
ವಿಜಯಪುರ: ಬೆಂಗಳೂರಿನ ಮೆಟ್ರೋ ಯೋಜನೆಯ ಉದ್ಘಾಟನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಮೋದಿಯಿಂದ ರಾಹುಲ್ ಗಾಂಧಿ ಅವರ ಫೋನ್ ಟ್ಯಾಪ್ ಆಗಿದೆ ಎಂಬ ಆರೋಪದ ವಿಚಾರವಾಗಿ ಆಕ್ರೋಶ ಹೊರಹಾಕಿದ್ದಾರೆ.
ಮೋದಿ ಮೆಟ್ರೋ ಉದ್ಘಾಟನೆ ವಿಚಾರದ ಕುರಿತು ಲೇವಡಿ ಮಾಡಿರುವ ಸಚಿವ ಎಂ ಬಿ ಪಾಟೀಲ್, ಬರೀ 7 ಕಿ.ಮೀ ಮೆಟ್ರೋ ಉದ್ಘಾಟನೆಗೆ ಪ್ರಧಾನಿಮಂತ್ರಿಗಳು ಬರುವ ಅವಶ್ಯಕತೆ ಇತ್ತಾ? ನಮ್ಮ ಸಿಎಂ ಡಿ ಕೆ ಶಿವಕುಮಾರ್ ಅವರ ಮುಂದೆಯೆ ಎಲ್ಲವನ್ನ ತೆರೆದಿಟ್ಟಿದ್ದಾರೆ. ಬರ ಪರಿಹಾರ ಕೊಡಿ, ಕಬ್ಬು ರೈತರ MSP ಬಗ್ಗೆ, ಮೆಟ್ರೋದಲ್ಲಿ ರಾಜ್ಯದ ಕೊಡುಗೆ ಏನು, ರೈತರಿಗೆ ಬರ ಪರಿಹಾರವಾಗಿ 22 ಸಾವಿರ ಕೋಟಿ ಬಿಡುಗಡೆ ಮಾಡಿ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬೇಡಿ, ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದಿದ್ದಾರೆ. ನಮ್ಮ ರಾಜ್ಯಕ್ಕೆ ಇಂಡಸ್ಟ್ರಿ ಬಂದಾಗ ಬೇರೆ ರಾಜ್ಯಗಳಿಗೆ ಡೈವರ್ಟ್ ಮಾಡಿದ್ದಾರೆ, ಇದು ಸರಿಯಲ್ಲ. ಎಲ್ಲಾ ರಾಜ್ಯಗಳನ್ನು ಒಂದಾಗಿ ನೋಡಬೇಕು. ಯಾವ ರಾಜ್ಯಗಳ ಮೆರಿಟ್ ಇರುತ್ತೋ, ಆಸಕ್ತಿ ತೋರಿಸಿರುತ್ತಾರೋ ಅಲ್ಲಿ ಇಂಡಸ್ಟ್ರಿ ಹೋಗಬೇಕು. ಪಕ್ಷದ ಆಧಾರದ ಮೇಲೆ ಅಭಿವೃದ್ಧಿ ಮಾಡ್ತಿದ್ದಾರೆ. ಇದೆಲ್ಲವನ್ನ ಸಿಎಂ ಮಾತನಾಡಿದ್ದಾರೆ. ಕೇಂದ್ರ ಸಹಕಾರ ಕೊಟ್ಟ ಮೇಲಷ್ಟೇ 100 ಕಿ.ಮೀ ಮೆಟ್ರೋ ಆಗಿದೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಎಂಬಿಪಾ ರಾಜ್ಯದ ಪಾಲು ಇರುತ್ತೆ, ಕೇಂದ್ರದ ಪಾಲು ಇರುತ್ತೆ. ಮೂರನೇ ಒಂದು ಪಾಲು ಲೋನ್ ಪಾರ್ಟ್ ಇರುತ್ತೆ. ಲೋನ್ ಪಾರ್ಟ್ ಕೇಂದ್ರ ಸರ್ಕಾರದ್ದಲ್ಲ. ಲೋನ್ ಪಾರ್ಟ್ ಅನ್ನು ಸ್ವತಃ ಮೆಟ್ರೋ ನಿಗಮ ತೀರಿಸುತ್ತೆ. ಈಗಾಗಲೇ ಕೃಷ್ಣಬೈರೇಗೌಡ ಎಲ್ಲವನ್ನು ಹೇಳಿದ್ದಾರೆ. ಅವರು ಕೊಟ್ಟಿದ್ದಲ್ಲ ಅದು ಸಾಲ. ನಮ್ಮ ಸಾಲ ನಾವು ತೀರಿಸ್ತೇವೆ. ಅವರ ಸಾಲ ಅವರು ತೀರಿಸ್ತಾರೆ ಎಂದರು.
ಹೇಳಿಕೊಳ್ಳೋದೆ ಆಗಿದ್ರೆ 22 ಸಾವಿರ ಕೋಟಿ ಪರಿಹಾರ ನೀಡಲಿ, ರೈತರ ಕಬ್ಬಿನ MSP ನೀಡಲಿ, ಸೆಮಿ ಇಂಡಸ್ಟ್ರಿಗಳಿಗೆ ಹಣ ನೀಡಲಿ ಎಂದು ಕೇಂದ್ರ ಸರ್ಕಾರಕ್ಕೆ ಎಂ ಬಿ ಪಾಟೀಲ್ ಸವಾಲ್ ಹಾಕಿದರು. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿ ಅದನ್ನು ಕೊಟ್ಟೆ ಇಲ್ಲ. ಕ್ಯಾಬಿನೆಟ್ ನಲ್ಲಿ ಹೇಳಿಯೂ ಸಹ ಕೊಟ್ಟಿಲ್ಲ. ಇನ್ನೂ ಏನು ಉದಾಹರಣೆ ಬೇಕು ಎಂದು ಎಂ ಬಿ ಪಾಟೀಲ್ ಆಕ್ರೋಶ ಹೊರಹಾಕಿದರು.
ಇನ್ನು ಪ್ರಧಾನಿಯಿಂದ ರಾಹುಲ್ ಗಾಂಧಿ ಅವರು ಫೋನ್ ಟ್ಯಾಪಿಂಗ್ ವಿಚಾರವಾಗಿ ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿ, ರಾಹುಲ್ ಗಾಂಧಿ ಅವರಿಗೆ ಟ್ಯಾಪಿಂಗ್ ನ ಅನುಭವ ಆಗಿರಬೇಕು. ಇವಿಎಂ ಟ್ಯಾಂಪರ್ ಮಾಡುವವರಿಗೆ ಫೋನ್ ಟ್ಯಾಪ್ ಮಾಡೋದು ದೊಡ್ಡ ವಿಷಯ ಅಲ್ಲ. ಇಡಿ,ಸಿಬಿಐ ,ಐಟಿ ಬಿಜೆಪಿ ಅಂಡರ್ ಕಂಪನಿಗಳಾಗಿವೆ. ಹೀಗಾಗಿ ಟ್ಯಾಪಿಂಗ್ ಮಾಡಿರೋದು ಅಚ್ಚರಿ ಏನಲ್ಲ. ಇದು ತನಿಖೆ ಆಗಬೇಕು. ಯಾರೊಬ್ಬರ ಪ್ರೈವೇಸಿಗೆ ಧಕ್ಕೆ ಆಗಬಾರದು. ಮೋದಿ ಬಗ್ಗೆ ಜನರು ಹತಾಶಯಗೊಂಡಿದ್ದಾರೆ. ಮೋದಿ ಡೌನ್ ಫಾಲ್ ಶುರುವಾಗಿದೆ. ಹೀಗಾಗಿ ಇಂತಹ ಕೆಲಸ ಮಾಡುವ ಮೂಲಕ ಷಡ್ಯಂತರ ಮಾಡುತ್ತಿದ್ದಾರೆ.
ಮೋದಿ ಜನಪ್ರೀಯತೆಯನ್ನು ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದರಿಂದ ಮೋದಿ ಹತಾಶೆಯಗೊಂಡು ರಾಹುಲ್ ಗಾಂಧಿ ಪೋಬ್ ಟ್ಯಾಪ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.