'ಹೆಚ್‌ಡಿಕೆ ಅವಕಾಶವಾದಿ ರಾಜಕಾರಣಿ, ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ'

By Suvarna News  |  First Published Feb 26, 2021, 2:58 PM IST

ಸಿಎಂ ಆಗಿದ್ದಾಗ ಕುಮಾರಸ್ವಾಮಿ ಉಡಾಫೆಯಾಗಿ ವರ್ತಿಸಿದ್ದರು| ಕುಮಾರಸ್ವಾಮಿಗೆ ಆತಂಕ ಕಾಡುತ್ತಿದೆ| ದಿನ ಬೆಳಗೆದ್ದು ಕುಮಾರಸ್ವಾಮಿ ಜನರ ಕಡೆ ಹೋಗುತ್ತಿದ್ದಾರೆ| ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಅಧಿಕಾರ ಇಲ್ಲದಾಗ ಜನರ ಬಳಿ ಹೋಗಿ ಗೋಳಾಡುವುದು, ಕಣ್ಣೀರು ಹಾಕುವುದು ಅವರ ಗುಣವಾಗಿಬಿಟ್ಟಿದೆ: ಯೋಗೇಶ್ವರ್‌| 


ಮಂಗಳೂರು(ಫೆ.26):  ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಓರ್ವ ಅವಕಾಶವಾದಿ ರಾಜಕಾರಣಿಯಾಗಿದ್ದಾರೆ. ಕುಮಾರಸ್ವಾಮಿ ಒಂದು ತರಹ ಜೋಕರ್ ಆಗಿದ್ದಾರೆ. ಯಾವ ಪಾರ್ಟಿಯಾದರೂ ಅಡ್ಜೆಸ್ಟ್ ಮೆಂಟ್ ಆಗುತ್ತಾರೆ. ಕುಮಾರಸ್ವಾಮಿಗೆ ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ ಎಂದು ಹೆಚ್‌ಡಿಕೆ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ್ ಹರಿಹಾಯ್ದಿದ್ದಾರೆ. 

"

Tap to resize

Latest Videos

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿದ್ದಾಗ ಕುಮಾರಸ್ವಾಮಿ ಉಡಾಫೆಯಾಗಿ ವರ್ತಿಸಿದ್ದರು. ಕುಮಾರಸ್ವಾಮಿಯವರಿಗೆ ಆತಂಕ ಕಾಡುತ್ತಿದೆ. ದಿನ ಬೆಳಗೆದ್ದು ಕುಮಾರಸ್ವಾಮಿ ಜನರ ಕಡೆ ಹೋಗುತ್ತಿದ್ದಾರೆ. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಅಧಿಕಾರ ಇಲ್ಲದಾಗ ಜನರ ಬಳಿ ಹೋಗಿ ಗೋಳಾಡುವುದು, ಕಣ್ಣೀರು ಹಾಕುವುದು ಅವರ ಗುಣವಾಗಿಬಿಟ್ಟಿದೆ ಎಂದು ಹೇಳಿದ್ದಾರೆ. 

ಮಂಗಳೂರು ಪೊಲೀಸರ ವಿರುದ್ಧವೇ ಸಿಐಡಿ ತನಿಖೆ.!

2023ರ ಚುನಾವಣೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ನೆಲಕಚ್ಚುತ್ತದೆ. ಹೀಗಾಗಿ ಕುಮಾರಸ್ವಾಮಿ ಆತಂಕದಲ್ಲಿದ್ದಾರೆ ಎಂದಿದ್ದಾರೆ. 
 

click me!