'ಜಾರಕಿಹೊಳಿಗೆ ತಲೆ ಸರಿ ಇಲ್ಲ, ಆತನ ಬಗ್ಗೆ ಏನು ಮಾತನಾಡೋದು'

By Kannadaprabha News  |  First Published Mar 15, 2020, 7:46 AM IST

ಜಲಸಂಪನ್ಮೂಲ ಖಾತೆಯನ್ನು ರಮೇಶ್‌ ಜಾರಕಿಹೊಳಿ ನಿಭಾಯಿಸುವುದು ಕಷ್ಟ| ಸತೀಶ್‌ ಜಾರಕಿಹೊಳಿಗೆ ತಲೆ ಸರಿ ಇಲ್ಲ ಬಿಡಿ| ನಾನು ಜಲಸಂಪನ್ಮೂಲ ಸಚಿವನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಎಂಥೆಂಥ ಫಲಿತಾಂಶ ಬರುತ್ತಿವೆ ನೋಡಿ| 


ಕೊಪ್ಪಳ(ಮಾ.14): ಮಾಜಿ ಸಚಿವ, ಕಾಂಗ್ರೆಸ್‌ ಪಕ್ಷದ ನೂತನ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿಗೆ ತಲೆ ಸರಿ ಇಲ್ಲ. ಆತನ ಬಗ್ಗೆ ಏನು ಮಾತನಾಡೋದು ಎಂದು ಅವರ ಸಹೋದರ ಹಾಗೂ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. 

ಮುನಿರಾಬಾದ್‌ನಲ್ಲಿ ನವಲಿ ಸಮನಾಂತರ ಜಲಾಶಯ ನಿರ್ಮಾಣದ ಕುರಿತು ಸಭೆ ನಡೆಸಿದ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಳೆ ಜಲಸಂಪನ್ಮೂಲ ಖಾತೆಯನ್ನು ರಮೇಶ್‌ ಜಾರಕಿಹೊಳಿ ನಿಭಾಯಿಸುವುದು ಕಷ್ಟ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಸ್ವಲ್ಪ ಸಿಟ್ಟಿನಲ್ಲಿಯೇ ಸಚಿವರು ಉತ್ತರಿಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸತೀಶ್‌ ಜಾರಕಿಹೊಳಿಗೆ ತಲೆ ಸರಿ ಇಲ್ಲ ಬಿಡಿ, ನಾನು ಜಲಸಂಪನ್ಮೂಲ ಸಚಿವನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಎಂಥೆಂಥ ಫಲಿತಾಂಶ ಬರುತ್ತಿವೆ ನೋಡಿ, ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ. 
 

click me!