖ್ಯಮಂತ್ರಿಗೆ ಅಧಿಕಾರ ಇದೆ| ಅನೇಕ ಮುಖ್ಯಮಂತ್ರಿಗಳು ಇಂತಹ ಅಧಿಕಾರವನ್ನು ಚಲಾಯಿಸಿದ್ದಾರೆ| ಯಡಿಯೂರಪ್ಪ ಬಳಿ ಹಣಕಾಸು ಖಾತೆಯೂ ಇದೆ, ಹೀಗಾಗಿ ಯಡಿಯೂರಪ್ಪ ಅವರದ್ದು ತಪ್ಪಿಲ್ಲ: ಹೆಬ್ಬಾರ್|
ಕಾರವಾರ(ಏ.03): ರಾಜ್ಯಪಾಲರಿಗೆ ಪತ್ರ ಬರೆಯುವ ಅನಿವಾರ್ಯತೆ, ಅವಶ್ಯಕತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಇರಲಿಲ್ಲ ಎಂದು ಹೇಳುವ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೆ ಇಲಾಖೆ ಇರಲಿ ಅಧಿಕಾರ ಚಲಾಯಿಸಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ಇದೆ. ಅದು ಕಾನೂನು ಬದ್ಧವಾಗಿಯೂ ಇದೆ. ಅನೇಕ ಮುಖ್ಯಮಂತ್ರಿಗಳು ಇಂತಹ ಅಧಿಕಾರವನ್ನು ಚಲಾಯಿಸಿದ್ದಾರೆ. ಯಡಿಯೂರಪ್ಪ ಅವರ ಬಳಿ ಹಣಕಾಸು ಖಾತೆಯೂ ಇದೆ. ಹೀಗಾಗಿ ಯಡಿಯೂರಪ್ಪ ಅವರದ್ದು ತಪ್ಪಿಲ್ಲ. ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು. ಸಮಸ್ಯೆ ಎಬಿಸಿದ್ದರೆ ಅವರು ಪಕ್ಷದ ನಾಲ್ಕು ಗೋಡೆಯ ನಡುವೆ ಚರ್ಚಿಸಬಹುದಿತ್ತು. ಅದು ಬಿಟ್ಟು ರಾಜ್ಯಪಾಲರ ಬಳಿ ಹೋಗುವ ಅನಿವಾರ್ಯತೆ, ಅವಶ್ಯಕತೆ ಇರಲಿಲ್ಲ. ಇದರಿಂದ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಯಾಕೆ ಹೀಗೆ ಮಾಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ಈಶ್ವರಪ್ಪ ಅವರಿಂದ ಇನ್ನು ಮುಂದೆ ಇಂತಹ ತಪ್ಪು ಆಗಬಾರದು ಎಂದರು ಸಚಿವ ಹೆಬ್ಬಾರ.
undefined
ಕಾರವಾರ: ಕರಾವಳಿ ಭದ್ರತೆಗೆ ಕೋಸ್ಟ್ ಗಾರ್ಡ್‌ನ ಅತ್ಯಾಧುನಿಕ ಹಡಗುಗಳ ನಿಯೋಜನೆ
ಬಸವನಗೌಡ ಪಾಟೀಲ ಯತ್ನಾಳ್ ಕುರಿತು ಕೇಳಿದ ಪ್ರಶ್ನೆಗೆ, ಅವರು ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ವರಿಷ್ಠರು ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದಾರೆ. ಸ್ವಲ್ಪ ದಿನ ಕಾದುನೋಡಿ ಗೊತ್ತಾಗಲಿದೆ ಎಂದು ಹೇಳಿದರು.