'ಮುನಿರತ್ನ ಒಂದೂವರೆ ತಿಂಗಳಲ್ಲಿ ಸಚಿವರಾಗುತ್ತಾರೆ'

By Kannadaprabha News  |  First Published Jan 15, 2021, 12:48 PM IST

ನಮ್ಮೊಂದಿಗೆ ಮುನಿರತ್ನ, ಎಚ್‌.ವಿಶ್ವನಾಥ್‌ ಎಲ್ಲರೂ ಬಂದಿದ್ದಾರೆ. ಈ ಕಾರಣಕ್ಕೆ ಮುನಿರತ್ನಗೂ ಅವಕಾಶ ಸಿಗಲಿದೆ| ಎಚ್‌.ವಿಶ್ವನಾಥರಿಗೂ ಸಚಿವ ಸ್ಥಾನ ಕೈತಪ್ಪಿದೆ| ವಿಶ್ವನಾಥ್‌ ಅವರ ಪ್ರಕರಣ ಕೋರ್ಟ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ: ಬೈರತಿ ಬಸವರಾಜ್‌| 


ದಾವಣಗೆರೆ(ಜ.15): ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಸಿಗಬೇಕಿತ್ತಾದರೂ, ಕಾರಣಾಂತರದಿಂದ ಸಿಕ್ಕಿಲ್ಲ. ಇನ್ನು ಒಂದೂವರೆ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುನಿರತ್ನಗೆ ಸಚಿವ ಸ್ಥಾನ ನೀಡುವರೆಂಬ ವಿಶ್ವಾಸವಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ತಿಳಿಸಿದರು. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೊಂದಿಗೆ ಮುನಿರತ್ನ, ಎಚ್‌.ವಿಶ್ವನಾಥ್‌ ಎಲ್ಲರೂ ಬಂದಿದ್ದಾರೆ. ಈ ಕಾರಣಕ್ಕೆ ಮುನಿರತ್ನಗೂ ಅವಕಾಶ ಸಿಗಲಿದೆ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

ಅತೃಪ್ತರು ಹೈಕಮಾಂಡ್‌ಗೆ ದೂರು ಕೊಡಿ: ಸಿಎಂ ಸವಾಲು 

ಎಚ್‌.ವಿಶ್ವನಾಥರಿಗೂ ಸಚಿವ ಸ್ಥಾನ ಕೈತಪ್ಪಿದೆ. ವಿಶ್ವನಾಥ್‌ ಅವರ ಪ್ರಕರಣ ಕೋರ್ಟ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. 
 

click me!