ನಿಮ್ಮ ಹೆಂಡತಿ, ಮಕ್ಕಳಿಗೂ ಇಂತಹದ್ದೇ ಆಹಾರ ಧಾನ್ಯ ಕೊಡ್ತೀರಾ? ಸಚಿವ ಗೋಪಾಲಯ್ಯ ಕೆಂಡಾಮಂಡಲ..!

By Suvarna News  |  First Published Jun 11, 2020, 11:31 AM IST

ಯರಗೋಳ ಗ್ರಾಮದ ನ್ಯಾಯಬೆಲೆ ಅಂಗಡಿ ಪರಿಶೀಲಿಸಿದ ಸಚಿವ ಗೋಪಾಲಯ್ಯ| ಕೃಷಿ ಸಹಕಾರಿ ಸಂಘದ ಗೋದಾಮಿಗೆ ಭೇಟಿ ಅಲ್ಲಿ ನೀಡಲಾಗುತ್ತಿದ್ದ ಕಳಪೆ ಗುಣಮಟ್ಟದ ತೊಗರಿ ಬೇಳೆ ದಾಸ್ತಾನನ್ನು ಕಂಡು ಕೋಪಗೊಂಡು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು|


ಯಾದಗಿರಿ(ಜೂ.11): ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ತೊಗರಿಬೇಳೆ ನೀಡುತ್ತಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವ ಗೋಪಾಲಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಮೀಪದ ಯರಗೋಳ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. 

ಸಚಿವ ಗೋಪಾಲಯ್ಯ ಇಂದು ತಾಲೂಕಿನ ಯರಗೋಳ ಗ್ರಾಮದ ನ್ಯಾಯಬೆಲೆ ಅಂಗಡಿ ಪರಿಶೀಲಿಸಿದ ನಂತರ, ಅಲ್ಲಿನ ಕೃಷಿ ಸಹಕಾರಿ ಸಂಘದ ಗೋದಾಮಿಗೆ ಭೇಟಿ ನೀಡಿದ್ದರು. ಅಲ್ಲಿ ನೀಡಲಾಗುತ್ತಿದ್ದ ಕಳಪೆ ಗುಣಮಟ್ಟದ ತೊಗರಿ ಬೇಳೆ ದಾಸ್ತಾನನ್ನು ಕಂಡು ಕೋಪಗೊಂಡು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Tap to resize

Latest Videos

undefined

ಯಾದಗಿರಿ: ಕಬ್ಬು ಖರೀದಿ ಹಣ ನೀಡದ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

ನಿಮ್ಮ ಹೆಂಡತಿ ಮಕ್ಕಳಿಗೆ ಇಂತಹುದ್ದೇ ಆಹಾರ ಧಾನ್ಯ ಕೊಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದ ಸಚಿವ ಗೋಪಾಲಯ್ಯ, ಸಾರ್ವಜನಿಕರಿಗೆ ಈಗಿನ ತೊಗರಿ ಬೇಳೆಯನ್ನು ಕೊಡುವುದನ್ನು ನಿಲ್ಲಿಸಿ, ಉತ್ತಮ ಗುಣಮಟ್ಟದ ತೊಗರಿ ಬೇಳೆ ನೀಡುವಂತೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. 
 

click me!