ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಸಚಿವ ಶಿವಾನಂದ ಪಾಟೀಲ

Published : May 11, 2026, 12:25 AM IST
Shivananda patil

ಸಾರಾಂಶ

ಸಹಕಾರಿ ಚಳವಳಿ ದೇಶದಲ್ಲಿ ದೊಡ್ಡ ಸಾಧನೆ ಮಾಡಿದೆ. ಬಡವರು ಆರ್ಥಿಕ ಸಧೃಡತೆಗೆ ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ. ಸಾಲ ಕೊಡುವುದು ಸುಲಭ ಆದರೆ ಸಾಲ ವಸೂಲಿ ಮಾಡುವುದು ಬಹಳ ಕಷ್ಟದ ಕೆಲಸ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಗುಳೇದಗುಡ್ಡ (ಮೇ.11): ಸಹಕಾರಿ ಚಳವಳಿ ದೇಶದಲ್ಲಿ ದೊಡ್ಡ ಸಾಧನೆ ಮಾಡಿದೆ. ಬಡವರು ಆರ್ಥಿಕ ಸಧೃಡತೆಗೆ ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ. ಸಾಲ ಕೊಡುವುದು ಸುಲಭ ಆದರೆ ಸಾಲ ವಸೂಲಿ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ. ಸಂಜಯ ಬರಗುಂಡಿಯವರು ಸಹಕಾರಿ ಬ್ಯಾಂಕ್‌ನ್ನು 25 ವರ್ಷಗಳ ಮುನ್ನಡೆಸಿಕೊಂಡು ಬಂದು ಇಂದು ಸ್ವಂತ ಕಟ್ಟಡ ನಿರ್ಮಿಸಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬಸವೇಶ್ವರ ಪತ್ತಿನ ಸಹಕಾರಿ ಸಂಘದ (25ನೇ ವಾರ್ಷಿಕೋತ್ಸವ) ರಜತ ಮಹೋತ್ಸವದ ಸಂದರ್ಭದಲ್ಲಿ ಬ್ಯಾಂಕಿನಲ್ಲಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಈ ದೇಶದಲ್ಲಿ ಸಹಕಾರಿ ಚಳವಳಿ ನಡೆಯದಿದ್ದರೆ ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬೆಳೆಯುವುದು ಕಷ್ಟವಾಗುತ್ತಿತ್ತು. ನೆಹರು, ವಲ್ಲಭಭಾಯಿ ಪಟೇಲರು ಸೇರಿ ಅನೇಕ ಮಹನೀಯರು ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಡೀ ದೇಶದಲ್ಲಿಯೇ ಹೆಚ್ಚಿನ ಸಾಲ ಸೌಲಭ್ಯ ಕೊಡುವ ಏಕೈಕ ಬ್ಯಾಂಕ್ ಬಾಗಲಕೋಟೆ, ವಿಜಯಪುರ ಡಿಸಿಸಿ ಬ್ಯಾಂಕ್ ಎಂದು ಹೇಳಿದರು.

ಸಾಲಮನ್ನಾ

ಡಿಸಿಸಿ ಬ್ಯಾಂಕ್‌ ರೈತರಿಗೆ ನೆರವಾಗಿದೆ. ಸಕಲಾಕ್ಕೆ ಸಾಲ ಸಿಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಲ ನೀಡಿದಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ರೀತಿಯಲ್ಲಿ ಇಲ್ಲ. ಅಲ್ಲದೆ ವಿಪತ್ತು, ಬರ ಪರಿಸ್ಥಿಗಳು ಎದುರಾದಾಗ ರಾಜ್ಯ ಸರಕಾರಗಳು ಮಾಡಿದ ಸಾಲ ಮನ್ನಾದಿಂದ ವಿಜಯಪುರ ಹಾಗೂ ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ ಸುಮಾರು ₹7500 ಕೋಟಿಯಷ್ಟು ಸಾಲಮನ್ನಾ ಆಗಿದೆ ಎಂದರು. ಇಳಕಲ್ ಚಿತ್ತರಗಿ ಸಂಸ್ಥಾನದ ಗುರುಮಹಾಂತ ಶ್ರೀಗಳು, ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಶಿವಾನಂದ ಉದುಪುಡಿ, ಮುರಗೇಶ ಕಡ್ಲಿಮಟ್ಟಿ, ಮಹಾಂತೇಶ ಮಮದಾಪೂರ, ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜಯ ಬರಗುಂಡಿ, ಉಪಾಧ್ಯಕ್ಷ ಉಮೇಶ ಹುನಗುಂದ, ನಿರ್ದೇಶಕರಾದ ಚಂದ್ರಶೇಖರ ಹರವಿ, ಮುಪ್ಪಣ್ಣ ಶೀಲವಂತ, ರಮೇಶ ಅಗಸಿಮನಿ, ಚಂದ್ರು ಪಟ್ಟಣಶೆಟ್ಟಿ, ಸಂಗಪ್ಪ ಹಡಪದ, ಸಿದ್ಲಿಂಗಪ್ಪ ಬರಗುಂಡಿ, ಅಶೋಕ ಬರಗುಂಡಿ, ಮುತ್ತು ಮೊರಬದ, ರಾಚಣ್ಣ ಕೆರೂರು, ನಾಗಪ್ಪ ಚಿಂದಿ, ಬಸವರಾಜ ಬಂಡಿವಡ್ಡರ, ಶರಣಬಸಪ್ಪ ಚಿಕ್ಕನರಗುಂದ, ಮ್ಯಾನೇಜರ ರಮೇಶ ಹಡಪದ, ಸಂಗಮೇಶ ಜೋಗುರ ಸೇರಿದಂತೆ ಸೇರಿದಂತೆ ಇದ್ದರು.

PREV
Read more Articles on
click me!

Recommended Stories

ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ
ಈಜಲು ಹೋದ ಕೊಪ್ಪಳದ ಯುವಕ ನೀರಿನಲ್ಲಿ ಮುಳುಗಿ ಸಾವು, ಮತೃದೇಹಕ್ಕಾಗಿ ಹುಡುಕಾಟ