ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ: ಟ್ರೈನ್‌ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ, ಸಚಿವ ಹೆಬ್ಬಾರ್‌

By Kannadaprabha News  |  First Published Sep 29, 2022, 4:00 AM IST

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಹಿಂದುಳಿದಿದೆ. ಎಲ್ಲಿಯವರೆಗೆ ಉತ್ತರ ಕರ್ನಾಟಕ ಉತ್ತರ ಕನ್ನಡದೊಂದಿಗೆ ಜೋಡಣೆಯಾಗುವುದಿಲ್ಲವೋ ಅಲ್ಲಿಯವರೆಗೂ ಅಭಿವೃದ್ಧಿ ಸಾಧ್ಯವಿಲ್ಲ: ಹೆಬ್ಬಾರ್‌ 


ಕಾರವಾರ(ಸೆ.29):  ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕ ಬೆಸೆಯುವ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ನಿರ್ಮಾಣವಾದಲ್ಲಿ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅಭಿಪ್ರಾಯಪಟ್ಟರು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣದ ಕುರಿತಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಮಹಾರಾಷ್ಟ್ರ ಘಟ್ಟದಲ್ಲಿ, ಕೊಡಗು, ಮಂಗಳೂರು ಘಟ್ಟದಲ್ಲಿ ರೈಲು ಚಲಿಸುತ್ತದೆ, ಗುಜರಾತ್‌ ಘಟ್ಟದಲ್ಲೂ ರೈಲು ಸಂಚರಿಸುತ್ತದೆ ಅಂತಾದರೆ ಉತ್ತರ ಕನ್ನಡ ಜಿಲ್ಲೆಯ 50 ಕಿ.ಮೀ. ಘಟ್ಟದಲ್ಲಿ ಯಾಕೆ ಚಲಿಸುವುದಿಲ್ಲ ಎನ್ನುವುದು ನಮ್ಮ ದೌರ್ಭಾಗ್ಯ. ಕರ್ನಾಟಕದಲ್ಲಿ ಮೂರು ಭಾಗಗಳಿವೆ. ಒಂದು ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ವಂಚಿತ ಪ್ರದೇಶಗಳಿವೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಹಿಂದುಳಿದಿದೆ. ಎಲ್ಲಿಯವರೆಗೆ ಉತ್ತರ ಕರ್ನಾಟಕ ಉತ್ತರ ಕನ್ನಡದೊಂದಿಗೆ ಜೋಡಣೆಯಾಗುವುದಿಲ್ಲವೋ ಅಲ್ಲಿಯವರೆಗೂ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.

Latest Videos

undefined

ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ: ನನಸಾಗುವತ್ತ ಉತ್ತರಕನ್ನಡ ಜನರ ಬಹುವರ್ಷಗಳ ಕನಸು

ತಮ್ಮ ಸಮಿತಿ ಬಹಳ ಯೋಚಿಸಿ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗಕ್ಕಾಗಿ ಏನೇನು ಆಗಬೇಕಿದೆಯೋ ಅದೆಲ್ಲವನ್ನು ಮಾಡಿ. ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಜೋಡಣೆಗಾಗಿ ಪೂರಕವಾಗಿ ಕಾರ್ಯನಿರ್ವಹಿಸಲು ಕೋರುವುದಾಗಿ ಅವರು ಹೇಳಿದರು.

ರಾಜ್ಯದ ಅಭಿವೃದ್ಧಿಗೂ ಈ ರೈಲು ಪೂರಕವಾಗಿದೆ. ರಾಷ್ಟ್ರ ಮಟ್ಟದ ನೌಕಾನೆಲೆ ಇಲ್ಲಿದೆ. ಅಲ್ಲಿಗೆ ಅವಶ್ಯವಿರುವ ಸರಕುಗಳನ್ನು ಸಾಗಿಸಲು ರೈಲು ಇಲ್ಲ, ರಸ್ತೆ ಮಾರ್ಗದ ಮೂಲಕ ಸಾಗಣೆಯಾಗುತ್ತಿದೆ. ಆದರೆ ಯಲ್ಲಾಪುರ-ಅಂಕೋಲಾ ರಸ್ತೆ ಪರಿಸ್ಥಿತಿ ಹೇಗಿದೆ ಎಂದು ತಾವು ನೋಡಿದ್ದೀರಿ, ಪ್ರತಿದಿನ ಅಪಘಾತಗಳಾಗಿ ಜನರು ಅಸು ನೀಗುತ್ತಿದ್ದಾರೆ. ಹೀಗಾಗಿ ಈ ರೈಲು ಯೋಜನೆಯ ಅವಶ್ಯಕತೆ ಇದೆ ಎಂದು ತಿಳಿಸಿದರು.
 

click me!