ಗೋಮಾಂಸ ವಿಚಾರ: 'ಸಿದ್ದರಾಮಯ್ಯ ಏನು ಬೇಕಾದ್ರು ತಿನ್ನೋದು ಅವರಿಗೆ ಬಿಟ್ಟಿದ್ದು'

Kannadaprabha News   | Asianet News
Published : Feb 17, 2021, 02:15 PM IST
ಗೋಮಾಂಸ ವಿಚಾರ: 'ಸಿದ್ದರಾಮಯ್ಯ ಏನು ಬೇಕಾದ್ರು ತಿನ್ನೋದು ಅವರಿಗೆ ಬಿಟ್ಟಿದ್ದು'

ಸಾರಾಂಶ

ಗೋ ಹತ್ಯೆ ನಿಷೇಧ ಶಾಸನ ತಂದದ್ದು ಇಂದು ನಿನ್ನೆಯದಲ್ಲ| 1964ರಿಂದಲೇ ಈ ಕಾಯ್ದೆ ಜಾರಿಯಲ್ಲಿದೆ| 13 ವರ್ಷ ಮೇಲ್ಪಟ್ಟ ಗೋವುಗಳನ್ನು ಕೊಲ್ಲಬಹುದು ಅಂತಾ ಇದ್ದದನ್ನು ನಾವು ತಿದ್ದುಪಡಿ ಮಾಡಿದ್ದೇವೆ ಅಷ್ಟೆ| ಎಮ್ಮೆ ಮಾಂಸ ಬೇಕಾದರೆ ತಿನ್ನಲು ಬಳಸಿಕೊಳ್ಳಬಹುದು ಅಂತಾ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ: ಮಾಧುಸ್ವಾಮಿ|

ಬಾಗಲಕೋಟೆ(ಫೆ.17): ಈ ದೇಶದಲ್ಲಿ ಪೂಜೆ, ಊಟ ಅವರ ವೈಯಕ್ತಿಕ ಹಕ್ಕಾಗಿದ್ದು, ಸಿದ್ದರಾಮಯ್ಯ ಏನು ಬೇಕಾದರು ತಿನ್ನುವುದು ಅವರಿಗೆ ಬಿಟ್ಟಿದ್ದು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. 
ತೋಟಗಾರಿಕೆ ವಿವಿ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು, ಗೋಮಾಂಸ ತಿನ್ನುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಗೋ ಹತ್ಯೆ ನಿಷೇಧ ಶಾಸನ ತಂದದ್ದು ಇಂದು ನಿನ್ನೆಯದಲ್ಲ. 1964ರಿಂದಲೇ ಈ ಕಾಯ್ದೆ ಜಾರಿಯಲ್ಲಿದೆ. ಆದರೆ, 13 ವರ್ಷ ಮೇಲ್ಪಟ್ಟ ಗೋವುಗಳನ್ನು ಕೊಲ್ಲಬಹುದು ಅಂತಾ ಇದ್ದದನ್ನು ನಾವು ತಿದ್ದುಪಡಿ ಮಾಡಿದ್ದೇವೆ ಅಷ್ಟೆ ಎಂದು ತಿಳಿಸಿದರು. ಎಮ್ಮೆ ಮಾಂಸ ಬೇಕಾದರೆ ತಿನ್ನಲು ಬಳಸಿಕೊಳ್ಳಬಹುದು ಅಂತಾ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾಯ್ದೆಯ ಅನುಷ್ಠಾನಕ್ಕೆ ಎಲ್ಲ ಹಂತದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಕರ್ನಾಟಕ ಕೋವಿಡ್‌ ಮುಕ್ತವಾಗುತ್ತಿದ್ದು, ಸಿನಿಮಾ, ಸಂತೆ, ಜಾತ್ರೆಗಳನ್ನು ಆರಂಭಿಸಲಾಗಿದೆ. ಇಂತಹ ಸಂದರ್ಭದಲ್ಲಿ ಶಾಲೆಗೆ ನಿರ್ಬಂಧ ಹಾಕಿಕೊಂಡು ಬಹಳದಿನ ಇರುವುದು ಒಳ್ಳೆಯದಲ್ಲ. ಶಾಲೆ ಆರಂಭವನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದೆ. ನನ್ನ ಪ್ರಕಾರ ಆನ್‌ಲೈನ್‌ ಕ್ಲಾಸ್‌ ಅಷ್ಟೊಂದು ಯಶಸ್ವಿ ಅನಿಸುತ್ತಿಲ್ಲ. ಮಕ್ಕಳನ್ನು ಎದುರಿಗೆ ಕುರಿಸಿಕೊಂಡು ಪಾಠ ಹೇಳುವುದು ಒಳ್ಳೆಯದು ಎಂದು ಹೇಳಿದ್ದಾರೆ. 

ನನ್ನೆದುರೇ ಗೋಮಾಂಸ ತಿನ್ನಲಿ ನೋಡೋ​ಣ: ಸಿದ್ದರಾಮಯ್ಯಗೆ ಸವಾಲು

ತನಿಖೆಯ ಮೂಲ ಸಿಕ್ಕಿರುವುದರಿಂದಲೇ ದಿಶಾ ರವಿ ಬಂಧನ

ದಿಶಾ ರವಿ ಮೇಲೆ ನಮ್ಮದ್ಯಾರದು ಆಕ್ರೋಶವಿರಲಿಲ್ಲ. ಆದರೆ, ಈ ದೇಶದ ತನಿಖಾ ಸಂಸ್ಥೆಗಳಿಗೆ ಯಾವುದೇ ಮಾಹಿತಿ ಆಧರಿಸಿದ ಮೇಲೆಯೇ ತನಿಖೆಯ ಮೂಲ ಸಿಕ್ಕಿರುತ್ತದೆ. ಹೀಗಾಗಿ ದಿಶಾರವಿ ಬಂಧನವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ದಿಶಾರವಿ ಯಾರು ಅಂತ ಅಮಿತ್‌ ಶಾ ಅವರಿಗೆ ಗೊತ್ತಿತ್ತಾ ಎಂದು ಪ್ರಶ್ನಿಸಿದ ಸಚಿವರು, ತನಿಖೆಯ ವೇಳೆ ಜಾಲ ಇರುವುದರಿಂದಲೇ ಬಂಧನವಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಚಾಚ್‌ರ್‍ಶೀಟ್‌ ಹಾಕುವವರೆಗೆ ನಾವು ಮಾತನಾಡುವುದಕ್ಕೆ ಬರುವುದಿಲ್ಲ. ಆದರೆ, ಕಾಂಗ್ರೆಸ್‌ನವರು ಏಕೆ ಇದನ್ನು ರಾಜಕಾರಣ ಮಾಡಲು ಹೊರಟಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದರು.
 

PREV
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ