ಸಚಿವರ ಸೂಚನೆಯಂತೆ ರೈತರಿಗೆ ಪ್ರತಿ ಗುಂಟೆಗೆ ₹3 ಸಾವಿರ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ರೈತರು ಜಮೀನಿನ ಬಾಡಿಗೆ ಹೆಚ್ಚಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಲ್ಲಿ ಮನವಿ ಮಾಡಿದ್ದರು. ಸಚಿವರು ರೈತರ ಮನವಿಗೆ ಸ್ಪಂದಿಸಿದಂತಾಗಿದೆ.
ಬೆಳಗಾವಿ(ಡಿ.01): ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ವಿಧಾನ ಮಂಡಳದ ಅಧಿವೇಶನದ ಸಂದರ್ಭದಲ್ಲಿ ನಡೆಯಲಿರುವ ವಿವಿಧ ಪ್ರತಿಭಟನೆಗಳಿಗೆ ಬಳಸಲಾಗುವ ರೈತರ ಕೃಷಿ ಜಮೀನಿನ ಬಾಡಿಗೆಯನ್ನು ಹೆಚ್ಚಳ ಮಾಡಲಾಗಿದೆ. ರೈತರ ಮನವಿಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಕಳೆದ ವರ್ಷ ಪ್ರತಿಭಟನೆಯ ಟೆಂಟ್ ನಿರ್ಮಾಣಕ್ಕೆ ಬಳಸಲಾಗಿದ್ದ ರೈತರ ಜಮೀನಿಗೆ ಪ್ರತಿ ಗುಂಟೆಗೆ ₹1200 ನೀಡಲಾಗಿತ್ತು. ಆ ಜಮೀನಿನಲ್ಲಿ ಯಾವುದೇ ಫಸಲು ಬೆಳೆದಿರಲಿಲ್ಲ. ಈ ಬಾರಿ ಹಲಗಾ ಗ್ರಾಮದ ರೈತರ 3.28 ಎಕರೆ ಜಮೀನನ್ನು ಪ್ರತಿಭಟನಾ ಟೆಂಟ್‌ಗಾಗಿ ಬಳಸಲಾಗುತ್ತಿದೆ. ಈ ಜಮೀನಿನಲ್ಲಿ ರೈತರು ಫಸಲು ಬೆಳೆದಿದ್ದರಿಂದ ಪ್ರತಿ ಗುಂಟೆಗೆ ₹3 ಸಾವಿರ ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದ್ದರು.
ತಾಯಿ ಸ್ಥಾನದಲ್ಲಿ ನಿಂತು ನಿಮ್ಮ ಬೇಡಿಕೆ ಈಡೇರಿಸುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ