ಬೆಳಗಾವಿ-ಗೋವಾ ಸುಗಮ ಸಂಚಾರಕ್ಕೆ ಸಚಿವ ಜಾರಕಿಹೊಳಿ ಕ್ರಮ

By Kannadaprabha News  |  First Published Feb 24, 2024, 12:00 AM IST

ಕಣಕುಂಬಿ ಹತ್ತಿರ ಚೋರ್ಲಾ ರಸ್ತೆಯ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಲಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ. ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಬೆಳಗಾವಿ- ಗೋವಾ ರಸ್ತೆಗೆ ಈಗ ದುರಸ್ಥಿ ಭಾಗ್ಯ ಸಿಕ್ಕಿದೆ. ಗೋವಾಕ್ಕೆ ಹೋಗುವ ಪ್ರಯಾಣಿಕರು ಇನ್ಮುಂದೆ ಚಿಂತೆ ಮಾಡಬೇಕಿಲ್ಲ.


ಬೆಳಗಾವಿ(ಫೆ.24): ಬೆಳಗಾವಿ- ಚೋರ್ಲಾ -ಗೋವಾ ರಸ್ತೆ ಹದಗೆಟ್ಟಿದ್ದು, ಈ ರಸ್ತೆಯ ಪರಿಸ್ಥಿತಿ ಖುದ್ದಾಗಿ ಪರಿಶೀಲಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ರಸ್ತೆ ದುರಸ್ಥಿಗೆ ತುರ್ತು ಕ್ರಮ ಕೈಗೊಂಡಿದ್ದಾರೆ.

ಇಂದು(ಶನಿವಾರ) ಮಧ್ಯಾಹ್ನ 1 ಗಂಟೆಗೆ ಕಣಕುಂಬಿ ಹತ್ತಿರ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಚೋರ್ಲಾ ರಸ್ತೆಯ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಬೆಳಗಾವಿ- ಗೋವಾ ರಸ್ತೆಗೆ ಈಗ ದುರಸ್ಥಿ ಭಾಗ್ಯ ಸಿಕ್ಕಿದೆ. ಗೋವಾಕ್ಕೆ ಹೋಗುವ ಪ್ರಯಾಣಿಕರು ಇನ್ಮುಂದೆ ಚಿಂತೆ ಮಾಡಬೇಕಿಲ್ಲ.

Tap to resize

Latest Videos

ಬೆಳಗಾವಿ ಎಥೆನಾಲ್‌ ಉತ್ಪಾದನೆಯ ಹಬ್‌ ಆಗಲಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಬೆಳಗಾವಿ – ಚೋರ್ಲಾ ಮಾರ್ಗವಾಗಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬೆಳಗಾವಿ – ರಾಮನಗರ – ಗೋವಾ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಬೆಳಗಾವಿಯಿಂದ ಗೋವಾಗೆ ಹೋಗುವ ಬಹುತೇಕ ಎಲ್ಲ ವಾಹನಗಳು ಚೋರ್ಲಾ ಮಾರ್ಗದಲ್ಲಿ ಓಡಾಡುತ್ತಿವೆ. ಗೋವಾದಿಂದ ರಣಕುಂಡಿ ಕ್ರಾಸ್‌ ವರೆಗಿನ ಈ ರಸ್ತೆ 43.ಕಿ.ಮೀಟರ್‌ ಉದ್ದವಾಗಿದ್ದು, 58.90 ಕೋಟಿ ರೂಪಾಯಿ ವೆಚ್ಚದಲ್ಲಿ ಸುಧಾರಣೆ ಕಾರ್ಯ ಕೈಗೊಳ್ಳುತ್ತಿದ್ದು, 11 ತಿಂಗಳ ಅವಧಿಯಲ್ಲೇ ರಸ್ತೆ ದುರಸ್ತಿ ಕಾರ್ಯ ಮುಗಿಸುವ ಗುರಿ ಹೊಂದಲಾಗಿದೆ.

click me!