ಸಿಎಂ BSY ಚುನಾವಣಾ ನಿವೃತ್ತಿ ವಿಚಾರ ನನಗೆ ಗೊತ್ತಿಲ್ಲ : ಸಚಿವ ಮಾಧುಸ್ವಾಮಿ

By Kannadaprabha News  |  First Published Jan 20, 2020, 1:34 PM IST

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಐದು ವರ್ಷ ನಾವೇ ಅಧಿಕಾರ ನಡೆಸುತ್ತೇವೆ ಎಂದಿದ್ದರು. ಆದರೆ ಅವರ ರಾಜಕೀಯ ನಿವೃತ್ತಿ ವಿಚಾರ ನನಗೆ ಗೊತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.


ಹಾಸನ [ಜ.20]: ನಾವೆಲ್ಲರೂ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು. 

"

Latest Videos

undefined

ಹಾಸನದಲ್ಲಿಂದು ಅಧಿಕಾರಿಗಳ ಜೊತೆಗಿನ ಸಭೆಗಾಗಿ ಆಗಮಿಸಿದ್ದ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಮಾಧುಸ್ವಾಮಿ, ಸಿಎಂ ಚುನಾವಣಾ ನಿವೃತ್ತಿ ವಿಚಾರ ನನಗೆ ಗೊತ್ತಿಲ್ಲ ಎಂದ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿದ್ದಾರೆ. 

ವಿದೇಶದಿಂದ ಬಂದು 2 ದಿನಕ್ಕೆ ಸಂಪುಟ ವಿಸ್ತರಣೆ: ಬಿಎಸ್‌ವೈ...

ಕಳೆದ ಎರಡು ದಿನಗಳ ಹಿಂದೆಯಷ್ಟೇ ನಮ್ಮ ಜೊತೆಗೆ ಮಾತಾಡಿದ ಯಡಿಯೂರಪ್ಪ ನಾವೇ ಮತ್ತೆ ಐದು ವರ್ಷ ಸರ್ಕಾರ ಮಾಡುತ್ತೇವೆ ಎಂದಿದ್ದಾರೆ. ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದರು. 

ಕೊನೇವರ್ಗೂ ಬಿಜೆಪಿ ಹೇಳಿದಂಗೆ ಕೇಳಿಕೊಂಡಿರ್ತೀನಿ : ಕೈ ಮುಖಂಡ ಉಗ್ರಪ್ಪ...

ಇನ್ನು ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇದರ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಮುಖ್ಯಮಂತ್ರಿ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ವಾಪಸಾದ ಬಳಿಕ ನಿರ್ಧಾರ ಆಗುತ್ತೆ ಎಂದರು. 

ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದು, ಅಲ್ಲಿಂದ ಮರಳಿದ ಮೇಲೆ ರಾಜ್ಯದಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.

click me!