ಕಾನೂನು ಚೌಕ​ಟ್ಟಲ್ಲೇ ಒಕ್ಕ​ಲಿ​ಗರ ಮೀಸ​ಲಾತಿ ನಿರ್ಧಾರ: ಅ​ಶ್ವತ್ಥ ನಾರಾ​ಯಣ

By Kannadaprabha News  |  First Published Dec 25, 2022, 2:00 AM IST

ರಾಜ್ಯ ಒಕ್ಕಲಿಗ ಸಂಘ ಹಾಗೂ ಆದಿಚುಂಚ​ನ​ಗಿರಿ ಮಠಾ​ಧೀಶ ಶ್ರೀ ನಿರ್ಮ​ಲಾ​ನಂದನಾಥ ಸ್ವಾಮೀಜಿ ಒಂದೂವರೆ ವರ್ಷ​ದ ಹಿಂದೆಯೇ ಮೀಸಲಾತಿ ಬಗ್ಗೆ ಪ್ರಸ್ತಾ​ಪಿ​ಸಿ​ದ್ದರು. ಇದರ ಬಗ್ಗೆ ಆಗಿಂದಾಗ್ಗೆ ಚರ್ಚೆ​ಗಳು ಆಗು​ತ್ತಿವೆ ಎಂದ ಸಚಿವ ಡಾ.ಸಿ.ಎನ್‌.ಅ​ಶ್ವತ್ಥ ನಾರಾ​ಯಣ 


ರಾಮ​ನ​ಗರ(ಡಿ25): ಒಕ್ಕ​ಲಿಗ ಸಮು​ದಾ​ಯಕ್ಕೆ ಮೀಸ​ಲಾತಿ ಹೆಚ್ಚಳದ ಚರ್ಚೆ ಒಂದೂ​ವರೆ ವರ್ಷ​ಗ​ಳಿಂದ ನಡೆ​ಯು​ತ್ತಿದ್ದು, ಇದು ರಾಜ​ಕೀಯ ಪ್ರೇರಿತ ಅಲ್ಲ. ಸರ್ಕಾರ ಕಾನೂನು ಚೌಕ​ಟ್ಟಿ​ನಲ್ಲಿ ಮೀಸ​ಲಾತಿ ಕುರಿತು ಸರ್ಕಾರ ನಿರ್ಧಾರ ಕೈಗೊ​ಳ್ಳ​ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅ​ಶ್ವತ್ಥ ನಾರಾ​ಯಣ ಹೇಳಿದರು.

ಶನಿವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ನಗ​ರಾ​ಭಿ​ವೃದ್ಧಿ ಹಾಗೂ ಕೈಗಾ​ರಿ​ಕೆ​ಗಳ ಸ್ಥಾಪ​ನೆ​ ಸೇರಿ ಬೇರೆ ಬೇರೆ ಕಾರ​ಣ​ಗ​ಳಿಂದಾಗಿ ಗ್ರಾಮೀಣ ಭಾಗ​ಗ​ಳಲ್ಲಿ ಒಕ್ಕ​ಲಿ​ಗರು ಜಮೀನು ಕಳೆ​ದು​ಕೊ​ಳ್ಳು​ತ್ತಿ​ದ್ದಾರೆ. ತುಂಡು ಭೂಮಿ​ಯಲ್ಲಿ ಕೃಷಿ ಮಾಡಿ ಬದುಕು ರೂಪಿ​ಸಿ​ಕೊ​ಳ್ಳು​ವು​ದೂ ಸವಾ​ಲಾಗಿ​ದೆ. ಅನೇಕ ಸಮ​ಸ್ಯೆ​ಗಳೂ ಇವೆ. ಹೀಗಾಗಿ ಅವ​ರಿ​ಗೆಲ್ಲ ಮೀಸ​ಲಾತಿ ಮೂಲಕ ಬದುಕು ಕಲ್ಪಿ​ಸ​ಬೇ​ಕಿದೆ. ಕಾನೂನು ಚೌಕ​ಟ್ಟಿ​ನಲ್ಲಿ ಆ ಕೆಲಸ ಮಾಡಬೇಕಿದೆ ಎಂದ​ರು.

Tap to resize

Latest Videos

ಶೀಘ್ರ ವರದಿ ಸಲ್ಲಿಕೆಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ: ಸಿಎಂ ಬೊಮ್ಮಾಯಿ

ಒಕ್ಕ​ಲಿಗ ನಾಯ​ಕತ್ವ ಹಾಗೂ ಚುನಾ​ವಣೆ ಸಲು​ವಾಗಿ ಮೀಸ​ಲಾತಿ ಪ್ರಶ್ನೆ ಎತ್ತಿ​ದ್ದಾ​ರೆಂಬ ಯತ್ನಾಳ್‌ ಹೇಳಿ​ಕೆಗೆ ಉತ್ತ​ರಿ​ಸಿದ ಸಚಿ​ವರು, ರಾಜ್ಯ ಒಕ್ಕಲಿಗ ಸಂಘ ಹಾಗೂ ಆದಿಚುಂಚ​ನ​ಗಿರಿ ಮಠಾ​ಧೀಶ ಶ್ರೀ ನಿರ್ಮ​ಲಾ​ನಂದನಾಥ ಸ್ವಾಮೀಜಿ ಒಂದೂವರೆ ವರ್ಷ​ದ ಹಿಂದೆಯೇ ಮೀಸಲಾತಿ ಬಗ್ಗೆ ಪ್ರಸ್ತಾ​ಪಿ​ಸಿ​ದ್ದರು. ಇದರ ಬಗ್ಗೆ ಆಗಿಂದಾಗ್ಗೆ ಚರ್ಚೆ​ಗಳು ಆಗು​ತ್ತಿವೆ ಎಂದರು.

click me!