ಓರ್ವ ಯುವತಿಯಾಗಿ ಇಷ್ಟೊಂದು ಫೇಸ್ ಮಾಡಿತ್ತಿದ್ದಾಳೆ| ಸಮಾಜಕ್ಕೆ ಸಂದೇಶ ಕೊಡುತ್ತಿದ್ದಾಳೆ| ಸಿಎಂ ಆಗಲಿ, ಗೃಹ ಸಚಿವರಾಗಲಿ, ನಾನಾಗಲಿ ಅವಳಿಗೆ ರಕ್ಷಣೆ ಕೊಡುವುದರಲ್ಲಿ ಹಿಂದೇಟು ಹಾಕುವುದಿಲ್ಲ| ಒಬ್ಬ ಮಹಿಳೆಯಾಗಿ ಅವಳಿಗೆ ರಕ್ಷಣೆ ಕೊಡೋದು ನಮ್ಮ ಕರ್ತವ್ಯ: ಶಶಿಕಲಾ ಜೊಲ್ಲೆ|
ಬಾಗಲಕೋಟೆ(ಮಾ.27): ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಬಿಡುಗಡೆ ಮಾಡಿರುವ ವಿಡಿಯೋ ನಾನು ನೋಡಿಲ್ಲ. ಆದರೆ ಹಿಂದೆಯೂ ರಕ್ಷಣೆ ಕೇಳಿದ್ದಕ್ಕೆ ಸದನದಲ್ಲಿ ಸಿಎಂ ಬಿ..ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ನಾನು ಸಹ ಅವರ ಪರವಾಗಿದ್ದೇವೆ ಅಂತ ಹೇಳಿದ್ದೆವು. ಸಿಎಂ ಸಹ ಅಷ್ಟೇ ಸೀರಿಯಸ್ ಆಗಿ ನೋಡ್ತಿದ್ದಾರೆ. ಯುವತಿಯೂ ಸಹ ಯಾವುದೇ ರೀತಿ ಭಯಪಡಬೇಕಾದ ಅಗತ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ಸಿಡಿ ಲೇಡಿ ರಕ್ಷಣೆ ಕೇಳಿರುವ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓರ್ವ ಯುವತಿಯಾಗಿ ಇಷ್ಟೊಂದು ಫೇಸ್ ಮಾಡಿತ್ತಿದ್ದಾಳೆ. ಸಮಾಜಕ್ಕೆ ಸಂದೇಶ ಕೊಡುತ್ತಿದ್ದಾಳೆ. ಸಿಎಂ ಆಗಲಿ, ಗೃಹ ಸಚಿವರಾಗಲಿ, ನಾನಾಗಲಿ ಅವಳಿಗೆ ರಕ್ಷಣೆ ಕೊಡುವುದರಲ್ಲಿ ಹಿಂದೇಟು ಹಾಕುವುದಿಲ್ಲ. ಒಬ್ಬ ಮಹಿಳೆಯಾಗಿ ಅವಳಿಗೆ ರಕ್ಷಣೆ ಕೊಡೋದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
CD ಲೇಡಿಯ ಆಡಿಯೋದಲ್ಲಿ ಡಿಕೆಶಿ ಹೆಸ್ರು, ಇದಕ್ಕಿಂತ ದೊಡ್ಡ ಬಾಂಬ್ ಇದೆ ಎಂದ ಜಾರಕಿಹೊಳಿ
ಸಂತ್ರಸ್ತ ಯುವತಿ ತಪ್ಪು ಮಾಡಿದ್ದಾಳೋ, ಬಿಟ್ಟಿದ್ದಾಳೋ, ಅವಳ ಪರಿಸ್ಥಿತಿ ಏನಾಗಿದೆಯೋ ಅದು ನಮಗೆ ತನಿಖೆ ಮುಖಾಂತರ ಗೊತ್ತಾಗಲಿದೆ. ತನಿಖೆ ಬಳಿಕ ವರದಿ ಬರೋದು ಸೆಕೆಂಡರಿ. ನಾವು ಮೊದಲು ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿಯಾಗಿದೆ. ಸರ್ಕಾರ ಸಹ ಅವಳ ಜೊತೆಗಿದೆ. ತನಿಖೆ ಏನೇ ಆದ್ರೂ ನಾವು ರಕ್ಷಣೆ ಕೊಟ್ಟೆ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.