* ಬರೀ ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ಸಿಗರು
* ಮಾಜಿ ಸಿಎಂ ಬಿಎಸ್‌ವೈ, ಸಿಎಂ ಬೊಮ್ಮಾಯಿ ಸಾಕಷ್ಟು ಅನುದಾನ ನೀರಾವರಿಗೆ ನೀಡಿದ್ದಾರೆ
* ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ಯಲಬುರ್ಗಾ(ಫೆ.26): ಕಾಂಗ್ರೆಸ್(Congress) ಅಧಿಕಾರಕ್ಕೆ ಬಂದರೆ ಪ್ರತಿವರ್ಷ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ನೀಡುತ್ತೇವೆ ಎಂದು ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕಾಂಗ್ರೆಸ್‌ನವರು ವಚನ ಭ್ರಷ್ಟರು ಎಂದು ಸಚಿವ ಹಾಲಪ್ಪ ಆಚಾರ್(Halappa Achar) ಹೇಳಿದರು.
ತಾಲೂಕಿನ ಜಿ. ಜರಕುಂಟಿ, ಗೆದಗೇರಿ ಹಾಗೂ ಗೆದಗೇರಿ ತಾಂಡಾ ಗ್ರಾಮಗಳಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್‌ನವರು ತಾವು ಮಾಡಿದ ತಪ್ಪುಗಳನ್ನು ಮರೆಮಾಚಿಸಲು ಬರೀ ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Irrigation Project: 'ಕೊಪ್ಪಳ ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಕೊಡುಗೆ'
ಈ ಹಿಂದೆ ಸಮಿಶ್ರ ಸರ್ಕಾರದಲ್ಲಿ(Coalition Government) ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿಯವರು(HD Kumaraswamy) 210 ಕೋಟಿ ಅನುದಾನ ನೀಡುವ ಮೂಲಕ 2ನೇ ಹಂತದ ನೀರಾವರಿ ಯೋಜನೆಗೆ ಚಾಲನೆ ನೀಡಿದರು. ಅಲ್ಲದೇ ಮಾಜಿ ಸಿಎಂ ಯಡಿಯೂರಪ್ಪನವರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರು(Basavaraj Bommai) ಸಾಕಷ್ಟು ಅನುದಾನವನ್ನು ನೀರಾವರಿಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ತಹಸೀಲ್ದಾರ್ ಶ್ರೀಶೈಲ್ ತಳವಾರ, ಗ್ರಾಪಂ ಅಧ್ಯಕ್ಷರಾದ ಸುಮಾ ಎಸ್. ಪೊಲೀಸಪಾಟೀಲ್, ನಿಂಗಮ್ಮ ಕಲ್ಲೂರು ಹಾಗೂ ಉಪಾಧ್ಯಕ್ಷ ಶರಣಪ್ಪ ಕೊಪ್ಪದ, ಮುಖಂಡರಾದ ಬಸವಲಿಂಗಪ್ಪ ಭೂತೆ, ಶಿವಶಂಕರರಾವ ದೇಸಾಯಿ, ಅಯ್ಯನಗೌಡ ಕೆಂಚಮ್ಮನವರ, ಕಳಕಯ್ಯ ಹಿರೇಮಠ, ರುದ್ರಪ್ಪ ನಡುವಲಮನಿ, ಮಂಜುನಾಥ ಮಾಸ್ತಿ, ಬಸವರಾಜ ಜರಕುಂಟಿ, ಶರಣಪ್ಪ ಹಿರೇಮನಿ, ದೇವರಾಜ ದೊಡ್ಮನಿ, ಶಂಕರಗೌಡ ಪೊಲೀಸಪಾಟೀಲ, ಅಧಿಕಾರಿಗಳಾದ ಮಹೇಶ ಎಚ್. ಹೇಮಂತರಾಜ, ಪಿಡಿಒಗಳಾದ ರಮೇಶ ಹೊಸ್ಮನಿ, ಫಕೀರಪ್ಪ ಕಟ್ಟಿಮನಿ ಹಾಗೂ ಗ್ರಾಪಂ ಸದಸ್ಯರು ಇದ್ದರು.
'ದೇಶದ ಅಭಿವೃದ್ಧಿ ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ'
ಯಲಬುರ್ಗಾ: ಮಾಜಿ ಸಚಿವರು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿತುಕೊಳ್ಳಲಿ, ಎಲ್ಲರಿಗೂ ಗೌರವ ಎನ್ನುವುದು ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದರು.
ಕಳೆದ ವರ್ಷ ನ.12 ರಂದು ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ(BJP) ಕಚೇರಿ ಆವರಣದಲ್ಲಿ ನಡೆದ ಬಿಜೆಪಿ ವಿಧಾನ ಪರಿಷತ್ ಚುನಾವಣೆ(Vidhan Parishat Election) ನಿಮಿತ್ತ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದ ಅವರು, ನಂತರ ಕ್ಷೇಮಾಪಣ ಪತ್ರ ಬರೆಯುತ್ತಾರೆ. ಇತಂಹ ಕಾಂಗ್ರೆಸ್(Congress) ನಾಯಕ ಅಧಿಕಾರದ ಹತಾಸೆಯಿಂದ ಈ ರೀತಿ ಮಾತನಾಡುತ್ತಾರೆ ಎಂದರು.
ಕಾಂಗ್ರೆಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು, ಯಾವುದೇ ದಾಖಲೆಗಳಿಲ್ಲದೇ ವಿನಾಕಾರಣ ಆರೋಪ ಮಾಡುವುದರಲ್ಲಿ ಮಹಾಶೂರರು. ಬುಡ ಬುಡುಕೆ ಆಡಿಸುವ ಕಾಂಗ್ರೆಸ್‌ನವರು ಉತ್ತರ ಕರ್ನಾಟಕವನ್ನು ಸತ್ಯಾನಾಶ ಮಾಡಿ ರೈತ ವಿರೋಧಿಗಳಾಗಿದ್ದಾರೆ. ಇಂತಹವರು ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಬಗ್ಗೆ ಮಾತನಾಡುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ. ದೇಶದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಹಾಗೂ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಪಕ್ಷದ ನಾಯಕರು ಗುರುತಿಸುವಂತ ಬಿಜೆಪಿ ಅಭ್ಯರ್ಥಿಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದ್ದರು.
Corona 3rd Wave: ಕೋವಿಡ್‌ನಿಂದ ಮೃತಪಟ್ಟವರಿಗೆ ಶೀಘ್ರ ಪರಿಹಾರ: ಸಚಿವ ಆಚಾರ್
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಚಂದ್ರಶೇಖರಗೌಡ ಪಾಟೀಲ್,ಸಿ.ಎಚ್.ಪಾಟೀಲ್, ಶರಣಪ್ಪ ಬಣ್ಣದ ಬಾ ವಿ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಕಳಕಪ್ಪ ಕಂಬಳಿ,ಯಲಬುರ್ಗಾ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಮಾರುತಿ ಗಾವರಾಳ,ಬಸವನಗೌಡ ತೊಂಡಿಹಾಳ, ಮಂಜುನಾಥ ಗಟ್ಟೆಪ್ಪನವರ್, ಅಯ್ಯ ನಗೌಡ ಕೆಂಚಮ್ಮನವರ್, ಸಂಗಪ್ಪ ಬಂ ಡಿ, ಸುಧಾಕರ ದೇಸಾಯಿ, ರಸೂಲ್‌ಸಾಬ ದಮ್ಮೂರ ಸೇರಿದಂತೆ ಬಿಜೆಪಿ ಬೆಂ ಬಲಿತ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.