ಒಬ್ಬರಿಗೆ ಒಂದು ಹುದ್ದೆ ಪಕ್ಷದ ಅಲಿಖಿತ ನಿಯಮ: ಸಿ.ಟಿ.ರವಿ

By Kannadaprabha News  |  First Published Oct 3, 2020, 9:41 AM IST

ರಾಷ್ಟ್ರೀಯ ರಾಜ​ಕಾ​ರಣಕ್ಕೆ ಹೋಗುವ ಆಪೇಕ್ಷೆ ಇರ​ಲಿಲ್ಲ| ಇದು ನನಗೆ ಅನಿ​ರೀ​ಕ್ಷಿತವಾಗಿ ಸಿಕ್ಕಿ​ರುವ ಜವಾ​ಬ್ದಾರಿ| ಪಕ್ಷ ಹೇಳಿದ ಕೂಡಲೇ ಸಚಿವ ಸ್ಥಾನಕ್ಕೆ ರಾಜೀ​ನಾಮೆ: ಸಿ.ಟಿ. ರವಿ| 


ಚಿಕ್ಕಮಗಳೂರು(ಅ.03): ಒಬ್ಬರಿಗೆ ಒಂದು ಹುದ್ದೆ, ಇದು ಪಕ್ಷದೊಳಗಿನ ಅಲಿಖಿತ ನಿಯಮ. ಕೆಲವು ಸಂದರ್ಭಗಳಲ್ಲಿ ವರಿಷ್ಠರು ಈ ನಿಯಮವನ್ನು ಬದಲಾವಣೆ ಮಾಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದು, ಈ ವಿಷಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 75 ವರ್ಷ ಆದ ನಂತರ ಅಧಿಕಾರ ರಾಜಕಾರಣದಿಂದ ನಿವೃತ್ತಿ ಎಂಬುದು ಸಹ ಇದೆ. ಇದೂ ಕೂಡಾ ಅಲಿಖಿತ ನಿಯಮದ ಒಂದು ಭಾಗ, ಈ ಅಲಿಖಿತ ನಿಯಮ ಕೆಲವೊಮ್ಮೆ ಬದಲಾಯಿಸುವುದು ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ ಎಂದು ತಿಳಿಸಿದರು.

Tap to resize

Latest Videos

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಖುಷಿಯಲ್ಲಿ ಸಿ.ಟಿ. ರವಿ ಎಡವಟ್ಟು

ರಾಷ್ಟ್ರೀಯ ರಾಜಕಾರಣ ವೈಯಕ್ತಿಕ ಆಸಕ್ತಿಯಿಂದ ಬಂದಿರುವುದಲ್ಲ, ನನ್ನ ನಿರೀಕ್ಷೆಯೂ ಇರಲಿಲ್ಲ, ಅಪೇಕ್ಷೆಯೂ ವ್ಯಕ್ತಪಡಿಸಿರಲಿಲ್ಲ. ಆಕಸ್ಮಿಕವಾಗಿ ಬಂದಿರುವ ಅವಕಾಶ. ಅನಂತಕುಮಾರ್‌ ಅವರಿಗೆ ಈ ಜವಾಬ್ದಾರಿ ಸಿಕ್ಕಿತ್ತು. ನಂತರ ಈ ಸ್ಥಾನ ಚಿಕ್ಕಮಗಳೂರಿಗೆ ಸಿಕ್ಕಿದೆ. ಸಾರ್ವಜನಿಕ ಜೀವನದಲ್ಲಿ ಕೆಲವು ಕಾಲಘಟ್ಟದಲ್ಲಿ ಹಲವು ಅನಿರೀಕ್ಷಿತ ತಿರುವುಗಳು ಸಿಕ್ಕಿವೆ ಎಂದರು.
 

click me!