'ಮಹಾತ್ಮ ಗಾಂಧೀಜಿ ಕನಸು ಕೂಡ ಹಿಂದುತ್ವದ್ದೇ ಆಗಿತ್ತು'

By Web Desk  |  First Published Dec 2, 2019, 10:56 AM IST

ಮಹಾತ್ಮ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಈಶ್ವರಪ್ಪ| ಮಹಾತ್ಮ ಗಾಂಧಿ ಕನಸು ಕೂಡ ಹಿಂದುತ್ವದ್ದೇ ಆಗಿತ್ತು| ಗಾಂಧೀಜಿ ಸಮಾಧಿ ಮೇಲೆ ಹೇ ರಾಮ್ ಅಂತಾ ಬರೆದಿದ್ದಾರೆ| ಹೇ ಅಲ್ಲಾ..., ಹೇ ಯೇಸು... ಅಂತಾ ಬರೆದಿಲ್ಲ| ಮಹಾತ್ಮ ಗಾಂಧಿ ಕನಸೇನು? ರಾಮರಾಜ್ಯ, ಹಿಂದುತ್ವವಾಗಿದೆ| 


ಅಥಣಿ(ಡಿ.02): ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವ ಸಚಿವ ಕೆ ಎಸ್ ಈಶ್ವರಪ್ಪ ಅವರು ಈಗ ಮತ್ತೊಮ್ಮ ಸುದ್ದಿಯಾಗಿದ್ದಾರೆ. ಈ ಬಾರಿ ಮಹಾತ್ಮ ಗಾಂಧೀಜಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಚರ್ಚೆಗೆ ಬಂದಿದ್ದಾರೆ. 

ಭಾನುವಾರ ರಾತ್ರಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ  ಬಿಜೆಪಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಮಾಡಿದ ಅವರು, ಮಹಾತ್ಮ ಗಾಂಧಿ ಕನಸು ಕೂಡ ಹಿಂದುತ್ವದ್ದೇ ಆಗಿತ್ತು ಎಂದು ಹೇಳಿದ್ದಾರೆ. ಗಾಂಧೀಜಿ ಸಮಾಧಿ ಮೇಲೆ ಹೇ ರಾಮ್ ಅಂತಾ ಬರೆದಿದ್ದಾರೆ. ಹೇ ಅಲ್ಲಾ..., ಹೇ ಯೇಸು... ಅಂತಾ ಬರೆದಿಲ್ಲ ಎಂದು ಹೇಳಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾತ್ಮ ಗಾಂಧಿ ಕನಸೇನು? ರಾಮರಾಜ್ಯ, ಹಿಂದುತ್ವವಾಗಿದೆ. ಸುಪ್ರಿಂಕೋರ್ಟ್ ಕೂಡ ಹೇಳಿದೆ ಹಿಂದುತ್ವ ಅಂದರೆ ಜೀವನ ಪದ್ಧತಿ, ಧರ್ಮ ಅಲ್ಲ ಅಂತಾ ಎಂದು ತಿಳಿಸಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಏನೇನೋ ಮಾತನಾಡುತ್ತಿದ್ದಾರೆ.ತಾನು ಹೆಣ್ಣು ಮಗಳು ಅನ್ನೋದನ್ನು ಮರೆತು ಮಾತನಾಡತ್ತಾ ಇದಾರಲ್ಲ ಅಂತಾ ನೋವಾಗುತ್ತಿದೆ ಎಂದು ಹೇಳಿದ್ದಾರೆ. 
 

click me!