ನೀವ್ ಕರೆದು ಬುದ್ದಿ ಹೇಳ್ತಿರೋ ಇಲ್ಲ ನಾವ್ ಕ್ರಮ ತೆಗೆದುಕೊಳ್ಳೊದಾ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಮಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ಡಿ.04): ಬಜರಂಗದಳ ಸಹ ಸಂಚಾಲಕನ ಮೇಲೆ ನಡೆದಿರುವ ಹಲ್ಲೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು ಮುಸ್ಲೀಂ ಹಿರಿಯರು ಗೂಂಡಾಗಳಿಗೆ ಕರೆದು ಬುದ್ದಿ ಹೇಳದಿದ್ದರೆ ಸರ್ಕಾರವೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಂದು ಮೆಟ್ರೋ ಆಸ್ಪತ್ರೆಯಲ್ಲಿ ಗಾಯಾಳು ಬಜರಂಗದಳದ ಸಹ ಸಂಚಾಲಕ ನಾಗೇಶ್ ನ ಆರೋಗ್ಯ ಕುರಿತು ವಿಚಾರಿಸಲು ಭೇಟಿ ನೀಡ ಸಚಿವ ಈಶ್ವರಪ್ಪ ನಂತರ ಮಾಧ್ಯಮಗಳ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು.
ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ; ಶಿವಮೊಗ್ಗದಲ್ಲಿ ನಿಷೇಧಾಜ್ಞೆ
ನಾಗೇಶ್ ನಿಗೆ ತೀವ್ರತರನಾದ ಹಲ್ಲೆ ನಡೆಸಲಾಗಿದೆ. ಇದು ಮುಸ್ಲೀಂ ಗೂಂಡಗಳ ಕೃತ್ಯವೆಂಬುದು ಸ್ಪಷ್ಟಗೊಂಡಿದೆ. ಹಿಂದೂ ಸಮಾಜ ಬಹಳ ಸಹಿಷ್ಣತೆಯಿಂದ ಈ ಗೂಂಡಾಗಿರಿಯನ್ನ ತಡೆದು ಕೊಂಡು ಬಂದಿದೆ. ಒಬ್ಬನ ಮೇಲೆ ನಾಲ್ಕೈದು ಗೂಂಡಾಗಳು ಹಲ್ಲೆ ನಡೆಸಿದರೆ ಅದು ದೌರ್ಜನ್ಯವೆಸಗಿದಂತೆ ವಿನಃ ಯಾವ ಪುರುಷಾರ್ಥವೂ ಇಲ್ಲ.
ಹಾಗಾಗಿ ಮುಸ್ಲಿ ಹಿರಿಯರು ತಮ್ಮ ಯುವಕರಿಗೆ ಸರಿಯಾದ ಬುದ್ದಿ ಹೇಳಲಿ ಇಲ್ಲ ಸರ್ಕಾರ ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗಳು ಶೀಘ್ರದಲ್ಲಿಯೇ ನಾಗೇಶನ ಮೇಲೆ ಹಲ್ಲೆ ನಡೆಸಿದ ಗೂಂಡಾಗಳನ್ನ ಬಂಧಿಸಲಿದ್ದೇವೆ ಎಂಬ ಭರವಸೆ ನೀಡಿದ್ದಾರೆ. ಸಮರ್ಪಕ ಕೆಲಸ ನಿರ್ವಹಿಸಿದ್ದಾರೆ ಎಂದು ಸಚಿವರು ಪೊಲೀಸರ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.