Mandya MLC Election : ಬಿಜೆಪಿ ಸೋಲಿಗೆ ಅಭ್ಯರ್ಥಿಯೇ ಕಾರಣ..! ವಿಡಿಯೋದಿಂದ ವಿಚಲಿತ

Kannadaprabha News   | Asianet News
Published : Dec 26, 2021, 12:45 PM IST
Mandya MLC Election :   ಬಿಜೆಪಿ ಸೋಲಿಗೆ ಅಭ್ಯರ್ಥಿಯೇ ಕಾರಣ..!  ವಿಡಿಯೋದಿಂದ ವಿಚಲಿತ

ಸಾರಾಂಶ

 ಬಿಜೆಪಿ ಸೋಲಿಗೆ ಅಭ್ಯರ್ಥಿಯೇ ಕಾರಣ..!   ಅತ್ತ ವೀಡಿಯೋದಿಂದ ವಿಚಲಿತಗೊಂಡ ಮತದಾರರು  ಫಲಿತಾಂಶಕ್ಕೂ ಸಚಿವ ನಾರಾಯಣಗೌಡರಿಗೂ ಸಂಬಂಧವಿಲ್ಲ

 ಮಂಡ್ಯ (ಡಿ.26):  ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಬಿಜೆಪಿ (BJP) ಸೋಲಿಗೆ ಅಭ್ಯರ್ಥಿ ಬಿ.ಸಿ.ಮಂಜು (BC Manju) ಕಾರಣವೇ ವಿನಃ ಸಚಿವ ಕೆ.ಸಿ.ನಾರಾಯಣ ಗೌಡರದ್ದು (KC Narayana Gowda) ಎಳ್ಳಷ್ಟೂ ಪಾತ್ರವಿಲ್ಲ ಎಂದು ಬಿಜೆಪಿ (BJP) ಗ್ರಾಪಂ ಸದಸ್ಯರು ದೂರಿದರು.  ಕೆ.ಆರ್‌.ಪೇಟೆಯ (KR Pete) ಸಚಿವ ನಾರಾಯಣಗೌಡರ ನಿವಾಸದ ಬಳಿ ಸಭೆ ನಡೆಸಿ, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಬಿ.ಸಿ.ಮಂಜು ಅಂತಿಮ ಘಳಿಗೆಯಲ್ಲಿ ಕಣದಿಂದ ಹಿಂದಕ್ಕೆ ಸರಿದಿದ್ದು ಹಾಗೂ ಅವರು ಅಳುತ್ತಿರುವ ವಿಡಿಯೋಗಳು (Video) ಬಿಡುಗಡೆಯಾಗಿದ್ದರಿಂದ ಮತದಾರರು ವಿಚಲಿತಗೊಂಡರು. ಅಲ್ಲಿಯವರೆಗೂ ಬಿಜೆಪಿ (BJP) ಮತದಾರರೆಲ್ಲರೂ ಒಗ್ಗಟ್ಟಾಗಿದ್ದರು. ಈ ಬೆಳವಣಿಗೆ ನಂತರ ಅವರು ಸ್ವತಂತ್ರವಾಗಿ ನಿರ್ಧಾರ ಕೈಗೊಂಡಿದ್ದರಿಂದ ವ್ಯತಿರಿಕ್ತ ಫಲಿತಾಂಶ ಬಂದಿತು ಎಂದು ಅಭ್ಯರ್ಥಿಯನ್ನೇ ದೂಷಿಸಿದರು.

ಬಿಜೆಪಿ (BJP) ಮುಖಂಡ ಶೀಳನೆರೆ ಅಂಬರೀಶ್‌ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ 6 ತಿಂಗಳಿಂದ ಮತದಾರರ ಸಂಪರ್ಕದಲ್ಲಿದ್ದರು. ಕೊನೆಯ ಘಳಿಗೆಯಲ್ಲಿ ಹಿನ್ನಡೆಯ ಮಾತುಗಳನ್ನಾಡುವ ಮೂಲಕ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದರು. ಇದರ ಹೊರತಾಗಿ ಬಿಜೆಪಿ (BJP) ಬೆಂಬಲಿತ ಅಭ್ಯರ್ಥಿಗಳಾಗಿ ಗೆದ್ದವರು ಯಾವ ಪಕ್ಷದವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ನಾರಾಯಣ ಗೌಡರನ್ನು ತೇಜೋವಧೆ ಮಾಡುವ ಸಲುವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅವರು ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಹೇಳಿದ್ದಾರೆಯೇ ವಿನಃ ಅನ್ಯ ಪಕ್ಷಕ್ಕೆ ಸಹಾಯ ಮಾಡುವಂತೆ ಎಲ್ಲಿಯೂ ಹೇಳಿಲ್ಲ. ಯಾವುದೇ ರೀತಿ ತನಿಖೆ ಮಾಡಿದರೂ ಬಿಜೆಪಿ (BJP) ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಉತ್ತರ ಕೊಡುವುದಕ್ಕೆ ರೆಡಿಯಾಗಿದ್ದೇವೆ. ಈ ಸೋಲಿನ ಹೊಣೆಯನ್ನು ಅಭ್ಯರ್ಥಿ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳುತ್ತೇವೆ ಎಂದರು.

ಚುನಾವಣೆ ದಿನ ಮುಂಜಾನೆ 3 ಗಂಟೆಗೆ ಒಂದು ವೀಡಿಯೊ (Video) ಬಿಟ್ಟರು. ಅದರಲ್ಲಿ ಯಾವುದೋ ಮಠದಲ್ಲಿ ಕುಳಿತು ಅಳುತ್ತಿದ್ದರು. ಅದಾದ ಬಳಿಕ ಏನು ಗೊಂದಲವಾಯಿತು ಎಂದು ಮುಖಂಡರನ್ನು ಸಂಪರ್ಕ ಮಾಡುವ ವೇಳೆಗೆ ಮತ್ತೆ ಬೆಳಗ್ಗೆ 8 ಗಂಟೆಗೆ ಇನ್ನೊಂದು ವೀಡಿಯೊ ಬಿಟ್ಟರು. ಅದರಲ್ಲಿ ಗೊಳೋ ಅಂತ ಅಳುತ್ತಿದ್ದರು. ಏನೋ ಆಗೋಗಿದೆ. ನಾನು ಡಿಪ್ರೆಸ್‌ ಆಗಿದ್ದೇನೆ ಎಂದರು. ಮತದಾರರು ಅಲ್ಲಿಯವರೆಗೂ ವಿಚಲಿತರಾಗಿರಲಿಲ್ಲ. ಪಕ್ಷದ ನಿಷ್ಠೆಗೆ ಬದ್ಧರಾಗಿದ್ದೆವು. ಯಾರು ಏನೇ ಆಮಿಷ ವೊಡ್ಡಿದರೂ ನಮ್ಮ ನಿರ್ಧಾರ ಬದಲಿಸಬಾರದು. ನಮ್ಮ ಪಕ್ಷಕ್ಕೆ ಮತ ಹಾಕಬೇಕು, ಪಕ್ಷದ ಶಕ್ತಿ ಪ್ರದರ್ಶಿಸಬೇಕು ಎಂದು ದೃಢ ನಿರ್ಧಾರ ಮಾಡಿದ್ದೆವು. ಅವರ ಎರಡು ವೀಡಿಯೊಗಳು ಮತದಾರರನ್ನು ವಿಚಲಿತಗೊಳಿಸಿತು ಎಂದು ಗ್ರಾಪಂ ಸದಸ್ಯ ಹರ್ಷ ಹೇಳಿದರು.

ಚುನಾವಣೆಯ ದಿನ ಅಭ್ಯರ್ಥಿಗೆ ಹತ್ತು ಬಾರಿ ಫೋನ್‌ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಸಚಿವರೊಟ್ಟಿಗೆ ಮಾತನಾಡಿದರೂ ಅಭ್ಯರ್ಥಿ ಸಂಪರ್ಕಕ್ಕೆ ಸಿಗಲಿಲ್ಲ. ನಮ್ಮ ಅಭ್ಯರ್ಥಿಯೇ ಹಿಂದೆ ಸರಿದ ಮೇಲೆ ಮತದಾರ ಮತ ಏಕೆ ಹಾಕುತ್ತಾನೆ. ಬಿಜೆಪಿಯವರೆಲ್ಲಾ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕ್ಬಿಟ್ರು ಅಂತ ಜನತಾದಳದವರು ಹೇಳೋದರಲ್ಲಿ ಅರ್ಥವಿಲ್ಲ ಎಂದರು.

ಪಕ್ಷ ನಮ್ಮನ್ನು ಗುರುತಿಸಿ ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಮತದಾರರಿಗೆ ನಾವೆಲ್ಲರೂ ಹೇಳಿದೆವು. ಆದರೆ, ಅವರು ತೆಗೆದುಕೊಂಡ ನಿರ್ಣಯದಿಂದ ನಮಗೆ ಶಾಕ್‌ ಆಯಿತು. ಸಚಿವ ನಾರಾಯಣಗೌಡರು ಜೆಡಿಎಸ್‌ (JDS) ಬಿಟ್ಟು ಬಿಜೆಪಿಗೆ ಬಂದ ಮೇಲೆ ಪಕ್ಷವನ್ನು ಉತ್ತಮ ಸ್ಥಿತಿಗೆ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದ್ದಾರೆ. ನನ್ನಂತೆಯೇ ಜಿಲ್ಲೆಯಿಂದ 3 ರಿಂದ 4 ಜನ ಶಾಸಕರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಬೇಕೆಂಬ ಹಂಬಲದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

- ಲತಾ ಮುರಳಿ, ಬಿಜೆಪಿ ತಾಲೂಕು ಅಧ್ಯಕ್ಷೆ

ತೇಜೋವಧೆಗೆ ಯತ್ನ

ಸಚಿವ ನಾರಾಯಣ ಗೌಡರನ್ನು ತೇಜೋವಧೆ ಮಾಡಲು ಸಂಚು ನಡೆಸಲಾಗುತ್ತಿದೆ. ಅವರೊಬ್ಬ ಪಕ್ಷ ನಿಷ್ಠ ಶಾಸಕರಾಗಿದ್ದಾರೆ. ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ (By Election) ಗೆದ್ದು ಜಿಲ್ಲೆಯಲ್ಲಿ ಕಮಲ (BJP) ಅರಳಿಸಲು ಕಾರಣರಾದ ಅವರೆಂದಿಗೂ ತಮಗೆ ಅಧಿಕಾರ ಕೊಟ್ಟಪಕ್ಷಕ್ಕೆ ದ್ರೋಹ ಬಗೆಯುವವರಲ್ಲ. ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ವಿಪಕ್ಷದವರು ಚಿತಾವಣೆ ನಡೆಸುತ್ತಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಹಿಂದೆ ಸರಿದಿದ್ದೇ ಮತದಾರರನ್ನು ವಿಚಲಿತರನ್ನಾಗಿಸಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಕಾರಣವಾಯಿತು.

- ಶೀಳನೆರೆ ಅಂಬರೀಶ್‌, ಬಿಜೆಪಿ ಮುಖಂಡ

PREV
Read more Articles on
click me!

Recommended Stories

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ
ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!