ಹಿಂದುಳಿದವರು ಅಭಿವೃದ್ಧಿಯಾದ್ರೆ ಮಾತ್ರ ಹಿಂದುತ್ವದ ಅಭಿವೃದ್ಧಿ: ಈಶ್ವರಪ್ಪ

By Kannadaprabha NewsFirst Published Oct 25, 2021, 2:34 PM IST
Highlights

*  ಬಿಜೆಪಿ ಕಾರ್ಯಕರ್ತರು ಬಡವರಿಗಾಗಿ ಯೋಜನೆ ರೂಪಿಸಬೇಕು
*  ದಲಿತರು ಮತ್ತು ಹಿಂದುಳಿದ ವರ್ಗದವರ ಪರಿಸ್ಥಿತಿ ದಯನೀಯ
*  ಶ್ರೀಮಂತರು ತಮ್ಮ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡಬೇಕು  
 

ಆನೇಕಲ್‌(ಅ.25):  ಹಿಂದುಳಿದ ಜಾತಿ ಹಾಗೂ ಸಮುದಾಯದ ಅಭಿವೃದ್ಧಿ ಆದಾಗ ಮಾತ್ರ ಹಿಂದುತ್ವವು ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ತಿಳಿಸಿದ್ದಾರೆ. 

ತಾಲೂಕಿನ ಬೊಮ್ಮಸಂದ್ರದಲ್ಲಿ ಜಿಲ್ಲಾ ಬಿಜೆಪಿ(BJP) ಒಬಿಸಿ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿ, ಹಿಂದುತ್ವವನ್ನು(Hindutva)  ಕಾಪಾಡಿ ಮುನ್ನಡೆಸಬೇಕಾದ ಸಂದಿಗ್ಧತೆಯನ್ನು ಎದುರಿಸಲು ಮೋರ್ಚಾದ ಕಾರ್ಯಕರ್ತರು(Activists) ಬದ್ಧರಾಗಿರಬೇಕು. ಸ್ವಾತಂತ್ರ್ಯ(Freedom) ಬಂದು 7 ದಶಕಗಳಾದರೂ ದಲಿತರು(Dalit) ಮತ್ತು ಹಿಂದುಳಿದ ವರ್ಗದವರ(backward Class) ಪರಿಸ್ಥಿತಿ ದಯನೀಯವಾಗಿದೆ. ವಿದ್ಯೆ, ಉದ್ಯೋಗದ(Job) ಮೂಲಕ ಸಮಾಜದ ಮೇಲ್ಪದರಕ್ಕೆ ತರಲು ಒಬಿಸಿ(OBC) ಮೋರ್ಚಾ ನಿರಂತರ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಸಮುದಾಯದ ಶ್ರೀಮಂತರು ತಮ್ಮ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಡಿಕೆಶಿ ಕಂಡರೆ ಸಿದ್ದುಗೆ ಆಗಲ್ಲ, ಸಿದ್ದು ಡಿಕೆಶಿಗೆ ಹಿಡಿಸಲ್ಲ: ಈಶ್ವರಪ್ಪ

ಬೆಂಗಳೂರು(Bengaluru) ದಕ್ಷಿಣ ಜಿಲ್ಲಾ ಘಟಕ ಬಿಜೆಪಿ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳನ್ನು ಒಬಿಸಿ ವರ್ಗಗಳಿಗೆ ತಲುಪಿಸುವ ಮೂಲಕ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು, ರಾಜ್ಯ ಉಪಾಧ್ಯಕ್ಷ ಎ.ಎಚ್‌. ಬಸವರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್‌ ಬಾಬು, ದೊಡ್ಡಯ್ಯ, ಎಸ್‌.ಮುನಿರಾಜು, ಗೋವಿಂದ ನಾಯ್ಡು, ಎಸ್‌.ಆರ್‌.ಟಿ ಅಶೋಕ್‌ ರೆಡ್ಡಿ ಇತರರಿದ್ದರು.
 

click me!