ಸಚಿವ ಈಶ್ವರಪ್ಪ ಬಹಿರಂಗವಾಗಿ ಮುಸ್ಲಿಂರ ಕ್ಷಮೆಗೆ ಆಗ್ರಹ| ಈಶ್ವರಪ್ಪ ಮುಸ್ಲಿಂ ಮತದಾರರನ್ನು ಕೀಳಾಗಿ ಕಂಡಿದ್ದಾರೆ| ಕ್ಷಮೆ ಯಾಚಿಸದಿದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ|
ಮಡಿಕೇರಿ: (ಸೆ.18) ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುಸ್ಲಿಂ ಮತದಾರರನ್ನು ಕೀಳಾಗಿ ಕಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ. ಹೀಗಾಗಿ ಈಶ್ವರಪ್ಪ ಅವರು ಬಹಿರಂಗವಾಗಿ ಮುಸ್ಲಿಂರ ಕ್ಷಮೆ ಯಾಚಿಸದಿದ್ದಲ್ಲಿ ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ.ಹ್ಯಾರಿಸ್ ಅವರು, ಮಂತ್ರಿಯಾದವರು ಒಂದು ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗದೆ ಎಲ್ಲರೂ ಒಂದೇ ಎಂದು ಭಾವಿಸಬೇಕು. ಆದರೆ ಸಚಿವ ಈಶ್ವರಪ್ಪ ಪ್ರಚಾರಕ್ಕಾಗಿ ಎಲ್ಲವನ್ನೂ ಮೀರಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೇಶ ಭಕ್ತರಾಗಿರುವ ಮುಸ್ಲಿಂರ ಮನಸ್ಸುಗಳಿಗೆ ಹುಳಿ ಹಿಂಡುವ ನೀಚ ರಾಜಕರಣಕ್ಕೆ ಕೈ ಹಾಕಿರುವ ಸಚಿವ ಈಶ್ವರಪ್ಪ ಅವರ ಕ್ರಮ ಖಂಡನೀಯ. ಭಾರತ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಬಿಜೆಪಿ ತನ್ನ ಮುಖಂಡರು ಮತ್ತು ಸಚಿವರ ಮೂಲಕ ಸಮಾಜವನ್ನು ಒಡೆದು ಆಳುವ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.
ಈ ವೇಳೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಕೆ.ಎಸ್. ಮಹಮ್ಮದ್ ರಫೀಕ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸಿ.ಇ.ಸುಬೇರ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಎಂ.ಎಂ.ಶಾಹಿದ್ ಖಾನ್, ಕುಶಾಲನಗರ ಬ್ಲಾಕ್ ಅಧ್ಯಕ್ಷ ಕೆ.ಇ.ಅಬ್ದುಲ್ ರಜಾಕ್ ಹಾಗೂ ಜಿಲ್ಲಾ ಸಂಯೋಜಕ ಎಂ.ಎ.ಖಲೀಲ್ ಬಾಷಾ ಉಪಸ್ಥಿತರಿದ್ದರು.