ಧಾರವಾಡ: ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳಿಗೆ ಸಚಿವ ಲಾಡ್‌ ಫುಲ್‌ಕ್ಲಾಸ್‌..!

By Girish Goudar  |  First Published Jun 6, 2023, 8:35 PM IST

ಮುಂಗಾರು ಹಂಗಾಮು ಸದ್ಯ ಆರಂಭವಾಗಿರುವ ಹಿನ್ನಲೆ ಅಧಿಕಾರಿಗಳು ಅದರಲ್ಲೂ ಕೃಷಿ ಇಲಾಖೆಯ ಅಧಿಕಾರಿಗಳು ಪೂರಕ ಮಾಹಿತಿಯನ್ನ ನಿಡದಿದ್ದಕ್ಕೆ ಅಧಿಕಾರಿಗಳಿಗಳಿಗೆ ಫುಲ್‌ಕ್ಲಾಸ್ ತೆಗೆದುಕೊಂಡ ಸಚಿವ ಸಂತೋಷ್ ಲಾಡ್


ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಜೂ.06): ಧಾರವಾಡ ತಾಲೂಕು ಪಂಚಾಯತ್ ಸಭೆಯಲ್ಲಿ ಮಾನ್ಯ ಕಾರ್ಮಿಕ‌ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಇಂದು(ಮಂಗಳವಾರ) ನಡೆಯಿತು. ಸಭೆಯಲ್ಲಿ ಅಧಿಕಾರಿಗಳು ಸಚಿವ ಸಂತೋಷ್ ಲಾಡ್‌ ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನ ನೀಡದ ಅಧಿಕಾರಿಗಳಿಗೆ ಫುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ.

Tap to resize

Latest Videos

ಮುಂಗಾರು ಹಂಗಾಮು ಸದ್ಯ ಆರಂಭವಾಗಿರುವ ಹಿನ್ನಲೆ ಅಧಿಕಾರಿಗಳು ಅದರಲ್ಲೂ ಕೃಷಿ ಇಲಾಖೆಯ ಅಧಿಕಾರಿಗಳು ಪೂರಕ ಮಾಹಿತಿಯನ್ನ ನಿಡದಿದ್ದಕ್ಕೆ ಸಚಿವ ಸಂತೋಷ್ ಲಾಡ್ ಅವರು ಅಧಿಕಾರಿಗಳಿಗಳಿಗೆ ಫುಲ್‌ಕ್ಲಾಸ್ ತೆಗೆದುಕೊಂಡರು. ಕೃಷಿ ಇಲಾಖೆಯಲ್ಲಿ ಯಾವುದೆ ಸರಕಾರ ಬಂದರೂ ಸಬ್ಸಿಡಿಯಲ್ಲಿ ರೈತತಿಗೆ ಗೊಬ್ಬರ ಬಿತ್ತನೆ ಬೀಜಗಳನ್ನ ನೀಡಲಾಗುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಮಾಹಿತಿಗಳನ್ನ ನನಗೆ ನೀಡಲು ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 

ಸಂಪುಟದಿಂದ ಕೈಬಿಟ್ಟಿದ್ದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ: ಪಕ್ಷದ ವಿರುದ್ಧವೇ ವಿನಯ್‌ ಕುಲಕರ್ಣಿ ಬಾಂಬ್‌

ಇನ್ನು ಸಚಿವ ಲಾಡ್‌ ಮಾತನಾಡಿ, ಮುಂದಿನ ಸಭೆಯೊಳಗೆ ಎಲ್ಲ ಅಧಿಕಾರಿಗಳು ಸೂಕ್ತವಾಗಿ ಮಾಹಿತಿಯನ್ನ ನೀಡಬೇಕಹ ಮಾಹಿತಿಯನ್ನ ನಿಡದಿದದ್ದರೆ ಕಾಟಾಚಾರದ ಸಭೆಯಾಗುತ್ತೆ ನಾವು ಸುಮ್ಮನೆ ಟಿ ಕುಡಿದು ಹೋಗಬೇಕಾಗುತ್ತೆ. ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಎಷ್ಟೆಷ್ಟು ಸಬ್ಸಿಡಿ ನೀಡಿದ್ದಿರಿ‌ ಎಂದ ಸಚಿವ ಪ್ರಶ್ನೆಗೆ ಅಧಿಕಾರಿಗಳ ಮಾಹಿತಿ ಇಲ್ಲದೆ ಸಭೆಗೆ ಬಂದ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. 

ಇನ್ನು ಪಕ್ಕದಲ್ಲೆ ಕುಳಿತ ಉಪವಿಭಾಗ ಅಧಿಕಾರಿ ಅಶೋಕ್ ತೇಲಿ ಧಾರವಾಡ ತಹಶಿಲ್ದಾರ ಅವರನ್ನ‌ ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಕೆಲ ಅಧಿಕಾರಿಗಳು ಸಭೆಯಲ್ಲಿ ಬ್ಯೂಸಿಯಾಗಿದ್ರೆ, ಕೆಲ ಅಧಿಕಾರಿಗಳು ಮೂಬೈಲ್‌ನಲ್ಲಿ ಬ್ಯೂಸಿಯಾಗಿದ್ರು. ನಮ್ಮ‌ ಹತ್ರ ಇದ್ದು ಯಾವೊಬ್ಬ ಅಧಿಕಾರಿ ಪೂರಕ ಮಾಹಿತಿಯನ್ನ ನಡದಿದ್ದಕ್ಕೆ ಸಚಿವರು ಗರಂ ಆಗಿ ಉಪವಿಭಾಗಾಧಿಕಾರಿ ಅವರಿಗೆ ಸೂಚನೆ ನೀಡಿದರು. 

ರಸಗೊಬ್ಬರ ಮಾರಾಟಕ್ಕೆ ಸರ್ಕಾರಿ ದರ ನಿಗಧಿ, ಹೆಚ್ಚುವರಿ ದರ ವಸೂಲಿಗೆ ಲೈಸನ್ಸ್ ರದ್ದತಿಗೆ ಜಿಲ್ಲಾಧಿಕಾರಿ ಕ್ರಮ

ಇನ್ನು ಆರೋಗ್ಯ ಇಲಾಖೆಯ ತಾಕೂಕು ಅಧಿಕಾರಿಗಳು ಮಾತನಾಡಿ ನಮಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಒಂದನ್ನ‌ ನಿಗದಿ ಗ್ರಾಮಕ್ಕೆ ಸರಕಾರ ಬಿಡುಗಡೆ ಮಾಡಬೇಕು‌. ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯ ಯಾವುದೆ ಮಾಹಿತಿ ನಿಡಿಲ್ಲ ಪ್ರತಿ ಸಭೆಗೆ ಎಲ್ಲ ಮಾಹಿತಿಗಳನ್ನ‌ ತರಬೇಕು ಎಂದು ಸಚಿವ ಸಂತೋಷ್ ಲಾಡ್ ಖಡಕ್‌ ವಾರ್ನಿಂಗ್ ನೀಡಿದರು. 

ಇನ್ನು ಸಭೆಯಲ್ಲಿ ಸಚಿವ‌ ಸಂತೋಷ್ ಲಾಡ್‌, ಉಪವಿಭಾಗಾಧಿಕಾರಿ ಅಶೋಕ್ ತೇಲಿ, ತಹಶಿಲ್ದಾರ , ತಾಲೂಕು ಪಂಚಾಯತಿ ಕಾರ್ಯನಿರ್ವಾಕ ಅಧಿಕಾರಿ ಆ ಡಬ್ಲು ಎಸ್ ಎಸ್ ಎನ್ ಗೌಡರ್,  ಇನ್ನು ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಿದ್ದರು. 

click me!