'ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು, ಮಾಸ್ಕ್‌ ಧರಿಸಿದ್ದರೆ ಅಂಗಡಿ ಬದುಕಿರುತ್ತಿದ್ದರು'

By Kannadaprabha NewsFirst Published Sep 28, 2020, 8:54 AM IST
Highlights

ಶ್ರದ್ಧಾಂಜಲಿ ಸಭೆಯಲ್ಲಿ ಕಣ್ಣೀರು ಹಾಕುತ್ತಲೇ ಮಾತನಾಡಿದ ಜಗದೀಶ ಶೆಟ್ಟರ್‌| ಬೆಳಗಾವಿ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆ| ಒಂದು ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ, ನಾವೆಲ್ಲರೂ ಇಂದು ಸುರೇಶ ಅಂಗಡಿ ಅವರನ್ನು ಕಳೆದುಕೊಳ್ಳುತ್ತಿರಲಿಲ್ಲ: ಶೆಟ್ಟರ್‌| 

ಬೆಳಗಾವಿ(ಸೆ.28): ನನಗೆ ಏನೂ ಆಗುವುದಿಲ್ಲ ಎಂಬ ಅತೀಯಾದ ಆತ್ಮವಿಶ್ವಾಸದಿಂದ ಮಾಸ್ಕ್‌ ಧರಿಸದೇ ಇದ್ದ ಕಾರಣವೇ ಸುರೇಶ ಅಂಗಡಿ ಅವರ ಆರೋಗ್ಯಕ್ಕೆ ಸಮಸ್ಯೆ ಉಂಟಾಯಿತು ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರು ತಿಳಿದ್ದಾರೆ. 

ಭಾನುವಾರ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕಣ್ಣೀರು ಹಾಕುತ್ತಲೇ ಮಾತನಾಡಿದ ಅವರು, ಒಂದು ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ. ನಾವೆಲ್ಲರೂ ಇಂದು ಸುರೇಶ ಅಂಗಡಿ ಅವರನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. 

ಮಗನ ಅಂತಿಮ ದರ್ಶನ ಇಲ್ಲದ್ದಕ್ಕೆ ಕಣ್ಣೀರಿಟ್ಟ ಅಂಗಡಿ ತಾಯಿ

ನನಗೆ ಯಾವುದೇ ದುಶ್ಚಟಗಳಿಲ್ಲ. ಆದ್ದರಿಂದ ನನಗೆ ಏನೂ ಆಗುವುದಿಲ್ಲ ಎಂದು ಮಾಸ್ಕ್‌ ಧರಿಸುವ ಕುರಿತು ನಿಷ್ಕಾಳಜಿ ವಹಿಸದೇ ಇದ್ದಿದ್ದರೆ ಬದುಕುತ್ತಿದ್ದರೇನೂ ಎಂದು ಭಾವುಕರಾದರು. ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಮಾಸ್ಕ್‌ ಹಾಕಿಕೊಳ್ಳುವಂತೆ ಹಲವು ಬಾರಿ ಹೇಳಿದ್ದೆ ಎಂದರು.
 

click me!